ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ‌ ಪ್ರಕರಣ ದಾಖಲು

ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. CWC ಅಧಿಕಾರಿಗಳು ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ‌ ಕೇಸ್ ದಾಖಲಿಸಿದ್ದಾರೆ.

ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ‌ ಪ್ರಕರಣ ದಾಖಲು
ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು
Follow us
TV9 Web
| Updated By: ಆಯೇಷಾ ಬಾನು

Updated on:Oct 19, 2022 | 12:13 PM

ಚಿತ್ರದುರ್ಗ: ಪೋಕ್ಸೋ ಕೇಸಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಚಿತ್ರದುರ್ಗದ ಮುರುಘಾಶ್ರೀ ಸೇರಿ ನಾಲ್ವರ ವಿರುದ್ಧ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ‌ ಕೇಸ್ ದಾಖಲಾಗಿದೆ. A1 ಮುರುಘಾಶ್ರೀ, A2 ಮಠದ ಕಾರ್ಯದರ್ಶಿ ಪರಮಶಿವಯ್ಯ, 3ನೇ ಆರೋಪಿ ಮುರುಘಾ ಮಠದ ಹಾಸ್ಟೆಲ್​​ನ ಲೇಡಿ ವಾರ್ಡನ್, A4 ಮಡಿಲು ದತ್ತು ಕೇಂದ್ರದ ಮುಖ್ಯಸ್ಥೆ ವೀಣಾ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಈಗಾಗಲೇ ಪೋಕ್ಸೋ ಕೇಸ್​ನಲ್ಲಿ ಎ1 ಮುರುಘಾಶ್ರೀ ಹಾಗೂ ಎ3 ಮುರುಘಾ ಮಠದ ಹಾಸ್ಟೆಲ್​​ನ ಲೇಡಿ ವಾರ್ಡನ್ ಜೈಲಿನಲ್ಲಿದ್ದಾರೆ. ಹಾಸ್ಟೆಲ್​​ನಲ್ಲಿ ಅಕ್ರಮವಾಗಿ ಇಬ್ಬರು ಬಾಲಕಿಯರ ಪಾಲನೆ ಮಾಡಲಾಗುತ್ತಿದೆ. ಮುರುಘಾಶ್ರೀ ವಿರುದ್ಧ ಆ.26ರಂದು ಪೋಕ್ಸೋ ಕೇಸ್ ಹಿನ್ನೆಲೆ ಮಠದ ಹಾಸ್ಟೆಲ್​​​ಗೆ ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ಮುರುಘಾಮಠದ ಹಾಸ್ಟೆಲ್‌ನಲ್ಲಿ ಇಬ್ಬರು ಬಾಲಕಿಯರು ಪತ್ತೆಯಾಗಿದ್ದರು. ಆಗ ಮಠದ ಹಾಸ್ಟೆಲ್​ನಲ್ಲಿದ್ದ ಮಕ್ಕಳನ್ನ ಸರ್ಕಾರಿ ಹಾಸ್ಟೆಲ್, ಬಾಲಮಂದಿರಕ್ಕೆ ಶಿಫ್ಟ್ ಮಾಡಲಾಗಿತ್ತು. CWC ಗಮನಕ್ಕೆ ತರದೆ ಇಬ್ಬರು ಮಕ್ಕಳ ಪಾಲನೆ ಮಾಡುತ್ತಿರುವ ಆರೋಪ ಹಿನ್ನೆಲೆ CWC ಅಧಿಕಾರಿಗಳು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ‌ ಕೇಸ್ ದಾಖಲಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಹುಲಿಕುಂಟೆ, ಸಿಬ್ಲೂಸಿ ಅಧಿಕಾರಿಗಳು ಇಷ್ಟು ದಿನ ಮೌನವಿದ್ದಿದ್ದೇಕೆ? ಪ್ರಕರಣದ ಬಗ್ಗೆ ತನಿಖೆ ನಡೆಯಲಿ, ಸತ್ಯಾಂಶ ಹೊರಬರಲಿ. ಯಾವುದೇ ತನಿಖೆಗೆ ನಾವು ಸಿದ್ಧರಿದ್ದೇವೆ. ದುಷ್ಟಕೂಟ ಪ್ರಶ್ನೆಯೇ ಇಲ್ಲ, ಈಗಲೂ ಮಠಕ್ಕೆ ಮುರುಘಾಶ್ರೀಗಳೇ ಪೀಠಾದ್ಯಕ್ಷರು. ಮಠದ ಆಸ್ತಿ ದುರುಪಯೋಗದ ಬಗ್ಗೆ ತನಿಖೆ ಮಾಡಿಸಲಿ. ನಾವೇ ದಾಖಲೆ ಕೊಡುತ್ತೇವೆ ಎಂದು ಸವಾಲು ಹಾಕಿದರು.

ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಕ್ರಮ ಕೈಗೊಳ್ಳಲು ಸಿಎಂಗೆ ಪತ್ರ

ಪೋಕ್ಸೋ ಕೇಸ್​​ನಲ್ಲಿ ಜೈಲುಪಾಲಾಗಿರುವ ಮುರುಘಾ ಶರಣರು ಕೇಸ್​ಗೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಮಧು ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಶ್ರೀಗಳು ಅಕ್ರಮ ಕೂಟ ಕಟ್ಟಿಕೊಂಡು ಜೈಲಿನಿಂದಲೇ ಆಡಳಿತ ನಡೆಸುತ್ತಿದ್ದಾರೆ. ಮಠದ SJM ವಿದ್ಯಾಪೀಠದ ಕಾರ್ಯದರ್ಶಿಯಾಗಿ ನಿವೃತ್ತ ನ್ಯಾ. ಎಸ್.ಬಿ.ವಸ್ತ್ರದಮಠ್ ನೇಮಕ ಮಾಡಲಾಗಿದೆ. ಮಠದ ಪೂಜಾ ಕೈಂಕರ್ಯಕ್ಕೆ ಬಸವಪ್ರಭುಶ್ರೀ ನೇಮಿಸಲಾಗಿದೆ. ಮಠದ ಆಸ್ತಿ ಮಾರಾಟ ಮಾಡಿ ಅಧಿಕಾರ ದುರ್ಬಳಕೆ ಬಳಲಾಗುತ್ತಿದೆ. ಹೀಗಾಗಿ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಕ್ರಮ ಕೈಗೊಳ್ಳಲು ಸಿಎಂಗೆ ಪತ್ರ ಬರೆದು ಸಾಮಾಜಿಕ ಕಾರ್ಯಕರ್ತ ಮಧು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮುರುಘಾ ಮಠದಲ್ಲಿ ಶಾಮನೂರು, ಯಡಿಯೂರಪ್ಪನವರ ಹಣವಿದೆ: ಮಾಜಿ ಸಚಿವರ ಸ್ಫೋಟಕ ಆಡಿಯೋ ವೈರಲ್

ಮುರುಘಾಶ್ರೀಗಳನ್ನು ವಜಾಗೊಳಿಸಲು ಹೆಚ್ಚಿದ ಒತ್ತಡ

ಇನ್ನು ಮುರುಘಾಶ್ರೀಗಳನ್ನು ವಜಾಗೊಳಿಸಲು ಒತ್ತಡ ಹೆಚ್ಚಾಗಿದೆ. ಮಾಜಿ ಸಚಿವ ಏಕಾಂತಯ್ಯ ಇಂದು ಸಿಎಂ ಭೇಟಿ ಸಾಧ್ಯತೆ ಇದೆ. ಪೂಜಾ ಕೈಂಕರ್ಯಕ್ಕೆ ಬಸವಪ್ರಭುಶ್ರೀ ನೇಮಕ ಹಿನ್ನೆಲೆ ಸಿಎಂ ಬೊಮ್ಮಾಯಿಗೆ ಭೇಟಿ ಮಾಡಿ ಮನವರಿಕೆ ಮಾಡುವ ಸಾಧ್ಯತೆ ಇದೆ.

Published On - 11:18 am, Wed, 19 October 22