ನಾಯಿಗೆ ವಿಷ ಹಾಕಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್‌ನ ಇಬ್ಬರ ಸೆರೆ; ಒಂದು ಕೋಟಿ ಮೌಲ್ಯದ ಪುರಾತನ ರತ್ನ ವಶ
Crime News: ಈ ಗ್ಯಾಂಗ್ ನಾಯಿಗೆ ವಿಷ ಹಾಕಿ ಮನೆಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಎಂದು ಕುಖ್ಯಾತಿ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ, ಕೇರಳದ ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲೂ ಭಾಗಿ ಆಗಿರುವ ಆರೋಪ ಈ ಗ್ಯಾಂಗ್ ಮೇಲಿದೆ.
ಚಿಕ್ಕಮಗಳೂರು: ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ದರೋಡೆಕೋರ ಗ್ಯಾಂಗ್‌ನ ಇಬ್ಬರ ಸೆರೆಯಾಗಿದೆ. ಚಿಕ್ಕಮಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಇಬ್ಬರ ಬಂಧನವಾಗಿದೆ. ಬಂದಿತರಿಂದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಪುರಾತನ ರತ್ನ, 500 ಮತ್ತು 2 ಸಾವಿರ ಮುಖಬೆಲೆಯ ಖೋಟಾ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. 3 ಕಾರು, 5 ಮೊಬೈಲ್, ಕಂಪ್ಯೂಟರ್, ಪ್ರಿಂಟರ್ ವಶಕ್ಕೆ ಕೊಳ್ಳಲಾಗಿದೆ. ಈ ಗ್ಯಾಂಗ್ ನಾಯಿಗೆ ವಿಷ ಹಾಕಿ ಮನೆಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಎಂದು ಕುಖ್ಯಾತಿ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ, ಕೇರಳದ ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲೂ ಭಾಗಿ ಆಗಿರುವ ಆರೋಪ ಈ ಗ್ಯಾಂಗ್ ಮೇಲಿದೆ.
ಮೈಸೂರು: ಚಿನ್ನದ ಅಂಗಡಿ ಮಾಲೀಕ ಬಂಧನ ಕದ್ದ ಚಿನ್ನ ಖರೀದಿಸುತ್ತಿದ್ದ ಅಂಗಡಿ ಮಾಲೀಕನ ಬಂಧನವಾಗಿದೆ. ಮೈಸೂರು ಸಿಸಿಬಿ ಪೊಲೀಸರಿಂದ ಲೋಕೇಶ್ ಎಂಬಾತನನ್ನು ಬಂಧಿಸಲಾಗಿದೆ. ಲೋಕೇಶ್, ಚಾಮುಂಡೇಶ್ವರಿ ಚಿನ್ನದ ಅಂಗಡಿ ಮಾಲೀಕ ಆಗಿದ್ದು, ಚಾಮರಾಜನಗರದ ಭ್ರಮರಾಂಬ ಬಡಾವಣೆಯಲ್ಲಿರುವ ಅಂಗಡಿ ನಡೆಸುತ್ತಿದ್ದ. ಮೈಸೂರಿನಲ್ಲಿ ಕದ್ದಿದ್ದ ಚಿನ್ನ ಖರೀದಿಸುತ್ತಿದ್ದ ಎಂದು ತಿಳಿದುಬಂದಿದೆ. ಇದೀಗ ಮಾಲೀಕನ ಬಂಧನದಿಂದ ಲೋಕೇಶ್ ಬಳಿ ಚಿನ್ನಾಭರಣ ಗಿರವಿ ಇಟ್ಟವರಲ್ಲಿ ಆತಂಕ ಶುರುವಾಗಿದೆ.
ಚಿನ್ನದ ಸರದ ತುಂಡನ್ನು ನುಂಗಿದ ಕಳ್ಳ ಪೊಲೀಸರು ಬಂಧಿಸುತ್ತಾರೆ ಎಂಬ ಭಯದಲ್ಲಿ ಕಳ್ಳನೊಬ್ಬ ತಾನು ಕದ್ದಿದ್ದ ಚಿನ್ನದ ಸರದ ತುಂಡನ್ನು ನುಂಗಿದ್ದಾನೆ. ಈ ಘಟನೆ ಬೆಂಗಳೂರಿನ ಕೆ.ಆರ್.ಮಾರ್ಕೆಟ್ನಲ್ಲಿ (KR Market) ನಡೆದಿದೆ. ಎಂ.ಟಿ.ಸ್ಟ್ರೀಟ್ ಬಳಿ ಸರಗಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಆದರೆ ಸಾರ್ವಜನಿಕರ ಕೈಯಲ್ಲಿ ಸಿಕ್ಕಿಬಿದ್ದಿದ್ದ. ಈ ವೇಳೆ ಕೈಯಲ್ಲಿದ್ದ ಚಿನ್ನದ ಸರದ ತುಂಡನ್ನು ಆರೋಪಿ ನುಂಗಿದ್ದಾನೆ. ವಿಜಿ ಎಂಬುವವನು ಸರವನ್ನು ನುಂಗಿದ ಆರೋಪಿ. ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದಾಗ ಸರದ ತುಂಡು ನುಂಗಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ.
ಸರಗಳ್ಳರು ಸಾರ್ವಜನಿಕರ ಕೈಯಲ್ಲಿ ತಗಲಾಕಿಕೊಂಡಿದ್ದರು. ಅದರಲ್ಲಿ ಓರ್ವ ಆರೋಪಿ ಕದ್ದ ಸರದ ಅರ್ಧ ತುಂಡನ್ನು ನುಂಗುತ್ತಾನೆ. ಪೊಲೀಸರು ವಿಚಾರಣೆ ನಡೆಸಿದ ಬಳಿಕ ತಾನು ಸರ ನುಂಗಿರುವ ಬಗ್ಗೆ ಬಾಯಿ ಬಿಡುತ್ತಾನೆ. ಆಸ್ಪತ್ರೆಗೆ ದಾಖಲಿಸಿ ಆರೋಪಿ ವಿಜಿಗೆ ಸ್ಕ್ಯಾನಿಂಗ್ ಮಾಡಿಸಿದಾಗ ಆತನ ಹೊಟ್ಟೆಯಲ್ಲಿ ಚಿನ್ನದ ತುಂಡುಗಳಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಬೆಂಗಳೂರು: ರುಚಿಯಾಗಿ ಚಿಕನ್ ಫ್ರೈ ಮಾಡಿಕೊಟ್ಟಿಲ್ಲ ಎಂದು ಹೆಂಡತಿಯನ್ನೇ ಕೊಂದ ಗಂಡ
Published On - 11:00 pm, Mon, 23 August 21