ಚಿಕ್ಕಮಗಳೂರು: ಇಂಗ್ಲೆಂಡ್‌ ಪ್ರಜೆ ಹೆರಾಲ್ಡ್​ಗೆ ಅಯೋಧ್ಯೆಯ ಆಹ್ವಾನ ಮಂತ್ರಾಕ್ಷತೆ; ಹೆರಾಲ್ಡ್ ಹೇಳಿದ್ದೇನು?

ದೇಶಾದ್ಯಂತ ಹಿಂದೂಗಳ ಮನೆಮನೆಗಳಿಗೆ ತೆರಳಿ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ನೀಡಲಾಗುತ್ತಿದೆ. ಹಿಂದೂಗಳಿಗೆ ಮಾತ್ರವಲ್ಲದೆ, ಅನ್ಯ ಧರ್ಮೀಯರಿಗೂ ನೀಡಲಾಗುತ್ತಿದೆ. ಇದೀಗ ವಿದೇಶಿ ವ್ಯಕ್ತಿಯೊಬ್ಬರಿಗೆ ಮಂತ್ರಾಕ್ಷತೆ ನೀಡಲಾಗಿದೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ, ಸೈಕಲ್​ನಲ್ಲೇ 25 ದೇಶಗಳನ್ನು ಸುತ್ತಿದ ಇಂಗ್ಲೆಂಡ್ ಪ್ರಜೆ ಹೆರಾಲ್ಡ್ ಅವರಿಗೆ ಮಂತ್ರಾಕ್ಷತೆಯನ್ನು ನೀಡಲಾಗಿದೆ. ಮಂತ್ರಾಕ್ಷತೆ ಸ್ವೀಕರಿಸಿದ ಅವರು ಹೇಳಿದ್ದೇನು ನೋಡಿ.

ಚಿಕ್ಕಮಗಳೂರು: ಇಂಗ್ಲೆಂಡ್‌ ಪ್ರಜೆ ಹೆರಾಲ್ಡ್​ಗೆ ಅಯೋಧ್ಯೆಯ ಆಹ್ವಾನ ಮಂತ್ರಾಕ್ಷತೆ; ಹೆರಾಲ್ಡ್ ಹೇಳಿದ್ದೇನು?
ಇಂಗ್ಲೆಂಡ್‌ ಪ್ರಜೆ ಹೆರಾಲ್ಡ್​ಗೆ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ
Edited By: Rakesh Nayak Manchi

Updated on: Jan 11, 2024 | 10:00 AM

ಚಿಕ್ಕಮಗಳೂರು, ಜ.11: ದೇಶಾದ್ಯಂತ ಹಿಂದೂಗಳ ಮನೆಮನೆಗಳಿಗೆ ತೆರಳಿ ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಮಂತ್ರಾಕ್ಷತೆಯನ್ನು ನೀಡಲಾಗುತ್ತಿದೆ. ಹಿಂದೂಗಳಿಗೆ ಮಾತ್ರವಲ್ಲದೆ, ಅನ್ಯ ಧರ್ಮೀಯರಿಗೂ ನೀಡಲಾಗುತ್ತಿದೆ. ಇದೀಗ ವಿದೇಶಿ ವ್ಯಕ್ತಿಯೊಬ್ಬರಿಗೆ ಮಂತ್ರಾಕ್ಷತೆ (Mantrakshate) ನೀಡಲಾಗಿದೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ, ಇಂಗ್ಲೆಂಡ್ ಪ್ರಜೆ ಹೆರಾಲ್ಡ್ ಅವರಿಗೆ ಮಂತ್ರಾಕ್ಷತೆಯನ್ನು ನೀಡಲಾಗಿದೆ.

ಕೈಯಲ್ಲಿ ಓಂ ಎಂದು ಹಚ್ಚೆ ಹಾಕಿಸಿಕೊಂಡಿರುವ ಹೆರಾಲ್ಡ್ ಅವರು ಸೈಕಲ್ ಮೂಲಕವೇ 25 ದೇಶಗಳನ್ನು ಸುತ್ತಿದ್ದು, ಭಾರತಕ್ಕೆ 9ನೇ ಬಾರಿ ಭೇಟಿ ನೀಡಿದ್ದಾರೆ. ಅದರಂತೆ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೆಣಸಿನಹಾಡ್ಯದ ಜನರು ಹೆರಾಲ್ಡ್​ ಅವರಿಗೆ ಆತಿಥ್ಯ ನೀಡಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ ಎಲ್​ಕೆ ಅಡ್ವಾಣಿ

ಮನೆಮನೆಗಳಿಗೆ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆ ವಿತರಿಸಲಾಗುತ್ತಿದ್ದು, ಈ ವೇಳೆ ಹೆರಾಲ್ಡ್ ಅವರಿಗೂ ಮಂತ್ರಾಕ್ಷತ್ರೆ ನೀಡಲಾಗಿದೆ. ಮಂತ್ರಾಕ್ಷತೆ ಸ್ವೀಕರಿಸಿದ ಹೆರಾಲ್ಡ್, ಅದನ್ನು ಇಂಗ್ಲೆಂಡ್​ಗೆ ಕೊಂಡೊಯ್ಯುವುದಾಗಿ ಹೇಳಿದ್ದಾರೆ. ಅಲ್ಲದೆ, ಹಿಂದೂ ಧರ್ಮ, ಭಗವದ್ಗೀತೆ, ಅಯೋಧ್ಯೆ, ಶ್ರೀರಾಮನ ಬಗ್ಗೆ ಹೆರಾಲ್ಡ್​ಗೆ ಅವರಿಗೆ ವಾಸೇಗೌಡ, ಸಂಪತ್ ಎಂಬುವರು ಇಂಗ್ಲಿಷ್​ನಲ್ಲೇ ಮಾಹಿತಿ ನೀಡಿದರು. ಹೆರಾಲ್ಡ್ ಅವರು ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:59 am, Thu, 11 January 24

Ashwith Mavinaguni

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
Follow Us