ಸಿಟಿ ರವಿಗೆ ಲೋಕಸಭೆ ಟಿಕೆಟ್ ನೀಡುವಂತೆ ಪಟ್ಟು: ಬಿವೈ ವಿಜಯೇಂದ್ರಗೆ ಮನವಿ ಮಾಡಿದ ಕಾರ್ಯಕರ್ತರು
ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಇಂದು ಮಾಜಿ ಶಾಸಕ ಸಿಟಿ ರವಿ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಚಿಕ್ಕಮಗಳೂರು, ಉಡುಪಿ ಎಂಪಿ ಟಿಕೆಟ್ ಕೊಡಿ ಸರ್ ಎಂದು ಬಿವೈ ವಿಜಯೇಂದ್ರರಿಗೆ ಸಿಟಿ ರವಿ ಮುಂದೆಯೇ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಮಾತನಾಡುವುದಾಗಿ ವಿಜಯೇಂದ್ರ ಹೇಳಿದ್ದಾರೆ.

ಚಿಕ್ಕಮಗಳೂರು, ಜನವರಿ 31: ಮಾಜಿ ಶಾಸಕ ಸಿಟಿ ರವಿ (Ct Ravi) ನಿವಾಸಕ್ಕೆ ಇಂದು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಭೇಟಿ ನೀಡಿದ್ದಾರೆ. ಈ ವೇಳೆ ಚುನಾವಣೆ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗುತ್ತಿದೆ. ಬಳಿಕ ಚಿಕ್ಕಮಗಳೂರು, ಉಡುಪಿ ಎಂಪಿ ಟಿಕೆಟ್ ಸಿಟಿ ರವಿ ಅವರಿಗೆ ಕೊಡಿ ಸರ್ ಎಂದು ಬಿ.ವೈ ವಿಜಯೇಂದ್ರರಿಗೆ ಸಿಟಿ ರವಿ ಮುಂದೆಯೇ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಒಂದು ಅವಕಾಶ ಸಿಟಿ ರವಿ ಅವರಿಗೆ ಕೂಡಿಸಿ. ನಾವು ಗೆಲ್ಲಿಸುತ್ತೇವೆ ಎಂದು ಮನವಿ ಮಾಡಿದ್ದಾರೆ. ನಾವು ನಿಮ್ಮ ಬಳಿಗೆ ನಿಯೋಗ ಕರೆದುಕೊಂಡು ಬರುತ್ತೇವೆ. ಸಿ.ಟಿ ರವಿಗೆ ಲೋಕಸಭಾ ಟಿಕೆಟ್ ಕೊಡಲೇಬೇಕು ಎಂದು ಪಟ್ಟು ಹಿಡಿದರು. ಆಯ್ತು ಮಾತನಾಡುತ್ತೇವೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಸಿಟಿ ರವಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಸಲುವಾಗಿ ಹೈಕಮಾಂಡ್, ಇತ್ತೀಚೆಗೆ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಆದರೆ ಬದಲಾದ ರಾಜಕೀಯ ವಿದ್ಯಮಾನಗಳಿಂದ ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಯಿತು. ಹೀಗಾಗಿ ಸದ್ಯ ಸಿಟಿ ರವಿ ಅವರಿಗೆ ಪಕ್ಷದ ಯಾವುದೇ ಹುದ್ದೆ ಇಲ್ಲದ ಖಾಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಟಿ ರವಿ ಅವರಿಗೆ ಈ ಬಾರಿ ಲೋಕಸಭಾ ಟಿಕೆಟ್ ನೀಡುವ ಬಗ್ಗೆಯೂ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.
ಆದರೆ ಯಾವ ಕ್ಷೇತ್ರದಿಂದ ಕಣಕ್ಕಿಳಿಸಬೇಕೆಂಬ ಗೊಂದಲ ಉಂಟಾಗಿದೆ. ಉಡುಪಿ ಚಿಕ್ಕಮಗಳೂರು ಟಿಕೆಟ್ ನೀಡಬೇಕೆಂದರೆ ಹಾಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಇದ್ದಾರೆ. ಇನ್ನು ಸದಾನಂದಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರಿಂದ ಬೆಂಗಳೂರು ಉತ್ತರಕ್ಕೆ ಸಿಟಿ ರವಿ ಅವರನ್ನು ನಿಲ್ಲಿಸಬೇಕು ಮಾತುಗಳು ಸಹ ಕೇಳಿಬರುತ್ತಿವೆ.
ಜ್ಞಾನವ್ಯಾಪಿ ಕುರಿತು ಕೋರ್ಟ್ ಆದೇಶ ಹಿನ್ನೆಲೆ ಸಿಟಿ ರವಿ ಸಂತಸ
ಜ್ಞಾನವ್ಯಾಪಿ ಕುರಿತು ಕೋರ್ಟ್ ಆದೇಶ ಹಿನ್ನೆಲೆ ಸಿಟಿ ರವಿ ಸಂತಸ ವ್ಯಕ್ತಪಡಿಸಿದ್ದು, ಅಧರ್ಮದ ವಿರುದ್ಧ ನ್ಯಾಯ ಗೆಲ್ಲಲೇ ಬೇಕು. ಯಾವತ್ತಿದ್ದರೂ ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತೆ. ಅಧರ್ಮದ ಪರ ಕಾಂಗ್ರೆಸ್ ಹೋಗಿದ್ದಕ್ಕೆ ಧೂಳಿಪಟವಾಗಿದೆ. ಮತಾಂಧರು, ಪಾಪಿಗಳು ಹಿಂದೂ ದೇವಾಲಯಗಳನ್ನು ಹೊಡೆದಿದ್ದರೂ ಕಾಂಗ್ರೆಸ್ ಈ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಮತ ಹಾಕದಿದ್ದರೆ ಗ್ಯಾರಂಟಿಗಳು ರದ್ದು: ಮಾಗಡಿ ಶಾಸಕ ಬಾಲಕೃಷ್ಣ ಎಚ್ಚರಿಕೆಗೆ ವಿಜಯೇಂದ್ರ ತಿರುಗೇಟು
ಈಗ ಸಿದ್ದರಾಮಯ್ಯನವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲೇಬೇಕು. ಔರಂಗಜೇಬನ ಪರ ನಿಂತ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಈಗ ಔರಂಗಜೇಬನ ಪರ ನಿಲ್ಲುತ್ತೋ, ಇಲ್ಲ ಶುಭ ಭಕ್ತರ ಪರ ನಿಲ್ಲುತ್ತು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಿಷ್ಟು
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ನವರು ದೇಶ-ರಾಜ್ಯದ ಜನರ ಕ್ಷಮೆ ಕೇಳಬೇಕು. ಆ ಧ್ವಜಸ್ತಂಭ ನಿರ್ಮಿಸಿದ್ದೇ ರಾಮಧ್ವಜ ಹಾರಿಸಬೇಕೆಂದು ಅವರ ಭಾವನೆ ವಿರುದ್ಧ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಜ.26ರಂದು ಅಲ್ಲಿ ರಾಷ್ಟ್ರಧ್ವಜ ಹಾರಿಸಿ, ಗೌರವ ಕೊಟ್ಡಿದ್ದಾರೆ. ರಾಷ್ಟ್ರಧ್ವಜಕ್ಕೆ ಅಗೌರ ತೋರಿರುವುದು ಕಾಂಗ್ರೆಸ್ ಸರ್ಕಾರ.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗೆ ಗ್ಯಾರಂಟಿಯೇ ಇಲ್ಲ; ಕಾಂಗ್ರೆಸ್ ವಿರುದ್ಧ ಪ್ರಲ್ಹಾದ್ ಜೋಶಿ ಕಿಡಿ
ಸರ್ಕಾರಕ್ಕೆ ರಾಷ್ಟ್ರಧ್ವಜವನ್ನ ಹೇಗೆ ಹಾರಿಸಬೇಕೆಂದು ಗೊತ್ತಿಲ್ಲ. ರಾಮಭಕ್ತರು ಸರ್ಕಾರದ ನಡವಳಿಕೆಯನ್ನ ಗಮನಿಸುತ್ತಿದೆ. ಹನುಮ ಧ್ವಜ ವಿರೋಧಿಸೋದು ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:26 pm, Wed, 31 January 24




