Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಪ್ಪನ ಅಗ್ರಹಾರ ಜೈಲಲ್ಲಿರುವ ಕೊಲೆ ಆರೋಪಿಯಿಂದ ಹಿರಿಯೂರಿನ ಉದ್ಯಮಿಗೆ ಜೀವ ಬೆದರಿಕೆ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಬಹಳ ಹಿಂದಿನಿಂದಲೂ ಆರೋಪಗಳು ಕೇಳಿ ಬರುತ್ತಿವೆ. ನಟ ದರ್ಶನ್ ಅವರನ್ನು ಆ ಜೈಲಿನಲ್ಲಿ ಇರಿಸಿದ ಬಳಿಕ ಅಲ್ಲಿನ ಕರ್ಮಕಾಂಡಗಳು ಒಂದೊಂದಾಗಿ ಹೊರ ಬಂದಿದ್ದವು. ಇದೀಗ ಅದೇ ಜೈಲಿನಿಂದ ಕೊಲೆ ಆರೋಪಿಯೊಬ್ಬ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ್ದಾನೆ.

ಪರಪ್ಪನ ಅಗ್ರಹಾರ ಜೈಲಲ್ಲಿರುವ ಕೊಲೆ ಆರೋಪಿಯಿಂದ ಹಿರಿಯೂರಿನ ಉದ್ಯಮಿಗೆ ಜೀವ ಬೆದರಿಕೆ
ಆರೋಪಿ ಸುಜಯ್ ಭಾರ್ಗವ್ ಹಾಗೂ ಆತನ ವಿರುದ್ಧದ ಪೊಲೀಸ್ ದೂರಿನ ಪ್ರತಿ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: Ganapathi Sharma

Updated on: Apr 15, 2025 | 9:45 AM

ಚಿತ್ರದುರ್ಗ, ಏಪ್ರಿಲ್ 15: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿರುವ (Parappana Agrahara Jail) ಕೊಲೆ ಆರೋಪಿಯೊಬ್ಬ ಚಿತ್ರದುರ್ಗದ (Chitradurga) ಹಿರಿಯೂರಿನ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ (Death threat) ಹಾಕಿರುವ ಆರೋಪ ಕೇಳಿಬಂದಿದೆ. ತುಮಕೂರಿನ ಮಾಜಿ ಮೇಯರ್ ಗಡ್ಡ ರವಿ ಕೊಲೆ ಪ್ರಕರಣದ ಆರೋಪಿ ಸುಜಯ್ ಭಾರ್ಗವ್ ಅಲಿಯಾಸ್ ಸುಜಿ, ಹಿರಿಯೂರಿನ ಉದ್ಯನಿ ಅರ್ಜುನ್ ಸಿಂಗ್​ಗೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವಿದೆ. ಸಹಚರರನ್ನು ಕಳುಹಿಸಿ ಬೆದರಿಕೆ ಹಾಕಿಸಿದ್ದಲ್ಲದೆ, ನಿರಂತರವಾಗಿ ವಾಯ್ಸ್ ಕಾಲ್, ಮೆಸೇಜ್​ಗಳ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಅರ್ಜುನ್ ಸಿಂಗ್​ ಆರೋಪಿಸಿದ್ದಾರೆ.

ಅರ್ಜುನ್ ಸಿಂಗ್ ಅವರು ಹಿರಿಯೂರು ಸರ್ಕಾರಿ ಆಸ್ಪತ್ರೆ ಬಳಿ ಆಯಕಟ್ಟಿನ ಜಾಗದಲ್ಲಿರುವ ಕಟ್ಟಡದಲ್ಲಿ ಮಳಿಗೆ ನಡೆಸುತ್ತಿದ್ದಾರೆ. ಇದನ್ನು ಮೂರು ದಿನದಲ್ಲಿ ಕಟ್ಟಡ ಖಾಲಿ ಮಾಡದಿದ್ದರೆ ಜೀವ ಉಳಿಸಲ್ಲ. ಸುಟ್ಟು ಹಾಕುತ್ತೇನೆಂದು ಸುಜಯ್ ಭಾರ್ಗವ್ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಕೆಲ ದಿನ ಹಿಂದೆ ಇಬ್ಬರು ಹುಡುಗರನ್ನು ಗಾರ್ಮೆಂಟ್ಸ್ ಗೆ ಕಳಿಸಿ ಅವಾಜ್ ಹಾಕಿಸಿದ್ದ. ಜನವರಿ 10 ರಂದು ಸಹ ಅಪರಿಚಿತ ಯುವಕರಿಬ್ಬರು ಬಂದು ಧಮ್ಕಿ ಹಾಕಿದ್ದರು. ಈ ವಿಡಿಯೋ ಸಿಸಿಟಿವಿಲಿ ರೆಕಾರ್ಡ್ ಆಗಿತ್ತು. ಸುಜಯ್ ಕಡೆಯವರೆಂದು ಹೇಳಿಕೊಂಡು ಬಂದು ಯುವಕರು ಧಮ್ಕಿ ಹಾಕಿದ್ದರು. ಈ ಬಗ್ಗೆ ಹಿರಿಯೂರು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈಗ ಮತ್ತೆ ನಿರಂತರ ಕರೆ, ವಾಯ್ಸ್ ಮೆಸೇಜ್ ಮೂಲಕ ಸುಜಯ್ ಧಮ್ಕಿ ಹಾಕುತ್ತಿದ್ದಾನೆ ಎನ್ನಲಾಗಿದೆ. ಕಟ್ಟಡ ಮಾಲೀಕ ಸೂರ್ಯನಾರಾಯಣ, ಅವರ ಪುತ್ರನಿಗೂ ಕರೆ ಮಾಡಿ ಆವಾಜ್ ಹಾಕಿದ್ದಾನೆ. ಸೂರ್ಯನಾರಾಯಣರ ಸಹೋದರ ಚಂದ್ರಶೇಖರ್ ಪುತ್ರನೇ ಸುಜಯ್. ಚಂದ್ರಶೇಖರ್ ದಶಗಳ ಹಿಂದೆಯೇ ಆಸ್ತಿಯಲ್ಲಿ ಪಾಲು ಪಡೆದಿದ್ದರು.

ಇದನ್ನೂ ಓದಿ
Image
ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಹಲವೆಡೆ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ
Image
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
Image
ಸಂವಿಧಾನಕ್ಕೆ ಅಪಚಾರ ಆರೋಪ: ಸಚಿವ ಕೆಎನ್​ ರಾಜಣ್ಣ ವಿರುದ್ಧ ದಾಖಲಾಯ್ತು ದೂರು
Image
ಹುಬ್ಬಳ್ಳಿ ಎನ್‌ಕೌಂಟರ್‌ ಕೇಸ್​: ಪಿಎಸ್​ಐ ಅನ್ನಪೂರ್ಣಗೆ ಮೆಚ್ಚುಗೆಯ ಮಹಾಪೂರ

ಇದನ್ನೂ ಓದಿ: ಲಂಚಕ್ಕಾಗಿ ಕೈದಿ ಮೇಲೆ ಹಲ್ಲೆ: ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ವಿರುದ್ಧ ದೂರು

ನಾನು ನಿನ್ನ ಮಗನಿದ್ದಂತೆ, ನನಗೂ ಪಾಲು ಕೊಡು ಎಂದು ಸುಜಯ್ ಧಮ್ಕಿ ಹಾಕಿದ್ದಾಗಿ ಸೂರ್ಯನಾರಾಯಣ ಹೇಳಿದ್ದು, ಸುಜಯ್ ಮತ್ತು ನಮ್ಮ ಮದ್ಯೆ ಯಾವುದೇ ಆಸ್ತಿ ವಿವಾದ ಇಲ್ಲ ಎಂದಿದ್ದಾರೆ. ಹೀಗಾಗಿ, ಅರ್ಜುನ್ ಸಿಂಗ್​​ಗೆ ಬೆದರಿಸಿ ಮಳಿಗೆ ಖಾಲಿ ಮಾಡಿಸಿ ತನ್ನ ಸುಪರ್ದಿಗೆ ಪಡೆಯುವ ಹುನ್ನಾರ ಸುಜಯ್​ನದ್ದು ಎನ್ನಲಾಗಿದೆ. ಪರಪ್ಪನ ಅಗ್ರಹಾರದಲ್ಲಿರುವ ಪಾತಕಿಯ ಬೆದರಿಕೆ ಕರೆಯಿಂದ ಕಂಗೆಟ್ಟಿರುವ ಉದ್ಯಮಿ, ಕಟ್ಟಡ ಮಾಲೀಕರು ಸದ್ಯ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
Babar Azam: 0, 1, 2... ಬಂದ ಬಾಬರ್, ಹೋದ ಬಾಬರ್
Babar Azam: 0, 1, 2... ಬಂದ ಬಾಬರ್, ಹೋದ ಬಾಬರ್
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ