ಜೈನ ಮಂದಿರದ ಮೆಟ್ಟಿಲುಗಳ ಮೇಲೆ ಜಾರಿಬಿದ್ದು ಮಾಜಿ ಸಚಿವ ಸುಧಾಕರ್ ಸಹೋದರ ವಿಧಿವಶ

TV9 Digital Desk

| Edited By: ಸಾಧು ಶ್ರೀನಾಥ್​

Updated on:Jul 29, 2021 | 10:57 AM

ಮಂದಿರದ ಮೆಟ್ಟಿಲುಗಳ ಮೇಲೆ ಬಿದ್ದಿದ್ದ ಮಹಾವೀರ್ ಜೈನ್ ಅವರನ್ನು ತಕ್ಷಣ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕಲ್ಪಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಚಳ್ಳಕೆರೆ ನಗರದಲ್ಲಿರುವ ಜೈನ ಮಂದಿರದಲ್ಲಿ ಕಳೆದ ಭಾನುವಾರದಂದು ಈ ದುರ್ದೈವ ಘಟನೆ ನಡೆದಿದೆ.

ಜೈನ ಮಂದಿರದ ಮೆಟ್ಟಿಲುಗಳ ಮೇಲೆ ಜಾರಿಬಿದ್ದು ಮಾಜಿ ಸಚಿವ ಸುಧಾಕರ್ ಸಹೋದರ ವಿಧಿವಶ
ಜೈನ ಮಂದಿರದ ಮೆಟ್ಟಿಲುಗಳ ಮೇಲೆ ಜಾರಿಬಿದ್ದು ಮಾಜಿ ಸಚಿವ ಸುಧಾಕರ್ ಸಹೋದರ ವಿಧಿವಶ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
Follow us

ಚಿತ್ರದುರ್ಗ: ಸಾವು ಹೇಗೆಲ್ಲಾ, ಯಾವೆಲ್ಲಾ ರೂಪದಲ್ಲಿ ಬರುತ್ತದೋ ಯಾರಿಗೂ ಗೊತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸಾವಿನ ನಾನಾ ಸ್ವರೂಪಗಳು ಪ್ರಕಟವಾಗುತ್ತಿವೆ. ಅದರಲ್ಲೂ ಸಿಸಿಟಿವಿ, ಮೊಬೈಲ್ ಕ್ಯಾಮರಾಗಳು ಚಾಲ್ತಿಗೆ ಬಂದಿರುವುದರಿಂದ ಸಾವಿನ ನಾನಾ ರೂಪಗಳು ದೃಶ್ಯ ರೂಪದಲ್ಲಿ ದಾಖಲಾಗುತ್ತಿವೆ.

ಮಾಜಿ ಸಚಿವ ಸುಧಾಕರ್ ಸಹೋದರನ ವಿಷಯದಲ್ಲೂ ಹೀಗೆಯೇ ಆಗಿದೆ. ಮಾಜಿ ಸಚಿವ, ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಡಿ. ಸುಧಾಕರ್ ಸಹೋದರ ಡಿ.ಮಹಾವೀರ್ ಜೈನ್ (73) ಅವರು ಜೈನ ಮಂದಿರದಲ್ಲಿ ಮೆಟ್ಟಿಲುಗಳ ಮೇಲೆ, ಕಾಲು ಜಾರಿ ಬಿದ್ದು ಸಾವಿಗೀಡಾಗಿದ್ದಾರೆ.

ಮಂದಿರದ ಮೆಟ್ಟಿಲುಗಳ ಮೇಲೆ ಬಿದ್ದಿದ್ದ ಮಹಾವೀರ್ ಜೈನ್ ಅವರನ್ನು ತಕ್ಷಣ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕಲ್ಪಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಚಳ್ಳಕೆರೆ ನಗರದಲ್ಲಿರುವ ಜೈನ ಮಂದಿರದಲ್ಲಿ ಕಳೆದ ಭಾನುವಾರದಂದು (ಜುಲೈ 25) ಈ ದುರ್ದೈವ ಘಟನೆ ನಡೆದಿದೆ. ಮೃತ ವ್ಯಕ್ತಿ ಮೆಟ್ಟಿಲಿನಿಂದ ಜಾರಿ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Also Read:

KRS ಡ್ಯಾಂ ಮೆಟ್ಟಿಲ ಕಲ್ಲುಗಳ ಕುಸಿತ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ಜಲಾಶಯ ಬಿರುಕು ಸತ್ಯಶೋಧನೆಗೆ ಬಿಜೆಪಿ ತಂಡ ರಚನೆ

(ex minister d sudhakar brother died at jain mandir in chitradurga)

ತಾಜಾ ಸುದ್ದಿ

Related Stories

Click on your DTH Provider to Add TV9 Kannada