ಹಿರಿಯೂರು ಪೊಲೀಸರಿಗೆ ತಲೆನೋವಾಗಿದ್ದ ಖದೀಮ ಸಿಕ್ಕಿಬಿದ್ದ: 1ಕೆಜಿಗೂ ಅಧಿಕ ಬಂಗಾರ ವಶಕ್ಕೆ

ಹಿರಿಯೂರು ಡಿವೈಎಸ್ಪಿ ಎಸ್.ಚೈತ್ರಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್​ ಖದೀಮನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಇತನಿಂದ ಬರೋಬ್ಬರಿ 69 ಲಕ್ಷ ರೂ. ಮೌಲ್ಯದ 1 ಕೆಜಿ 3 ಗ್ರಾಂ ಚಿನ್ನ, 68 ಸಾವಿರ ನಗದು ಹಾಗೂ 2 ಬೈಕ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಿರಿಯೂರು ಪೊಲೀಸರಿಗೆ ತಲೆನೋವಾಗಿದ್ದ ಖದೀಮ ಸಿಕ್ಕಿಬಿದ್ದ: 1ಕೆಜಿಗೂ ಅಧಿಕ ಬಂಗಾರ ವಶಕ್ಕೆ
ಹಿರಿಯೂರು ಪೊಲೀಸರಿಗೆ ತಲೆನೋವಾಗಿದ್ದ ಖದೀಮ ಸಿಕ್ಕಿಬಿದ್ದ
Edited By: ಕಿರಣ್ ಹನುಮಂತ್​ ಮಾದಾರ್

Updated on: Jul 24, 2024 | 6:08 PM

ಚಿತ್ರದುರ್ಗ, ಜು.24: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್​ ಖದೀಮನನ್ನು ಹಿರಿಯೂರು ಪೊಲೀಸರು (Hiriyur Police) ಬಂಧಿಸಿದ್ದಾರೆ. ಬಳ್ಳಾರಿ ಹನುಮಂತ(26) ಬಂಧಿತ ಆರೋಪಿ. ಇತನ ಬಳಿಯಿದ್ದ ಬರೋಬ್ಬರಿ 69 ಲಕ್ಷ ರೂ. ಮೌಲ್ಯದ 1 ಕೆಜಿ 3 ಗ್ರಾಂ ಚಿನ್ನ, 68 ಸಾವಿರ ನಗದು ಹಾಗೂ 2 ಬೈಕ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ 15 ಮನೆಗಳ್ಳತನ ಹಾಗೂ 3 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಈ ಕುರಿತು ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಹಿರಿಯೂರು ಡಿವೈಎಸ್ಪಿ ಎಸ್.ಚೈತ್ರಾ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿತ್ತು. ಇದೀಗ ಹಿರಿಯೂರು ಪೊಲೀಸರು ಆತನನ್ನ ಬಂಧಿಸಿದ್ದಾರೆ. ಇತ ವಿವಿಧ ಕಳ್ಳತನ ಪ್ರಕರಗಳಲ್ಲಿ ಭಾಗಿಯಾಗಿ, ಹಿರಿಯೂರು ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ. ಈಗಾಗಲೇ ಬಂಧಿತ ಆರೋಪಿಯಿಂದ ಲಕ್ಷಾಂತರ ರೂಪಾಯಿ ಚಿನ್ನ, ನಗದು ಹಾಗೂ ಎರಡು ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ಕಳ್ಳತನವಾಗಿದ್ದ ಮುರುಘಾಶ್ರೀ ಪುತ್ಥಳಿ ಪತ್ತೆ: ನಾಲ್ವರು ಶಂಕಿತ ಆರೋಪಿಗಳ ಪಾಲಿಗ್ರಫಿ ಪರೀಕ್ಷೆಗೆ ಪೊಲೀಸರ ಸಿದ್ದತೆ

ಇನ್ನು ಇತನ ಮೇಲೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಠಾಣೆಯಲ್ಲಿಯೇ 8 ಪ್ರಕರಣ, ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ 5, ಹೊಸದುರ್ಗ ಠಾಣೆಯಲ್ಲಿ 2, ಅಬ್ಬಿನಹೊಳೆಯಲ್ಲಿ 1, ಚಿತ್ರದುರ್ಗದ ಬಡಾವಣೆ ಠಾಣೆಯಲ್ಲಿ 1, ಬಳ್ಳಾರಿ ಕೌಲ್ ಬಜಾರ್ ಠಾಣೆಯಲ್ಲಿ 1 ಸೇರಿ ಒಟ್ಟು 15 ಮನೆಗಳ್ಳತನ ಮತ್ತು 3 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ದಾವಣಗೆರೆ, ಬಳ್ಳಾರಿ, ಕೊಪ್ಪಳ, ಆಂಧ್ರ ಸೇರಿ ವಿವಿಧ ಕಡೆಗಳಲ್ಲಿ ಕಳ್ಳತನದಲ್ಲಿ ಭಾಗಿಯಾಗಿದ್ದನು. 12 ಪ್ರಕರಣಗಳಲ್ಲಿ ವಾರೆಂಟ್​ಗಳಿದ್ದು, ನಾಪತ್ತೆಯಾಗಿದ್ದ ಆರೋಪಿ ಹನುಮಂತನನ್ನು ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಸವರಾಜ ಮುದನೂರ್

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Loading...
Unable to load recommendations.
Follow Us