ಅನ್ನಪೂರ್ಣೇಶ್ವರಿ ಬ್ರಹ್ಮರಥೋತ್ಸವ: ವೈಭವದ ಮೆರವಣಿಗೆ, ಭಕ್ತಿಯಲ್ಲಿ ಮಿಂದೆದ್ದ ಜನ

ಚಿಕ್ಕಮಗಳೂರು: ಹೊರನಾಡು ಅನ್ನಪೂರ್ಣೇಶ್ವರಿ ಅಂದ್ರೆ ಬೇಡಿದ್ದನ್ನ ಕರುಣಿಸೋ ಮಹಾತಾಯಿ. ಹೀಗಾಗೇ ವರ್ಷಪೂರ್ತಿ ಭಕ್ತರ ದಂಡೇ ದೇಗುಲಕ್ಕೆ ಹರಿದುಬರುತ್ತೆ. ಅದ್ರಲ್ಲೂ ವರ್ಷಕ್ಕೊಮ್ಮೆ ನಡೆಯೋ ಬ್ರಹ್ಮರಥೋತ್ಸವವಂತೂ ನೋಡೋದೇ ಚೆಂದ. ಮನದ ತುಂಬೆಲ್ಲಾ ಜಗನ್ಮಾತೆಯ ಧ್ಯಾನ. ಹೆಜ್ಜೆ ಹೆಜ್ಜೆಗೂ ಭಕ್ತಿಯ ಪುಳಕ. ಗಂಟೆನಾದದ ಜೊತೆ ಸ್ವರಗಳ ನಾದ. ಸರ್ವಾಲಂಕಾರಗಳಿಂದ ಅಮ್ಮನ ತೇರು ಮುಂದೆ ಬರ್ತಿದ್ರೆ ಮೈಮನ ರೋಮಾಂಚನಗೊಂಡಿತ್ತು. ಎಲ್ಲರ ಮನದಲ್ಲೂ ಆಧ್ಯಾತ್ಮದ ಭಾವ ಮೂಡಿತ್ತು. ಅನ್ನಪೂರ್ಣೆಗೆ ನಮೋ ನಮಃ ಅಂದಿದ್ರು. ಸುಡು ಬಿಸಿಲಿನ ಲೆಕ್ಕವಿಲ್ಲ. ಹಸಿವಿನ ಚಿಂತೆಯಿಲ್ಲ. ಜನಸಂದಣಿಯ ಕಿರಿ ಕಿರಿ […]

ಅನ್ನಪೂರ್ಣೇಶ್ವರಿ ಬ್ರಹ್ಮರಥೋತ್ಸವ: ವೈಭವದ ಮೆರವಣಿಗೆ, ಭಕ್ತಿಯಲ್ಲಿ ಮಿಂದೆದ್ದ ಜನ
Follow us
ಸಾಧು ಶ್ರೀನಾಥ್​
|

Updated on:Feb 27, 2020 | 2:09 PM

ಚಿಕ್ಕಮಗಳೂರು: ಹೊರನಾಡು ಅನ್ನಪೂರ್ಣೇಶ್ವರಿ ಅಂದ್ರೆ ಬೇಡಿದ್ದನ್ನ ಕರುಣಿಸೋ ಮಹಾತಾಯಿ. ಹೀಗಾಗೇ ವರ್ಷಪೂರ್ತಿ ಭಕ್ತರ ದಂಡೇ ದೇಗುಲಕ್ಕೆ ಹರಿದುಬರುತ್ತೆ. ಅದ್ರಲ್ಲೂ ವರ್ಷಕ್ಕೊಮ್ಮೆ ನಡೆಯೋ ಬ್ರಹ್ಮರಥೋತ್ಸವವಂತೂ ನೋಡೋದೇ ಚೆಂದ.

ಮನದ ತುಂಬೆಲ್ಲಾ ಜಗನ್ಮಾತೆಯ ಧ್ಯಾನ. ಹೆಜ್ಜೆ ಹೆಜ್ಜೆಗೂ ಭಕ್ತಿಯ ಪುಳಕ. ಗಂಟೆನಾದದ ಜೊತೆ ಸ್ವರಗಳ ನಾದ. ಸರ್ವಾಲಂಕಾರಗಳಿಂದ ಅಮ್ಮನ ತೇರು ಮುಂದೆ ಬರ್ತಿದ್ರೆ ಮೈಮನ ರೋಮಾಂಚನಗೊಂಡಿತ್ತು. ಎಲ್ಲರ ಮನದಲ್ಲೂ ಆಧ್ಯಾತ್ಮದ ಭಾವ ಮೂಡಿತ್ತು. ಅನ್ನಪೂರ್ಣೆಗೆ ನಮೋ ನಮಃ ಅಂದಿದ್ರು.

ಸುಡು ಬಿಸಿಲಿನ ಲೆಕ್ಕವಿಲ್ಲ. ಹಸಿವಿನ ಚಿಂತೆಯಿಲ್ಲ. ಜನಸಂದಣಿಯ ಕಿರಿ ಕಿರಿ ಇಲ್ಲ. ಎಲ್ಲರ ಮನದಲ್ಲೂ ಇದ್ದದ್ದು ತಾಯಿಯ ದರ್ಶನ ಪಡೀಬೇಕು ಅನ್ನೋದೇ. ಕಾಫಿನಾಡು ಚಿಕ್ಕಮಗಳೂರಿನ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನಪೂರ್ಣೆಯ ನೆಲೆವೀಡಾಗಿರೋ ಹೊರನಾಡಿಗೆ ವಿಶೇಷ ಸ್ಥಾನವಿದೆ.

ಪ್ರತಿ ವರ್ಷ ಪಾಲ್ಗುಣ ಶುಕ್ಲ ಮಾಸದ ಅಭಿಜಿನ್ ಮಹೂರ್ತದಲ್ಲಿ ನಿನ್ನೆ ಬ್ರಹ್ಮರಥೋತ್ಸವ ನಡೆಸಲಾಯ್ತು. ಐದು ದಿನಗಳ ಕಾಲ ನಡೆಯೋ ಈ ವಾರ್ಷಿಕ ಆಚರಣೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ರು. ರಥೋತ್ಸವದ ಪ್ರಯುಕ್ತ ಅನ್ನಪೂರ್ಣೆಶ್ವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ವಿಶೇಷ ಪೂಜೆಯನ್ನ ಸಲ್ಲಿಸಲಾಯಿತು. ಸಾವಿರಾರು ಭಕ್ತರು ಪ್ರಾರ್ಥನೆ ಮಾಡಿ ರಥವನ್ನ ಎಳೆದು ಭಕ್ತಿ ಸಮರ್ಪಿಸಿದರು.

ಅನ್ನಪೂರ್ಣೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಛತ್ರಿ ಚಾಮರಗಳ ಮೆರವಣಿಗೆಯಲ್ಲಿ ದೇವಿಯ ಮೂರ್ತಿಯನ್ನ ತಂದು ರಥದಲ್ಲಿ ಕೂರಿಸಲಾಯ್ತು. ನಂತರ ನೆರೆದಿದ್ದ ಭಕ್ತರು ರಥಕ್ಕೆ ಕಾಯಿಯನ್ನ ಒಡೆಯುವ ಮೂಲಕ ಭಕ್ತಿ ಸಮರ್ಪಿಸಿದರು. ವರ್ಷಪೂರ್ತಿ ಗರ್ಭಗುಡಿಯಲ್ಲೇ ಕೂತು ಭಕ್ತರಿಗೆ ದರ್ಶನ ನೀಡೋ ಅನ್ನಪೂರ್ಣೇಶ್ವರಿ ವರ್ಷಕ್ಕೊಮ್ಮೆ ರಥದಲ್ಲಿ ಕೂತು ಸಾಗೋದು ನಿಜಕ್ಕೂ ಸುಂದರ ದೃಶ್ಯ.

ಅಂತೂ ಅನ್ನಪೂರ್ಣೇಶ್ವರಿ ಸನ್ನಿಧಾನದಲ್ಲಿ ನಡೆದ ಬ್ರಹ್ಮರಥೋತ್ಸವ ಭಕ್ತಸಾಗರವನ್ನ ಸೆಳೆದಿತ್ತು. ದೂರದೂರುಗಳಿಂದ ಬಂದಿದ್ದ ಜನ ಸರ್ವಾಲಂಕಾರಗೊಂಡಿದ್ದ ತಾಯಿಯನ್ನ ಕಣ್ತುಂಬಿಕೊಂಡು ರಥ ಎಳೆದ್ರು.

Published On - 2:06 pm, Thu, 27 February 20

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ