ಹಲ್ಲು ಕಳೆದುಕೊಂಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣು

| Updated By: ವಿವೇಕ ಬಿರಾದಾರ

Updated on: Mar 23, 2025 | 12:47 PM

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಭುವನಕೋಟೆ ಗ್ರಾಮದ 18 ವರ್ಷದ ವಿಘ್ನೇಶ್ ಎಂಬ ಯುವಕ ನಾಲ್ಕು ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ 17 ಹಲ್ಲುಗಳನ್ನು ಕಳೆದುಕೊಂಡಿದ್ದರು. ಈ ಘಟನೆಯಿಂದಾಗಿ ಮನನೊಂದ ಯುವಕ ವಿಘ್ನೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲು ಕಳೆದುಕೊಂಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣು
ಮೃತ ಯುವಕ ವಿಘ್ನೇಶ್
Follow us on

ಚಿಕ್ಕಮಗಳೂರು, ಮಾರ್ಚ್​ 23: ಅಪಘಾತದಲ್ಲಿ 17 ಹಲ್ಲುಗಳನ್ನ (Teeaths) ಕಳೆದುಕೊಂಡಿದ್ದಕ್ಕೆ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಘ್ನೇಶ್ (18) ಮೃತ ದುರ್ದೈವಿ. ಕೊಪ್ಪ (Koppa) ತಾಲೂಕಿನ ಭುವನಕೋಟೆ ಗ್ರಾಮದ ವಿಘ್ನೇಶ್​ ಮೊದಲ ವರ್ಷದ ಐಟಿಐ ಓದುತ್ತಿದ್ದರು. ನಾಲ್ಕು ವರ್ಷದ ಹಿಂದೆ ಸಂಭವಿಸಿದ್ದ ಅಪಘಾತದಲ್ಲಿ ವಿಘ್ನೇಶ್ 17 ಹಲ್ಲುಗಳನ್ನ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸದಾ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಇದೀಗ, ಮನನೊಂದು ವಿಘ್ನೇಶ್​ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಮಾಚಾರದ ಆತಂಕ, ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆಗೆ ಶರಣು

ತನ್ನ ಮೇಲೆ ವಾಮಾಚಾರವಾಗಿದೆ ಎಂದು ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಯಂತಿ (29) ಮೃತ ದುರ್ದೈವಿ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದ ಜಯಂತಿ10 ವರ್ಷದ ಹಿಂದೆ ಮಂಜುನಾಥ್​ನ ಎಂಬುವರನ್ನು ಮದುವೆಯಾಗಿದ್ದಾರೆ. ಇಬ್ಬರಿಂದ ನನ್ನ ಮೇಲೆ ವಾಮಾಚಾರ ನಡೆದಿದೆ ಎಂದು ಡೆತ್​​ನೋಟ್​​ ಬರೆದಿಟ್ಟು ಜಯಂತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಎಣ್ಣೆಗಾಗಿ ಕ್ಯಾಶಿಯರ್ ಮೇಲೆ ಯೂತ್ ಕಾಂಗ್ರೆಸ್ ಅಧ್ಯಕ್ಷನಿಂದ ಹಲ್ಲೆ

ಇದನ್ನೂ ಓದಿ
ತಾಕತ್ ಇದ್ರೆ ಹುಡುಕಿ: ಕುಡುಕನ ಸವಾಲು, ಶೃಂಗೇರಿ ಪೊಲೀಸರು ಕಂಗಾಲು!
ನಾಪತ್ತೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿ ಭದ್ರಾ ನದಿಯಲ್ಲಿ ಶವವಾಗಿ ಪತ್ತೆ
ಅಮ್ಮನಿಗೆ ಬೈದಿದ್ದಕ್ಕೆ ಮಾವನನ್ನೇ ಕೊಂದ ಪುತ್ರ!
ಪೊಲೀಸರಿಂದಲೇ ಹಿಟ್ ಆ್ಯಂಡ್​ ರನ್: ಬೈಕ್​ ಸವಾರ ಸಾವು, ಜೀಪ್ ಚಾಲಕ ಸಸ್ಪೆಂಡ್

ಆಯತಪ್ಪಿ ಬಿದ್ದ ಸವಾರರ ಸಾವು

ತ್ರಿಬಲ್ ರೈಡಿಂಗ್ ಹೋಗುವಾಗ ಆಯತಪ್ಪಿ ಬೈಕ್‌ನಿಂದ ಬಿದ್ದವರ ಮೇಲೆ ವಾಹನ ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರಿಗೆ ಗಂಭೀರ ಗಾಯವಾಗಿದೆ. ಚಾಮರಾಜನಗರ ತಾಲೂಕಿನ ಹರದನಹಳ್ಳಿ ಬಳಿ ನಡೆದ ಘಟನೆ ನಡೆದಿದೆ. ಬ್ಯಾಡಮೂಡ್ಲು ಗ್ರಾಮದ ಅಭಿಷೇಕ್(23), ಅಭಿ (21) ಮೃತ ದುರ್ದೈವಿಗಳು. ಗಂಭೀರ ಗಾಯಗೊಂಡ ಮಹದೇವಗೆ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:11 am, Sun, 23 March 25