ಚಿತ್ರದುರ್ಗ: ಇಮ್ಯೂನಿಟಿ ಬೂಸ್ಟರ್ ಸೇವಿಸಿ 8 ಜನ ಕಾರ್ಮಿಕರು ಅಸ್ವಸ್ಥ; ಜಿಲ್ಲಾಸ್ಪತ್ರೆಗೆ ದಾಖಲು
ಇಮ್ಯೂನಿಟಿ ಬೂಸ್ಟರ್ ಸೇವಿಸಿದ ಕೂಡಲೇ ವಾಂತಿ-ಭೇದಿ ಆದ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಸ್ವಸ್ಥಗೊಂಡ ಕಾರ್ಮಿಕರು ಚಿಕಿತ್ಸೆ ಪಡೆಯುತ್ತಿದ್ದು, ಕೊಂಚ ಸುಧಾರಿಸಿಕೊಂಡಿದ್ದಾರೆ.
ಚಿತ್ರದುರ್ಗ: ಕಾರ್ಮಿಕ ಇಲಾಖೆ ವತಿಯಿಂದ ನೀಡಿದ್ದ ಇಮ್ಯೂನಿಟಿ ಬೂಸ್ಟರ್ ಸೇವಿಸಿ 8 ಜನ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಇಮ್ಯೂನಿಟಿ ಬೂಸ್ಟರ್ ಬಾಕ್ಸ್ನಲ್ಲಿ ಪ್ಲಾಸ್ಟಿಕ್, ಧೂಳು ಮಿಶ್ರಣವಾಗಿದ್ದರಿಂದ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ ಎಂದು ಕಾರ್ಮಿಕ ಮುಖಂಡ ವೈ.ಕುಮಾರ್ ಆರೋಪ ಮಾಡಿದ್ದಾರೆ.
ಇಮ್ಯೂನಿಟಿ ಬೂಸ್ಟರ್ ಸೇವಿಸಿದ ಕೂಡಲೇ ವಾಂತಿ-ಭೇದಿ ಆದ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಸ್ವಸ್ಥಗೊಂಡ ಕಾರ್ಮಿಕರು ಚಿಕಿತ್ಸೆ ಪಡೆಯುತ್ತಿದ್ದು, ಕೊಂಚ ಸುಧಾರಿಸಿಕೊಂಡಿದ್ದಾರೆ.
ನೆಲಮಂಗಲ: ಕೊವಿಡ್ ವಾರಿಯರ್ಸ್‌ಗೆ ಅವಧಿ ಮುಗಿದ ಫುಡ್ ಕಿಟ್ ನೀಡಿದ ಆರೋಪ 100 ಕೋಟಿ ಡೋಸ್ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಎಡವಟ್ಟು ಮಾಡಿದ್ದು, ಕೊವಿಡ್ ವಾರಿಯರ್ಸ್‌ಗೆ ಅವಧಿ ಮುಗಿದ ಫುಡ್ ಕಿಟ್ ನೀಡಿರುವ ಆರೋಪ ಕೇಳಿ ಬಂದಿದೆ. ಕಾರ್ಮಿಕ ಇಲಾಖೆ ಕೊಟ್ಟಿದ್ದ ಫುಡ್ ಕಿಡ್ ದಾಸ್ತಾನು ಮಾಡಿಕೊಂಡು ಹಂಚಿಕೆ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ದಾಸರಹಳ್ಖಿ ವಿಧಾನಸಭಾ ಕ್ಷೇತ್ರದ ಮಲ್ಲದಂದ್ರ ಸರ್ಕಾರಿ ಆಸ್ಪತ್ರೆ ಬಳಿ ನಿನ್ನೆ ನಡೆದಿದ್ದ ಕಾರ್ಯಕ್ರಮದಲ್ಲಿ ಫುಡ್ ಕಿಟ್ ನೀಡಲಾಗಿತ್ತು.
ಮಾಜಿ ಬಿಜೆಪಿ ಶಾಸಕ ಎಸ್.ಮುನಿರಾಜು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಹಾಗೂ ಫುಡ್ ಕಿಟ್ ವಿತರಣೆ ಮಾಡಲಾಗಿದೆ. ಆದರೆ ಬಿಜೆಪಿ ಮುಖಂಡರು ಅವಧಿ ಮುಗಿದ ಫುಡ್ ಕಿಟ್ ವಿತರಣೆ ಮಾಡಿದ್ದು, ಹುಳುಗಳು ಇದರಲ್ಲಿ ಕಾಣಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ವಿಜಯನಗರ: ಕಲುಷಿತ ನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥ; ನಾಲ್ವರ ಸಾವು
Tamil Nadu: ಬಿರ್ಯಾನಿ ತಿಂದ ಕೆಲಹೊತ್ತಲ್ಲೇ 10 ವರ್ಷದ ಬಾಲಕಿ ಸಾವು; 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ
Published On - 8:27 am, Sun, 24 October 21