ಚಿಕ್ಕಬಳ್ಳಾಪುರ: ಗಂಡನ ಕೈ-ಕಾಲು ಮುರಿದು ವಿಕೃತವಾಗಿ ಕೊಲೆ; ನೌಟಂಕಿ ಪತ್ನಿ ಅರೆಸ್ಟ್​

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಒಂದು ಭಯಾಕನ ಘಟನೆ ನಡೆದಿದೆ. ತನ್ನ ಗಂಡನನ್ನು ಕೊಲೆ ಮಾಡಿ ನಾಟಕವಾಡಿದ್ದ ಕಿಲಾಡಿ ಹೆಂಡತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ಕು ಜನರು ಎಸ್ಕೇಪ್ ಆಗಿದ್ದು, ಪೊಲೀಸರು ಎರಡು ತಂಡಗಳನ್ನ ರಚನೆ ಮಾಡಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಚಿಕ್ಕಬಳ್ಳಾಪುರ: ಗಂಡನ ಕೈ-ಕಾಲು ಮುರಿದು ವಿಕೃತವಾಗಿ ಕೊಲೆ; ನೌಟಂಕಿ ಪತ್ನಿ ಅರೆಸ್ಟ್​
ಕೊಲೆಯಾದ ಪತಿ, ಬಂಧಿತ ಪತ್ನಿ
Image Credit source: tv9 kannada
Edited By:

Updated on: Mar 28, 2026 | 7:59 PM

ಚಿಕ್ಕಬಳ್ಳಾಪುರ, ಮಾರ್ಚ್​ 28: ಮಂಚದ ಮೇಲಿದ್ದ ಗಂಡ (Husband) ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು  ಪೊಲೀಸರ ಮುಂದೆ ಕಥೆ ಕಟ್ಟಿ, ಏನು ಗೊತ್ತಿಲ್ಲದಂತೆ ಮಳ್ಳಿಯಂತೆ ನಟಿಸಿದ್ದ ಕಿಲಾಡಿ ಮಹಿಳೆಯೇ ತನ್ನ ಗಂಡನನ್ನು ವಿಕೃತವಾಗಿ ಕೊಲೆ (kill) ಮಾಡಿರುವುದು ಇದೀಗ ಬಯಲಾಗಿದೆ. ಸದ್ಯ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು? 

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯ ಬಾಡಿಗೆ ಮನೆಯಲ್ಲಿದ್ದ ಶಿವಕುಮಾರ್ ಅಲಿಯಾಸ್ ಸಾದೀಕ್ ಪಾಷ, ಮನೆಯ ಮಂಚದ ಮೇಲೆ ಶವವಾಗಿದ್ದರು. ಅವರ ಪತ್ನಿ ರೇಷ್ಮಾ ಪೊಲೀಸರು ಹಾಗೂ ಗಂಡನ ಸಂಬಂಧಿಕರಿಗೆ ಕರೆ ಮಾಡಿ, ಅಯ್ಯಯ್ಯೋ ನನ್ನ ಗಂಡ, ಮುದ್ದು ಗುಂಡ ಮನೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಗೋಳೋ ಅಂತ ಅತ್ತಿದ್ದಾರೆ.

ಇದನ್ನೂ ಓದಿ: ಸಕಲೇಶಪುರದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ: ಕೈಮುಗಿದರೂ ಬಿಡದ ಕಿಡಿಗೇಡಿಗಳು

ಇತ್ತ ಸ್ಥಳಕ್ಕೆ ಬಂದ ಗೌರಿಬಿದನೂರು ನಗರ ಠಾಣೆ ಪೊಲೀಸರು, ಪರಿಶೀಲನೆ ಮಾಡಿದ್ದಾರೆ. ರೇಷ್ಮಾ ಹೇಳಿರುವುದು ಒಂದಾಗಿದ್ದರೆ, ಅಲ್ಲಿ ನಡೆದಿದ್ದೇ ಇನ್ನೊಂದಾಗಿತ್ತು. ಹೀಗಾಗಿ ಅನುಮಾನ ವ್ಯಕ ಹಿನ್ನೆಲೆ  ಪೊಲೀಸರು ರೇಷ್ಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಭಯಾನಕ ಸತ್ಯ ಬಯಲಾಗಿದೆ.

ಪೊಲೀಸರೇ ಶಾಕ್​​

ಇನ್ನು ಪೊಲೀಸರಿಗೆ ಮನೆಯಲ್ಲಿ ಕಂಡದ್ದು ಭಯಾನಕ ದೃಶ್ಯ. ಶಿವಕುಮಾರ್ ಅಲಿಯಾಸ್ ಸಾದೀಕ್ ಪಾಷನ ಕೈ-ಕಾಲು ತಿರುವಲಾಗಿತ್ತು. ಸೊಂಟ ಮುರಿಯಲಾಗಿತ್ತು. ಮೈಮೇಲೆ ರಕ್ತದ ಕಲೆಗಳಿತ್ತು. ಮನೆಯನ್ನು ಆ್ಯಸಿಡ್ ಹಾಕಿ ತೊಳೆಯಲಾಗಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು, ಮೃತನ ಪತ್ನಿ ರೇಷ್ಮಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾಗ ಸತ್ಯ ಬಯಲಾಗಿದ್ದು, ಸ್ವತಃ ಆತನ ಪತ್ನಿ ಹಾಗೂ ಆಕೆಯ ತಮ್ಮ ಶಾರುಕ್ ಸೇರಿದಂತೆ 5 ಜನ ಸೇರಿ ಕೊಲೆ ಮಾಡಿದ್ದು ಬಯಲಾಗಿದೆ. ಗಂಡ ತನಗೆ ಕಿರಕುಳ ಕೊಡುತ್ತಿದ್ದಾನೆಂದು ಆತನ ಹತ್ಯೆ ಮಾಡಗಿದೆ.

ಇದನ್ನೂ ಓದಿ: ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!

ಇನ್ನೂ ಗೌರಿಬಿದನೂರು ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ನಿ ರೇಷ್ಮಾಳನ್ನು ಬಂಧಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ಕು ಜನರು ಎಸ್ಕೇಪ್ ಆಗಿದ್ದು, ಪೊಲೀಸರು ಎರಡು ತಂಡಗಳನ್ನ ರಚನೆ ಮಾಡಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us