ಕಾಫಿನಾಡಲ್ಲಿ ಮತ್ತೊಂದು ದರ್ಗಾ V/S ದೇವಾಲಯ ದಂಗಲ್; 200 ವರ್ಷ ಪುರಾತನ ದರ್ಗಾವನ್ನು ದೇವಾಲಯವೆಂದು ಹೋರಾಟಕ್ಕಿಳಿದ ಹಿಂದೂ ಸಂಘಟನೆಗಳು

ಹಿಂದೂ ಮುಸ್ಲಿಂರ ಭಾವೈಕ್ಯತೆಯ ಕೇಂದ್ರವಾಗಿರುವ ದರ್ಗಾದಲ್ಲಿ ಇಂದಿನಿಂದ ಉರುಸ್ ಆರಂಭವಾಗಲಿದೆ. ಇದರ ನಡುವೆ ಹಿಂದೂ ಸಂಘಟನೆಗಳ ವಿವಾದ ಎದ್ದಿದ್ದು ದರ್ಗಾದ ಸುತ್ತಮುತ್ತ ಪೋಲಿಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಕಾಫಿನಾಡಲ್ಲಿ ಮತ್ತೊಂದು ದರ್ಗಾ V/S ದೇವಾಲಯ ದಂಗಲ್; 200 ವರ್ಷ ಪುರಾತನ ದರ್ಗಾವನ್ನು ದೇವಾಲಯವೆಂದು ಹೋರಾಟಕ್ಕಿಳಿದ ಹಿಂದೂ ಸಂಘಟನೆಗಳು
ಹಜರತ್ ಸೈಯದ್ ಬಾದ್ ಷಾ ದರ್ಗಾ
Follow us
ಆಯೇಷಾ ಬಾನು
|

Updated on:Mar 13, 2023 | 9:55 AM

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತ್ತೊಂದು ದರ್ಗಾ V/S ದೇವಾಲಯ ದಂಗಲ್ ಶುರುವಾಗಿದೆ(Dargah vs Temple Fight) . ಚಿಕ್ಕಮಗಳೂರು ತಾಲೂಕಿನ ಮಹಜಿದ್ ಗ್ರಾಮದಲ್ಲಿರುವ ಪುರಾತನ ದರ್ಗಾದ ವಿರುದ್ಧ ಹಿಂದೂ ಸಂಘಟನೆಗಳು ರೊಚ್ಚಿಗೆದ್ದಿದ್ದು ಇದು ದರ್ಗಾವಲ್ಲ, ದೇವಾಲಯ ಎಂದು ಹೋರಾಟಕ್ಕೆ ಇಳಿದಿದ್ದಾರೆ. ಇದು ದರ್ಗಾ ಅಲ್ಲ. ಚಂದ್ರಮೌಳೇಶ್ವರ ದೇವಾಲಯ ಎಂದು ಪಟ್ಟು ಹಿಡಿದಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್‌ ಗಿರಿ ಸ್ವಾಮಿ ದರ್ಗಾದ ವಿಚಾರದಲ್ಲೂ ಇದೇ ರೀತಿಯ ಆಕ್ರೋಶ ಭುಗಿಲೆದ್ದಿತ್ತು. ಈಗ ಅದೇ ಮಾದರಿಯಲ್ಲಿ ಮತ್ತೊಂದು ವಿವಾದ ಎದ್ದಿದೆ. ಮಹಜಿದ್ ಗ್ರಾಮದಲ್ಲಿರುವ ಪುರಾತನ ಹಜರತ್ ಸೈಯದ್ ಬಾದ್ ಷಾ ದರ್ಗಾ ಸಂಪೂರ್ಣ ಕಲ್ಲಿನಿಂದ ನಿರ್ಮಾಣವಾಗಿದೆ. ದರ್ಗಾದ ಒಳಗಿರುವ ಪುರಾತನ ಕಲ್ಲಿನ ಕಂಬದಲ್ಲಿ ಹೂವಿನ ಚಿತ್ರಗಳ ಕೆತ್ತನೆ ಮಾಡಲಾಗಿದೆ. ಇದು ನೋಡಲು ಸಂಪೂರ್ಣ ಹಿಂದೂ ದೇವಾಲಯದ ಮಾದರಿಯಲ್ಲಿದೆ. ಹೀಗಾಗಿ ದರ್ಗಾದ ನವೀಕರಣ, ಗುಂಬಜ್ ಕಾಮಗಾರಿಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಹಾಗೂ ಹಿಂದೂ ದೇವಾಲಯದ ಕುರುಹುಗಳಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ದರ್ಗಾದ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಇದನ್ನೂ ಓದಿ: ಮೈಕ್‌ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಆಜಾನ್‌ ಬಗ್ಗೆ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ವಕ್ಫ್ ಬೋರ್ಡ್ ಅಧೀನದಲ್ಲಿರುವ ದರ್ಗಾದ ನವೀಕರಣಕ್ಕೆ 8 ಲಕ್ಷ ರೂಪಾಯಿ ಮಂಜೂರು ಮಾಡಿ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಹೀಗಾಗಿ ದರ್ಗಾದ ನವೀಕರಣಕ್ಕೆ ಸಿದ್ಧತೆ ನಡೆದಿದೆ. ಆದ್ರೆ ಹಿಂದೂ ಸಂಘಟನೆಗಳು ಇದು ದರ್ಗಾ ಅಲ್ಲ ದೇವಸ್ಥಾನ ಎಂದು ಹೋರಾಟಕ್ಕೆ ಇಳಿದಿವೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ದೇವಾಲಯ ನಾಶ ಮಾಡಿ ದರ್ಗಾ ಮಾಡಲಾಗಿದೆ. ಕಟ್ಟೆಗದ್ದೆ ಹೆಸರನ್ನ ಮಹಜಿದ್ ಗ್ರಾಮವೆಂದು ಬದಲಾವಣೆ ಮಾಡಲಾಗಿದೆ ಎಂದು ಹಿಂದೂ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ಹಿಂದೂ ಮುಸ್ಲಿಂರ ಭಾವೈಕ್ಯತೆಯ ಕೇಂದ್ರವಾಗಿರುವ ದರ್ಗಾದಲ್ಲಿ ಇಂದಿನಿಂದ ಉರುಸ್ ಆರಂಭವಾಗಲಿದೆ. ಇದರ ನಡುವೆ ಇಂತಹದೊಂದು ವಿವಾದ ಎದ್ದಿದ್ದು ದರ್ಗಾದ ಸುತ್ತಮುತ್ತ ಪೋಲಿಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಚಿಕ್ಕಮಗಳೂರು ತಾಲೂಕಿನ ಕೂದುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಜಿದ್ ಗ್ರಾಮವಿದೆ.

ದರ್ಗಾ ಕಮಿಟಿಯಿಂದ ಮೀಟಿಂಗ್

ಇನ್ನು ಹಿಂದೂ ಸಂಘಟನೆಗಳ ವಿವಾದ ಬೆನ್ನಲ್ಲೆ ಹಜರತ್ ಸೈಯದ್ ಬಾದ್ ಷಾ ದರ್ಗಾ ಕಮಿಟಿ ಮೀಟಿಂಗ್ ನಡೆಸಿದೆ. ದರ್ಗಾ ಕಮಿಟಿ ಅಧ್ಯಕ್ಷ ಫಾರೂಕ್ ನೇತೃತ್ವದಲ್ಲಿ ಸಭೆ ನಡೆದಿದೆ. ದೇವಾಲಯ ಎಂದು ಆರೋಪ ಮಾಡುವವರ ಬಳಿ ಸಾಕ್ಷಿ ಇದ್ರೆ ನೀಡಲಿ. ಕಿಡಿಗೇಡಿಗಳು ವಿವಾದವನ್ನು ಸೃಷ್ಟಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಸರ್ಕಾರ ನೀಡಿರುವ ಅನುದಾನದಲ್ಲಿ ದರ್ಗಾ ನವೀಕರಣ ಮಾಡಲಾಗುತ್ತಿದೆ. ಈ‌ ದರ್ಗಾಕ್ಕೆ 200 ವರ್ಷಗಳ ಇತಿಹಾಸವಿದೆ. ದರ್ಗಾ ವಕ್ಫ್ ಬೋರ್ಡ್​ಗೆ ಸೇರಿದೆ. ವಕ್ಫ್ ಬೋರ್ಡ್ ವಿವಾದ ಸೃಷ್ಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಟಿವಿ9ಗೆ ದರ್ಗಾ ಕಮಿಟಿ ಅಧ್ಯಕ್ಷ ಫಾರೂಕ್ ಮನವಿ ಮಾಡಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:55 am, Mon, 13 March 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್