AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಿಷನ್ ದಂಧೆ? ಗೃಹ ಲಕ್ಷ್ಮೀ ಫಲಾನುಭವಿ ಮಹಿಳೆಯರು ಸರ್ಕಾರಿ ಬ್ಯಾಂಕಿಗೆ ಹೋಗುವ ಬದಲು; ಖಾಸಗಿ ಫೈನಾನ್ಸ್ ಸಿಬ್ಬಂದಿಯಿಂದ ಗೃಹ ಲಕ್ಷ್ಮೀ ಹಣ ಪಡೆಯುತ್ತಿದ್ದಾರೆ!

ನಿತ್ಯ ಎಷ್ಟೇ ಜನ ಬಂದರೂ ನೂರಾರು ಜನರಿಗೆ ಮಾತ್ರ ಗೃಹ ಲಕ್ಷ್ಮೀ ಹಣ ನೀಡುತ್ತಿರುವ ಸರ್ಕಾರಿ ಬ್ಯಾಂಕ್ ವಿರುದ್ಧ ಮಹಿಳೆಯರು ಅಸಮಾಧಾನಗೊಂಡಿದ್ದಾರೆ. ಗೃಹ ಲಕ್ಷ್ಮೀ ಯೋಜನೆ ಜಾರಿಯಾದ ದಿನದಿಂದ ಮಹಿಳೆಯರು ಸರ್ಕಾರಿ ಬ್ಯಾಂಕುಗಳ ಮುಂದೆ ಹಣಕ್ಕಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆಯಿಂದ ಸಂಜೆ ವರೆಗೂ ಕಾದಿದ್ದರೂ ಹಣ ಸಿಗುತ್ತೆ ಎಂಬ ನಂಬಿಕೆ ಇಲ್ಲ. ಆದರೆ ಇದನ್ನ ಬಂಡವಾಳ ಮಾಡಿಕೊಂಡಿರುವ ಖಾಸಗಿ ಫೈನಾನ್ಸ್ ಸಿಬ್ಬಂದಿಗಳು ಕಮಿಷನ್ ದಂಧೆ ಆರಂಭ ಮಾಡಿಕೊಂಡಿದ್ದಾರೆ.

ಕಮಿಷನ್ ದಂಧೆ? ಗೃಹ ಲಕ್ಷ್ಮೀ ಫಲಾನುಭವಿ ಮಹಿಳೆಯರು ಸರ್ಕಾರಿ ಬ್ಯಾಂಕಿಗೆ ಹೋಗುವ ಬದಲು; ಖಾಸಗಿ ಫೈನಾನ್ಸ್ ಸಿಬ್ಬಂದಿಯಿಂದ ಗೃಹ ಲಕ್ಷ್ಮೀ ಹಣ ಪಡೆಯುತ್ತಿದ್ದಾರೆ!
ಗೃಹ ಲಕ್ಷ್ಮೀ ಫಲಾನುಭವಿ ಮಹಿಳೆಯರು ಸರ್ಕಾರಿ ಬ್ಯಾಂಕಿಗೆ ಹೋಗುವ ಬದಲು; ಖಾಸಗಿ ಫೈನಾನ್ಸ್ ಸಿಬ್ಬಂದಿಯಿಂದ ಗೃಹ ಲಕ್ಷ್ಮೀ ಹಣ ಪಡೆಯುತ್ತಿದ್ದಾರೆ!
TV9 Web
| Edited By: |

Updated on:Nov 23, 2023 | 11:41 AM

Share

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಗೃಹ ಲಕ್ಷ್ಮೀ (Gruha Lakshmi) ಯೋಜನೆ ಜಾರಿಯಾದ ದಿನದಿಂದ ಒಂದಲ್ಲ ಒಂದು ಸಮಸ್ಯೆ ಫಲಾನುಭವಿಗಳಿಗೆ ( women) ಎದುರಾಗುತ್ತಿದೆ. ಬ್ಯಾಂಕ್ ಮುಂದೆ ಕ್ಯೂನಲ್ಲಿ ನಿಂತು ಕಾದು ಕಾದು ಸುಸ್ತಾಗಿ ಹೋಗಿದ್ದಾರೆ. ಈ ನಡುವೆ ಕೆಲ ಖಾಸಗಿ ಫೈನಾನ್ಸ್ ಗಳು ಗೃಹ ಲಕ್ಷ್ಮೀ ಹಣದಲ್ಲಿ ದುಡ್ಡು ಮಾಡುವ ಪ್ಲಾನ್ ಮಾಡಿದ್ದು ಕಮಿಷನ್ ದಂಧೆಗೆ (commission) ಮುಂದಾಗಿದೆ. ಬ್ಯಾಂಕಿನ ಮುಂದೆ ನಿಲ್ಲ ಬೇಕಾಗಿಲ್ಲ, ಗೃಹ ಲಕ್ಷ್ಮೀ ಹಣಕ್ಕಾಗಿ ಗಂಟೆಗಟ್ಟಲೆ ಕಾಯಬೇಕು ಅನ್ನುವುದಿಲ್ಲ, ಜಸ್ಟ್ ಆಧಾರ್ ನಂಬರ್ ಬೆರಳಚ್ಚು ನೀಡಿದ್ರೆ ಸಾಕು ನಿಮ್ಮ ಅಕೌಂಟ್ ನಲ್ಲಿ ಹಣ ಎಷ್ಟಿದೆ? ಗೃಹ ಲಕ್ಷ್ಮಿ ಹಣ ಬಂದಿದ್ಯಾ? ಅನ್ನೋದು ಸೆಕೆಂಡ್ ನಲ್ಲಿ ಗೊತ್ತಾಗುತ್ತೆ.ಹಣ ಬೇಕಾದ್ರೆ ಸಾವಿರಕ್ಕೆ 30 ರೂಪಾಯಿ ( money) ಕೊಡಬೇಕು. ಗೃಹ ಲಕ್ಷ್ಮೀಯರು ಕಮಿಷನ್ ನೀಡಲು ಓಕೆ ಅಂದ್ರೆ ಬ್ಯಾಂಕ್ ಮುಂದೆನೆ ಹಣ, ಬೆಳಗ್ಗೆ ಆದ್ರೂ ಓಕೆ, ರಾತ್ರಿ ಆದ್ರೂ ಓಕೆ – ಹೌದು ಇದು ಖಾಸಗಿ ಫೈನಲ್ ನವರ ಗೃಹ ಲಕ್ಷ್ಮೀ ಹಣದಲ್ಲಿ ದುಡ್ಡು ಮಾಡುವ ಹೊಸ ಪ್ಲಾನ್.

ಬೆಳಗ್ಗೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲುವ ಮಹಿಳೆಯರನ್ನ ಟಾರ್ಗೆಟ್ ಮಾಡಿ ಬ್ಯಾಂಕ್ ಮುಂದೆ ಬರುವ ಖಾಸಗಿ ಫೈನಾನ್ಸ್​​ ಸಿಬ್ಬಂದಿ ಸಾವಿರಕ್ಕೆ 30 ರೂಪಾಯಿ ಫಿಕ್ಸ್ ಮಾಡಿ ಗೃಹ ಲಕ್ಷ್ಮೀಯರಿಂದ ಕಮಿಷನ್ ಪಡೆದು ದುಡ್ಡು ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ನಗರದ IDBI ಬ್ಯಾಂಕಿನ ಮುಂದೆ ನೂರಾರು ಗೃಹ ಲಕ್ಷ್ಮೀ ಫಲಾನುಭವಿಗಳಿಂದ‌ ಆಧಾರ್ ಕಾರ್ಡ್ ಪಡೆದು ಗೃಹ ಲಕ್ಷ್ಮೀ ಹಣ ಡ್ರಾ ಮಾಡಿ ಕಮಿಷನ್ ಪಡೆದು ಹಣ ನೀಡುತ್ತಿದ್ದ ಖಾಸಗಿ ಫೈನಾನ್ಸ್ ಸಿಬ್ಬಂದಿ ನಿಮ್ಗೆ ಹಣ ಬೇಕಾ? ಬನ್ನಿ ಬನ್ನಿ ಎಂದು ಕಮಿಷನ್ ಪಡೆದು ಗೃಹ ಲಕ್ಷ್ಮೀ ಹಣ ನೀಡುತ್ತಿದ್ದು, ಗೃಹ ಲಕ್ಷ್ಮೀಯರು ಬ್ಯಾಂಕ್ ಗಾಗಿ ಕಾಯುವ ಬದಲು ಖಾಸಗಿ ಫೈನಾನ್ಸ್ ಸಿಬ್ಬಂದಿ ಬಳಿ ಗೃಹ ಲಕ್ಷ್ಮೀ ಹಣ ಪಡೆಯುತ್ತಿದ್ದಾರೆ!

ಗೃಹ ಲಕ್ಷ್ಮೀ ಯೋಜನೆ ಜಾರಿಯಾದ ದಿನದಿಂದ ಮಹಿಳೆಯರು ಸರ್ಕಾರಿ ಬ್ಯಾಂಕುಗಳ ಮುಂದೆ ಹಣಕ್ಕಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆಯಿಂದ ಸಂಜೆ ವರೆಗೂ ಕಾದಿದ್ದರೂ ಹಣ ಸಿಗುತ್ತೆ ಎಂಬ ನಂಬಿಕೆ ಇಲ್ಲ. ಇದನ್ನ ಬಂಡವಾಳ ಮಾಡಿಕೊಂಡಿರುವ ಖಾಸಗಿ ಫೈನಾನ್ಸ್ ಸಿಬ್ಬಂದಿಗಳು ಕಮಿಷನ್ ದಂಧೆ ಆರಂಭ ಮಾಡಿಕೊಂಡಿದ್ದಾರೆ.

Also Read: ಸಂತೋಷ-ಸಮಾಧಾನದ ಸಂಗತಿ! ಮುಂಗಾರು ಹಿಂಗಾರು ಕೈಕೊಟ್ಟರೂ ಆ ರೈತ ಮಾಡಿದ ಸೂಪರ್​ ಐಡಿಯಾಗೆ ಬಂಪರ್​ ಬೆಳೆ- ಮಹಿಳಾ ಕೃಷಿ ಕಾರ್ಮಿಕರಿಗೆ ಕೈತುಂಬಾ ಕೆಲಸ

ನಿತ್ಯ ಎಷ್ಟೇ ಜನ ಬಂದರೂ ನೂರಾರು ಜನರಿಗೆ ಮಾತ್ರ ಗೃಹ ಲಕ್ಷ್ಮೀ ಹಣ ನೀಡುತ್ತಿರುವ ಸರ್ಕಾರಿ ಬ್ಯಾಂಕ್ ವಿರುದ್ಧ ಮಹಿಳೆಯರು ಅಸಮಾಧಾನಗೊಂಡಿದ್ದಾರೆ. ಇನ್ನು ಕೆಲ ಮಹಿಳೆಯರು ಮೂರು ತಿಂಗಳಿನಿಂದ ಹಣ ಬಂದಿಲ್ಲ, ದೂರದ ಊರುಗಳಿಂದ ಬಂದು ಬ್ಯಾಂಕ್ ಮುಂದೆ ಕಾಯುವ ಸ್ಥಿತಿ ಬಂದಿದ್ದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬ್ಯಾಂಕ್ ಗಳಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರ ತಾನು ಚುನಾವಣೆಯಲ್ಲಿ ನೀಡಿದ ಗ್ಯಾರಂಟಿಗಳನ್ನ ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ ಅನ್ನುತ್ತಿದೆ. ಆದ್ರೆ ಫಲಾನುಭವಿಗಳು ನಮ್ಮ ಕಷ್ಟ ನಮಗೆ ಎಂದು ಬ್ಯಾಂಕ್ ಮುಂದೆ ಗೋಳಾಡುತ್ತಿದ್ದರೆ, ಅದನ್ನ ಲಾಭವಾಗಿ ಮಾಡಿಕೊಂಡಿರುವ ಕೆಲ ಫೈನಾನ್ಸ್ ಗಳು ಕಮಿಷನ್ ತಂದೆಗೆ ಮುಂದಾಗಿರೋದು ದುರಂತವೇ ಸರಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:37 am, Thu, 23 November 23