ಚಿಕ್ಕಮಗಳೂರು: ಕಾಫಿನಾಡಿನ ಜನತೆ ಕ್ಷಣ ಕ್ಷಣಕ್ಕೂ ಕಂಗಾಲ್ ಆಗಿದ್ದಾರೆ. ಮನೆಯಿಂದ ಹೊರ ಬರೋಕೂ ಆಗ್ತಿಲ್ಲ. ಹೊರಗಡೆ ಓಡಾಡೋಕೂ ಆಗ್ತಿಲ್ಲ. ಕುಂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ. ಕ್ಷಣ ಕ್ಷಣಕ್ಕೂ ಭಯ ಜೀವ ಹಿಂಡುತ್ತಿದೆ. ಪ್ರಾಣ ಹೋದಂಗಾಗುತ್ತೆ. ಮನೆಬಿಟ್ಟು ಒಂದು ಹೆಜ್ಜೆ ಮುಂದಿಟ್ರೂ ಕಾಲು ನಡುಗುತ್ತೆ. ಆ ಪರಿ ಭಯ ಬೀಳೋಕೆ ಕಾರಣವೇ ಈ ಹೆಜ್ಜೆಗಳು.
ಕಾಫಿ ತೋಟದಲ್ಲಿ ಬೀಡು ಬಿಟ್ಟ ಹುಲಿಗಳು:
ಆತಂಕದಲ್ಲೇ ಕಾಲ ಕಳೆಯುತ್ತಿರುವ ಜನತೆ:
ಈ ಭಾಗದಲ್ಲಿ ಅರಣ್ಯ ಇಲಾಖೆಯವರೇ ಹುಲಿಗಳನ್ನ ತಂದು ಬಿಟ್ಟಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. ಇದರಿಂದಾಗಿ ಜನ ಯಾವಾಗ ಏನಾಗುತ್ತೋ ಅನ್ನೋ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಕಾಫಿ ತೋಟದಲ್ಲಿ ಕೆಲಸಕ್ಕೂ ಕೂಲಿ ಕಾರ್ಮಿಕರು ಬರ್ತಿಲ್ಲ. ಮಕ್ಕಳು ಶಾಲೆಗೂ ಹೋಗೋಕೂ ಆಗ್ತಿಲ್ಲ. ಕೂಡ್ಲೇ ಅರಣ್ಯಾಧಿಕಾರಿಗಳು ಹುಲಿ ಹಿಡಿಯುವ ಪ್ರಯತ್ನ ಮಾಡಬೇಕು ಅನ್ನೋದು ಕಾಫಿ ತೋಟದ ಮಾಲೀಕರು ಒತ್ತಾಯ. ಒಟ್ಟಾರೆ, ಹುಲಿ ಹೆಜ್ಜೆ ಪತ್ತೆಯಾಗಿರೋದು ಮಲೆನಾಡಿಗರನ್ನ ಬೆಚ್ಚಿ ಬೀಳಿಸಿದೆ. ದಿನದಿಂದ ದಿನಕ್ಕೆ ಜಾನುವಾರುಗಳ ಸಂಖ್ಯೆ ಕೂಡ ಕಡಿಮೆಯಾಗ್ತಿರೋದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.