ಶ್ರೀಗಳನ್ನು ಮಠದ ಪೀಠಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಆಗ್ರಹ: ಎಸ್​ಜೆಎಂ ವಿದ್ಯಾಸಂಸ್ಥೆ ಸಿಬ್ಬಂದಿ ಹೆಸರಿನಲ್ಲಿ ಬಹಿರಂಗ ಪತ್ರ ವೈರಲ್

ಸಂತ್ರಸ್ತೆಯರ ಭೇಟಿ ಮಾಡಲು ವಕೀಲರಿಗೆ ನಕಾರ ಮಾಡಿದ್ದು, ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ. ಸಂತ್ರಸ್ತೆಯರ ಭೇಟಿಗೆ ಕೋರ್ಟ್ ಅನುಮತಿಯಿದ್ದರೂ ನಕಾರ.

ಶ್ರೀಗಳನ್ನು ಮಠದ ಪೀಠಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಆಗ್ರಹ: ಎಸ್​ಜೆಎಂ ವಿದ್ಯಾಸಂಸ್ಥೆ ಸಿಬ್ಬಂದಿ ಹೆಸರಿನಲ್ಲಿ ಬಹಿರಂಗ ಪತ್ರ ವೈರಲ್
ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 15, 2022 | 3:48 PM

ಚಿತ್ರದುರ್ಗ: ಪೋಕ್ಸೋ ಕೇಸ್​ನಲ್ಲಿ ಮುರುಘಾ ಶರಣು ಜೈಲುಪಾಲಾಗಿದ್ದು, ಮುರುಘಾ ಮಠದ ಎಸ್​ಜೆಎಂ ವಿದ್ಯಾಸಂಸ್ಥೆ ಸಿಬ್ಬಂದಿ ಹೆಸರಿನಲ್ಲಿ ಬಹಿರಂಗ ಪತ್ರ ವೈರಲ್ ಮಾಡಲಾಗಿದೆ. ಶಿವಮೂರ್ತಿ ಮುರುಘಾಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವಿದ್ದು, ಶ್ರೀಗಳನ್ನು ಮಠದ ಪೀಠಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಲಾಗಿದೆ. ಮಠ, ಸಂಸ್ಥೆಗಳಲ್ಲಿನ ಮುರುಘಾಶ್ರೀ ಭಾವಚಿತ್ರ ತೆರವಿಗೆ ಒತ್ತಾಯಿಸಲಾಗಿದೆ. ಮಠದ ಆಡಳಿತದಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು. ಶರಣ ಸಂಸ್ಕೃತಿ ಉತ್ಸವ ಹೆಸರಲ್ಲಿ ಸಿಬ್ಬಂದಿಯಿಂದ ಹಣ ವಸೂಲಿ ಮಾಡಲಾಗಿದ್ದು, ಹಾಗೆ ಮಾಡಿರುವ ಹಣವನ್ನು ಸಿಬ್ಬಂದಿಗೆ ವಾಪಸ್ ನೀಡಬೇಕು. ಐಷಾರಾಮಿ ಕಾರುಗಳನ್ನು ಮಾರಿ ಮಠದ ಅಭಿವೃದ್ಧಿಗೆ ಬಳಸಿ. ಶ್ರೀಗಳು ಹೆಲಿಕಾಪ್ಟರ್ ಖರೀದಿ ಮಾಡಿದ ಮಾಹಿತಿ ಇದೆ. ಶ್ರೀಗಳ ಆಪ್ತರನ್ನು ಮಠದಲ್ಲಿನ ಹುದ್ದೆಗಳಿಂದ ಮುಕ್ತಿಗೊಳಿಸಿ ಎಂದು ಎಸ್​​ಜೆಎಂ ವಿದ್ಯಾಸಂಸ್ಥೆ ಸಿಬ್ಬಂದಿ ಹೆಸರಿನ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ಸಂತ್ರಸ್ತೆಯರ ಭೇಟಿ ಮಾಡಲು ವಕೀಲರಿಗೆ ನಕಾರ ಆರೋಪ

ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರು ಜೈಲು ಪಾಲಾಗಿದ್ದು, ಸಂತ್ರಸ್ತೆಯರ ಭೇಟಿ ಮಾಡಲು ವಕೀಲರಿಗೆ ನಕಾರ ಮಾಡಿದ್ದು, ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ. ಸಂತ್ರಸ್ತೆಯರ ಭೇಟಿಗೆ ಕೋರ್ಟ್ ಅನುಮತಿಯಿದ್ದರೂ ನಕಾರ. ಬಾಲಕಿಯರಿಗೆ ಕೋಪ ಹೆಚ್ಚಿದೆ, ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಬಿಂಬಿಸಲು ಪ್ರಯತ್ನ ಮಾಡಲಾಗಿದೆ. ನಿಮ್ಹಾನ್ಸ್​ಗೆ ದಾಖಲಿಸಿ ಪ್ರಕರಣಕ್ಕೆ ಟ್ವಿಸ್ಟ್ ನೀಡುವ ಹುನ್ನಾರ ನಡೆದಿದ್ದು, ಚಿತ್ರದುರ್ಗದ CWC ಕಾಣದ ಕೈಗಳ ಒತ್ತಡಕ್ಕೆ ಮಣಿಯುತ್ತಿದೆ. ಸಿಡಬ್ಲ್ಯುಸಿ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುತ್ತೇವೆ. ಸಂತ್ರಸ್ತೆಯರಿಗೆ ಸಮರ್ಪಕ ಆಹಾರವನ್ನೂ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಸಂತ್ರಸ್ತೆಯರ ಪೋಷಕರು ಭೇಟಿಯಾಗಲು ಅವಕಾಶ ನೀಡಿಲ್ಲ ಎಂದು ಚಿತ್ರದುರ್ಗದಲ್ಲಿ ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಕಿಡಿ ಕಾರಿದರು.

ಮುರುಘಾ ಮಠದಿಂದ ಇಬ್ಬರು ಬಾಲಕರು ನಾಪತ್ತೆ:

ಮುರುಘಾ ಮಠದ ಇಬ್ಬರು ವಿದ್ಯಾರ್ಥಿಗಳು ಸೆಪ್ಟೆಂಬರ್​ 8ರಂದು ನಾಪತ್ತೆ ಆಗಿದ್ದಾರೆ. ಮಠದ SJM ಶಾಲೆಯಲ್ಲಿ ಬಾಲಕರು ಓದುತ್ತಿದ್ದರು. ಮಲ್ಲಯ್ಯ(11), ಅಭಯ್​(13) ನಾಪತ್ತೆಯಾದ ವಿದ್ಯಾರ್ಥಿಗಳು. ಮುರುಘಾ ಮಠದ ಜಯದೇವ ಹಾಸ್ಟೆಲ್​ನಲ್ಲಿದ್ದ ವಿದ್ಯಾರ್ಥಿಗಳು. ಸಂಜೆ ಹಾಸ್ಟೆಲ್​ಗೆ ಬಾರದ ಹಿನ್ನೆಲೆ ಸಿಬ್ಬಂದಿಯಿಂದ ತಪಾಸಣೆ ಮಾಡಲಾಗಿದೆ. ಮಕ್ಕಳ ನಾಪತ್ತೆ ಬಗ್ಗೆ ಹಾಸ್ಟೆಲ್ ಸಿಬ್ಬಂದಿ ಪೋಷಕರ ತಿಳಿಸಿದ್ದಾರೆ. ಮಕ್ಕಳು ಮನೆಗೂ ಬಂದಿಲ್ಲ ಎಂದು ಪೋಷಕರು ಹೇಳಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada