CT Ravi: ಸಿ.ಟಿ. ರವಿ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತಾರಾ, ಸೊಲ್ತಾರಾ? ಚೌಡೇಶ್ವರಿ ದೇವಿ ಮೊರೆ ಹೋದ ಬೆಂಬಲಿಗರು
ಸೋಲು ಗೆಲುವು ಲೆಕ್ಕಚಾರವನ್ನ ಚಿಕ್ಕಮಗಳೂರು ಚೌಡೇಶ್ವರಿ ದೇವಿಯ ಮುಂದಿಟ್ಟಿದ್ದಾರೆ. ಸಿ.ಟಿ.ರವಿ ಬೆಂಬಲಿಗರು ಇಂದು ಚಿಕ್ಕಮಗಳೂರು ಚೌಡೇಶ್ವರಿ ದೇವಿಯ ಆಸ್ಥಾನಕ್ಕೆ ಬಂದು ತಮ್ಮ ನಾಯಕನ ರಾಜಕೀಯ ಭವಿಷ್ಯದ ಬಗ್ಗೆ ದೇವರ ಬಳಿ ಪ್ರಶ್ನೆ ಮಾಡಿದ್ದಾರೆ.
ಚಿಕ್ಕಮಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ಅವರ ಬೆಂಬಲಿಗರು ಕೂಡ ನಾನಾ ರೀತಿಯ ಸರ್ಕಸ್ಗಳನ್ನು ಮಾಡುತ್ತಿದ್ದಾರೆ. ರಾಜಕೀಯ ರಣರಂಗದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿದೆ. ನಾಯಕರು ನಾ ಮುಂದು ತಾ ಮುಂದು ಎಂಬಂತೆ ಮತದಾರರ ಮನಸ್ಸು ಗೆಲ್ಲಲು ತಯಾರಿ ನಡೆಸುತ್ತಿದ್ದಾರೆ. ಸದ್ಯ ಸಿ.ಟಿ.ರವಿ ಸೊಲ್ತಾರೋ, ಗೆಲ್ತಾರೋ ಎಂದು ಸಿ.ಟಿ. ರವಿ ಬೆಂಬಲಿಗರು ದೇವರ ಮೊರೆ ಹೋಗಿದ್ದಾರೆ.
ಸೋಲು ಗೆಲುವು ಲೆಕ್ಕಚಾರವನ್ನ ಚಿಕ್ಕಮಗಳೂರು ಚೌಡೇಶ್ವರಿ ದೇವಿಯ ಮುಂದಿಟ್ಟಿದ್ದಾರೆ. ಸಿ.ಟಿ.ರವಿ ಬೆಂಬಲಿಗರು ಇಂದು ಚಿಕ್ಕಮಗಳೂರು ಚೌಡೇಶ್ವರಿ ದೇವಿಯ ಆಸ್ಥಾನಕ್ಕೆ ಬಂದು ತಮ್ಮ ನಾಯಕನ ರಾಜಕೀಯ ಭವಿಷ್ಯದ ಬಗ್ಗೆ ದೇವರ ಬಳಿ ಪ್ರಶ್ನೆ ಮಾಡಿದ್ದಾರೆ. ಹಗ್ಗ ಬಲಕ್ಕೆ ತಿರುಗಿದ್ರೆ ಬಿಜೆಪಿ. ಎಡಕ್ಕೆ ತಿರುಗಿದ್ರೆ ಕಾಂಗ್ರೆಸ್ ಗೆಲುವು ಅಪ್ಪಣೆ ನೀಡುವಂತೆ ಮೊರೆ ಇಟ್ಟಿದ್ದಾರೆ. ತಾಯಿಗೆ ಪೂಜೆ ಸಲ್ಲಿಸಿ ನಂತರ ಹಗ್ಗ ಕೈಯಲ್ಲಿ ಹಿಡಿದು ಅರ್ಚಕ ನಿಂತಿದ್ದು ಈ ವೇಳೆ ಸಿ.ಟಿ.ರವಿ ಗೆಲ್ತಾರೆ ಅಂತ ತಾಯಿ ಚೌಡೇಶ್ವರಿ ಅಪ್ಪಣೆ ನೀಡಿದ್ದಾರಂತೆ. ಅರ್ಚಕ ರವಿ, ಸಿ.ಟಿ.ರವಿ ಅಭಿಮಾನಿಗಳ ಬೇಡಿಕೆಯಂತೆ ಚೌಡೇಶ್ವರಿ ಅಪ್ಪಣೆ ಕೇಳಿದ್ರು. ಸದ್ಯ ತಾಯಿ ನೀಡಿದ ಅಪ್ಪಣೆಯಿಂದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನು ಚಿಕ್ಕಮಗಳೂರಿನ ಶಾಂತಿನಗರದ ಚೌಡೇಶ್ವರಿ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಅಪ್ಪಣೆಗಾಗಿಯೇ ಭೇಟಿ ನೀಡುತ್ತಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:55 am, Wed, 1 February 23