ಚಿಕ್ಕಮಗಳೂರು: ಇಂಗ್ಲೆಂಡ್ ಪ್ರಜೆ ಹೆರಾಲ್ಡ್ಗೆ ಅಯೋಧ್ಯೆಯ ಆಹ್ವಾನ ಮಂತ್ರಾಕ್ಷತೆ; ಹೆರಾಲ್ಡ್ ಹೇಳಿದ್ದೇನು?
ದೇಶಾದ್ಯಂತ ಹಿಂದೂಗಳ ಮನೆಮನೆಗಳಿಗೆ ತೆರಳಿ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ನೀಡಲಾಗುತ್ತಿದೆ. ಹಿಂದೂಗಳಿಗೆ ಮಾತ್ರವಲ್ಲದೆ, ಅನ್ಯ ಧರ್ಮೀಯರಿಗೂ ನೀಡಲಾಗುತ್ತಿದೆ. ಇದೀಗ ವಿದೇಶಿ ವ್ಯಕ್ತಿಯೊಬ್ಬರಿಗೆ ಮಂತ್ರಾಕ್ಷತೆ ನೀಡಲಾಗಿದೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ, ಸೈಕಲ್ನಲ್ಲೇ 25 ದೇಶಗಳನ್ನು ಸುತ್ತಿದ ಇಂಗ್ಲೆಂಡ್ ಪ್ರಜೆ ಹೆರಾಲ್ಡ್ ಅವರಿಗೆ ಮಂತ್ರಾಕ್ಷತೆಯನ್ನು ನೀಡಲಾಗಿದೆ. ಮಂತ್ರಾಕ್ಷತೆ ಸ್ವೀಕರಿಸಿದ ಅವರು ಹೇಳಿದ್ದೇನು ನೋಡಿ.
ಚಿಕ್ಕಮಗಳೂರು, ಜ.11: ದೇಶಾದ್ಯಂತ ಹಿಂದೂಗಳ ಮನೆಮನೆಗಳಿಗೆ ತೆರಳಿ ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಮಂತ್ರಾಕ್ಷತೆಯನ್ನು ನೀಡಲಾಗುತ್ತಿದೆ. ಹಿಂದೂಗಳಿಗೆ ಮಾತ್ರವಲ್ಲದೆ, ಅನ್ಯ ಧರ್ಮೀಯರಿಗೂ ನೀಡಲಾಗುತ್ತಿದೆ. ಇದೀಗ ವಿದೇಶಿ ವ್ಯಕ್ತಿಯೊಬ್ಬರಿಗೆ ಮಂತ್ರಾಕ್ಷತೆ (Mantrakshate) ನೀಡಲಾಗಿದೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ, ಇಂಗ್ಲೆಂಡ್ ಪ್ರಜೆ ಹೆರಾಲ್ಡ್ ಅವರಿಗೆ ಮಂತ್ರಾಕ್ಷತೆಯನ್ನು ನೀಡಲಾಗಿದೆ.
ಕೈಯಲ್ಲಿ ಓಂ ಎಂದು ಹಚ್ಚೆ ಹಾಕಿಸಿಕೊಂಡಿರುವ ಹೆರಾಲ್ಡ್ ಅವರು ಸೈಕಲ್ ಮೂಲಕವೇ 25 ದೇಶಗಳನ್ನು ಸುತ್ತಿದ್ದು, ಭಾರತಕ್ಕೆ 9ನೇ ಬಾರಿ ಭೇಟಿ ನೀಡಿದ್ದಾರೆ. ಅದರಂತೆ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೆಣಸಿನಹಾಡ್ಯದ ಜನರು ಹೆರಾಲ್ಡ್ ಅವರಿಗೆ ಆತಿಥ್ಯ ನೀಡಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ ಎಲ್ಕೆ ಅಡ್ವಾಣಿ
ಮನೆಮನೆಗಳಿಗೆ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆ ವಿತರಿಸಲಾಗುತ್ತಿದ್ದು, ಈ ವೇಳೆ ಹೆರಾಲ್ಡ್ ಅವರಿಗೂ ಮಂತ್ರಾಕ್ಷತ್ರೆ ನೀಡಲಾಗಿದೆ. ಮಂತ್ರಾಕ್ಷತೆ ಸ್ವೀಕರಿಸಿದ ಹೆರಾಲ್ಡ್, ಅದನ್ನು ಇಂಗ್ಲೆಂಡ್ಗೆ ಕೊಂಡೊಯ್ಯುವುದಾಗಿ ಹೇಳಿದ್ದಾರೆ. ಅಲ್ಲದೆ, ಹಿಂದೂ ಧರ್ಮ, ಭಗವದ್ಗೀತೆ, ಅಯೋಧ್ಯೆ, ಶ್ರೀರಾಮನ ಬಗ್ಗೆ ಹೆರಾಲ್ಡ್ಗೆ ಅವರಿಗೆ ವಾಸೇಗೌಡ, ಸಂಪತ್ ಎಂಬುವರು ಇಂಗ್ಲಿಷ್ನಲ್ಲೇ ಮಾಹಿತಿ ನೀಡಿದರು. ಹೆರಾಲ್ಡ್ ಅವರು ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 am, Thu, 11 January 24