AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಲಕ್ಷ್ಮಿ ಹಣವನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡಿದ ಮಹಿಳೆ, ಬಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್ ಮುಖಂಡನಿಂದ ಧನಸಹಾಯ

ನಿನ್ನೆ ಯುಗಾದಿ ಹಬ್ಬದಿನದಂದು ಹಾವೇರಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುವ ಗೃಹಲಕ್ಷ್ಮೀ ಯೋಜನೆ ಹಣವನ್ನು ಕೂಡಿಟ್ಟು ಮನೆಗೆ ಫ್ರಿಜ್ ಖರೀದಿಸಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ಆದಿಯಾಗಿ ಕಾಂಗ್ರೆಸ್ ನಾಯಕರು ಯೋಜೆನ ಸಾರ್ಥಕವಾಯ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮತ್ತೋರ್ವ ಮಹಿಳೆ ಗೃಹಲಕ್ಷ್ಮೀಯಿಂದ ಬಂದ ಹಣವನ್ನು ದೇಣಿಯಾಗಿ ಕಾಂಗ್ರೆಸ್ ಅಭ್ಯರ್ಥಿಗೆ ನೀಡಿ ಗಮನಸೆಳೆದಿದ್ದಾರೆ. ಇನ್ನು ಅಚ್ಚರಿ ಎಂಬಂತೆ ಬಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್​ ಮುಖಂಡ ದೇಣಿಗೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಗೃಹಲಕ್ಷ್ಮಿ ಹಣವನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡಿದ ಮಹಿಳೆ, ಬಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್ ಮುಖಂಡನಿಂದ ಧನಸಹಾಯ
TV9 Web
| Edited By: |

Updated on: Apr 10, 2024 | 6:01 PM

Share

ಚಿಕ್ಕಮಗಳೂರು, (ಏಪ್ರಿಲ್ 10): ಸಿದ್ದರಾಮಯ್ಯ (Siddaramaiah) ನೇತೃತ್ವದ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ(gruhalakshmi yojana)  ಮನೆ ಯಜಮಾನಿಗೆ ನೀಡುವ 2000 ಹಣವನ್ನು ಮಹಿಳೆಯೊಬ್ಬರು ಉಡುಪಿ ಚಿಕ್ಕಮಗಳೂರು (Udupi Chikkamagaluru) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗಡೆ (jayaprakash hegde) ಅವರಿಗೆ ನೀಡಿದ್ದಾರೆ. ಚಿಕ್ಕಮಗಳೂರು ನಗರದ 10ನೇ ವಾರ್ಡಿನಲ್ಲಿ ಪ್ರಚಾರಕ್ಕೆ ಬಂದ ವೇಳೆ ಪುಷ್ಪಾವತಿ ಎಂಬ ಮಹಿಳೆ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಬಂದ 2000 ರೂಪಾಯಿ ಹಣವನ್ನ ಚುನಾವಣೆ ಖರ್ಚಿಗೆ ಬಳಸಿಕೊಳ್ಳಿ ಎಂದು ಜಯಪ್ರಕಾಶ್ ಹೆಗಡೆ ಅವರಿಗೆ ದೇಣಿಗೆ ನೀಡಿದ್ದಾರೆ ಅಲ್ಲದೇ ಸರ್ಕಾರ ನಮಗೆ ಗ್ಯಾರಂಟಿ ನೀಡಿದೆ. ಗ್ಯಾರಂಟಿಯಿಂದ ಅನುಕೂಲವಾಗಿದೆ. ಈ ಹಣವನ್ನು ನಿಮ್ಮ ಚುನಾವಣಾ ಖರ್ಚಿಗೆ ಬಳಸಿಕೊಂಡು ಗೆಲುವು ಸಾಧಿಸಿ ಇನ್ನಷ್ಟು ಉತ್ತಮ ಕೆಲಸ ಮಾಡಿ ಎಂದು ಶುಭ ಹಾರೈಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​ ಮುಖಂಡರೊಬ್ಬರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿಗೆ ಅವರಿಗೆ ದೇಣಿಗೆ ನೀಡಿದ್ದು, ಇದು ಅಚ್ಚರಿಗೆ ಕಾರಣವಾಗಿದೆ.

ಬಿಜೆಪಿ ಅಭ್ಯರ್ಥಿಗೂ ಹರಿದುಬಂದ ದೇಣಿಗೆ

ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗಡೆ ಅವರಿಗೆ ಮಹಿಳೆಯೊಬ್ಬರು 2000 ದೇಣಿಗೆ ನೀಡಿದ ಬೆನ್ನಲ್ಲೇ ಇತ್ತು ಬಿಜೆಪಿ ಅಭ್ಯರ್ಥಿಗೂ ಸಹ ದೇಣಿಗೆ ಹರಿದುಬಂದಿದೆ. ಅಜ್ಜಂಪುರ ಕಾಂಗ್ರೆಸ್ ತಾಲೂಕು ಉಪಾಧ್ಯಕ್ಷ ಸೀತಾರಾಮ್ ರಿಂದ 25 ಸಾವಿರ ಹಣಸಹಾಯ, ಪುರಸಭೆ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್ ಎಂಬುವರಿಂದ 25 ಸಾವಿರ ರೂ, ಚಂದ್ರಪ್ಪ ಎಂಬುವರಿಂದಲೂ 25 ಸಾವಿರ ರೂಪಾಯಿ. ಹೀಗೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು, ನಿವೃತ್ತ ಯೋಧರು ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಹಣ ಸಹಾಯ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ಮುಖಂಡರೇ ಹಣ ಸಹಾಯಕ ಮಾಡಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಹಾವೇರಿ: ಗೃಹಲಕ್ಷ್ಮೀ ಯೋಜನೆ ಹಣ ಕೂಡಿಟ್ಟು ಫ್ರಿಜ್ ಖರೀದಿಸಿದ ಮಹಿಳೆ

ಇನ್ನು ಪ್ರಚಾರದ ವೇಳೆ ಚಿಕ್ಕಮಗಳೂರು ನಗರದ ತೇಗೂರು ಸರ್ಕಲ್ ನಲ್ಲಿರುವ ಚುರುಮುರಿ ವ್ಯಾಪಾರಸ್ಥನೋರ್ವ ಕೋಟ ಶ್ರೀನಿವಾಸ ಪೂಜಾರಿಗೆ ತಾಂಬೂಲದೊಂದಿಗೆ 25000 ರೂ. ಹಣವನ್ನ ದೇಣಿಗೆಯನ್ನಾಗಿ ನೀಡಿ ಗೆಲುವು ಸಾಧಿಸುವಂತೆ ಹಾರೈಸಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ