
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕು ಕಚೇರಿ ಬಳಿ ನೆರೆ ಸಂತ್ರಸ್ತರು ವಿಷ ಸೇವಿಸಿ, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಾಲೂಕು ಕಚೇರಿ ಬಳಿ ಅಶ್ವತ್ಥ್ ಎಂಬುವವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಗೂ ಸುರೇಶ್ ಎಂಬುವವರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನೆರೆ ಪೀಡಿತ ಮಲೆಮನೆ, ಮದುಗುಂಡಿ ಸಂತ್ರಸ್ತರು ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರದಿಂದ ನೂರಾರು ಕೋಟಿ ಅನುದಾನ ಬಂದಿದ್ರು ಜಿಲ್ಲಾಡಳಿತ ಪರಿಹಾರ ನೀಡಿಲ್ಲ. 2019ರಲ್ಲಿ ಭಾರಿ ಮಳೆಯಿಂದ ಬೆಳೆ, ಮನೆಗಳು ಹಾನಿಯಾಗಿದ್ದವು. ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಮೂಡಿಗೆರೆ ತಾಲೂಕು ಕಚೇರಿಯೊಳಗೆ ನುಗ್ಗಿ ಆತ್ಮಹತ್ಯೆಗೆ ಯತ್ನಿಸಲಾಗಿದೆ. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದು ಸಂತ್ರಸ್ತರು ಮತ್ತು ಪೊಲೀಸರ ಜೊತೆ ವಾಗ್ವಾದವಾಗಿದೆ.
ಇದನ್ನೂ ಓದಿ: “ನನ್ನ ಸಾವಿಗೆ ಯುವತಿ ಕಾರಣ”; ಬಿಯರ್ ಬಾಟಲ್ನಿಂದ ತಲೆಗೆ ಚಚ್ಚಿಕೊಂಡು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
2019ರ ಆಗಸ್ಟ್ನಲ್ಲಿ ಸುರಿದ ಮಹಾಮಳೆಗೆ ಮಲೆಮನೆಯ 5 ಮನೆ ಹಾಗೂ 2 ದೇವಸ್ಥಾನಗಳು ಕೊಚ್ಚಿ ಹೋಗಿದ್ದವು. ತೋಟ, ವಾಹನ, ಮನೆಯಲ್ಲಿದ್ದ ಸಾಮಾನು, ಹಣ, ಅಮೂಲ್ಯವಾದ ಆಭರಣ ಎಲ್ಲವೂ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದವು. 11 ಕುಟುಂಬಗಳು ಬದುಕು ಕಳೆದುಕೊಂಡಿವೆ. ಗ್ರಾಮಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಬದುಕು ಕಟ್ಟಿಕೊಡುವ ಭರವಸೆ ನೀಡಿದ್ದರು. ಕಳೆದ ವರ್ಷದ ಮಳೆಗಾಲದಲ್ಲಿ ಉಸ್ತುವಾರಿ ಸಚಿವರಾಗಿದ್ದ ಎಸ್.ಅಂಗಾರ ಅವರೂ ಕೂಡಾ ಜಿಲ್ಲಾಡಳಿತದ ಜೊತೆಗೆ ಬಂದು ಪುನರ್ವಸತಿಯ ಭರವಸೆ ನೀಡಿದ್ದರು. ಮನೆ ಕಳೆದುಕೊಂಡಿದ್ದ ನೆರೆಸಂತ್ರಸ್ತರಿಗೆ ಒಂದು ಲಕ್ಷ ಪರಿಹಾರ ನೀಡಲಾಗಿತ್ತು. ಆದರೆ ನಾಲ್ಕು ವರ್ಷ ಕಳೆದರೂ ಪುನರ್ವಸತಿ ಕಲ್ಪಿಸದೇ ಇರುವುದರಿಂದ ನೆರೆಸಂತ್ರಸ್ತರ ಬದುಕು ಅತಂತ್ರವಾಗಿದೆ.
ನಾಲ್ವ ವರ್ಷವಾದರೂ ಸರ್ಕಾರ ನೀಡಿದ ಅನುದಾನವನ್ನು ಜಿಲ್ಲಾಡಳಿ ಸಂತ್ರಸ್ತರಿಗೆ ನೀಡುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ಪರಿಹಾರ ನೀಡುವಂತೆ ಪ್ರತಿಭಟನೆ ನಡೆಸಿದ್ದು ಆತ್ಮಹತ್ಯೆಗೆ ಯತ್ನ ನಡೆದಿದೆ. ಸದ್ಯ ಪೊಲೀಸರು ಘಟನಾಸ್ಥಳದಲ್ಲಿ ನಡೆಯಬಹುದಿದ್ದ ಭಾರೀ ಅವಘಡವನ್ನು ತಪ್ಪಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:16 pm, Fri, 10 February 23