Chikmagalur Naxals Arrested: ಕರ್ನಾಟಕ ಮೂಲದ ಇಬ್ಬರು ನಕ್ಸಲರು ಕೇರಳದಲ್ಲಿ ಅರೆಸ್ಟ್
ಬಂಧಿತ ಇಬ್ಬರು ಮಲೆನಾಡ ನಕ್ಸಲಿಸಂನಲ್ಲಿ ಮುಂಚೂಣಿಯಲ್ಲಿದ್ದವರು. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಬುಕ್ಕಡಿ ಬೈಲು ಮೂಲದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ 2003ರಲ್ಲಿ ಭೂಗತನಾಗಿದ್ದ.
ಚಿಕ್ಕಮಗಳೂರು: ಕೇರಳ ಪೊಲೀಸರು ಚಿಕ್ಕಮಗಳೂರು ಮೂಲದ ಇಬ್ಬರು ನಕ್ಸಲರನ್ನು ಬಂಧಿಸಿದ್ದಾರೆ. ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ (48), ಸಾವಿತ್ರಿಯನ್ನು ಎಟಿಎಸ್ ಬಂಧಿಸಿದೆ.
ಬಂಧಿತ ಇಬ್ಬರು ಮಲೆನಾಡ ನಕ್ಸಲಿಸಂನಲ್ಲಿ ಮುಂಚೂಣಿಯಲ್ಲಿದ್ದವರು. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಬುಕ್ಕಡಿ ಬೈಲು ಮೂಲದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ 2003ರಲ್ಲಿ ಭೂಗತನಾಗಿದ್ದ. ಕೃಷ್ಣಮೂರ್ತಿ ತಂದೆ ಗೋಪಾಲ್ ರಾವ್ ನಿಧನರಾದಾಗಲೂ ಈತ ಬಂದಿರಲಿಲ್ಲ. ಶೃಂಗೇರಿಯಲ್ಲಿ ಪದವಿ, ಶಿವಮೊಗ್ಗದಲ್ಲಿ ಎಲ್.ಎಲ್.ಬಿ. ಶಿಕ್ಷಣ ಪಡೆದಿದ್ದ ಕೃಷ್ಣಮೂರ್ತಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದ ವೇಳೆ ನಕ್ಸಲ್ ಸೇರ್ಪಡೆಯಾಗಿದ್ದ. 2003ರಿಂದಲೂ ಬಿ.ಜಿ.ಕೃಷ್ಣಮೂರ್ತಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಸದ್ಯ ಈಗ ಕೇರಳದಲ್ಲಿ ಸೆರೆ ಹಿಡಿಯಲಾಗಿದೆ.
ಬಂಧಿತ ನಕ್ಸಲ್ ಸಾವಿತ್ರಿ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಮಾವಿನಕೆರೆಯ ನಿವಾಸಿ. ಕೃಷ್ಣಮೂರ್ತಿ ವಿರುದ್ಧ 53, ಸಾವಿತ್ರಿ ವಿರುದ್ಧ 22 ಪ್ರಕರಣಗಳಿವೆ.
ಇದನ್ನೂ ಓದಿ: ಛತ್ತೀಸ್‌ಗಢ ಮತ್ತು ಜಾರ್ಖಂಡ್ ನಕ್ಸಲ್ ಪೀಡಿತ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಜ್ಜಾದ ಭದ್ರತಾ ಪಡೆ
Published On - 7:58 am, Wed, 10 November 21