ಮುರುಘಾ ಮಠ ಪೋಕ್ಸೋ ಕೇಸ್: ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಮುರುಘಾ ಶ್ರೀ ವಜಾ
ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಮುರುಘಾಶ್ರೀ ಅವರನ್ನು ವಜಾ ಮಾಡಲಾಗಿದೆ. ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಅಧ್ಯಕ್ಷರಾಗಿದ್ದ ಶ್ರೀಗಳು, ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿಯಿಂದ ಸ್ವಾಮೀಜಿಯನ್ನು ವಜಾ ಮಾಡಲಾಗಿದೆ.
ಚಿತ್ರದುರ್ಗ: ಪೋಕ್ಸೋ ಕೇಸ್ನಲ್ಲಿ ಮುರುಘಾಶ್ರೀ ಪೊಲೀಸರ ವಶದಲ್ಲಿದ್ದಾರೆ. ಈ ಹಿನ್ನೆಲೆ ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಮುರುಘಾಶ್ರೀ ಅವರನ್ನು ವಜಾ ಮಾಡಲಾಗಿದೆ. ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಅಧ್ಯಕ್ಷರಾಗಿದ್ದ ಶ್ರೀಗಳು, ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿಯಿಂದ ಸ್ವಾಮೀಜಿಯನ್ನು ವಜಾ ಮಾಡಲಾಗಿದೆ. ವಿಶ್ವಸ್ತ ಸಮಿತಿ ಸದಸ್ಯತ್ವದಿಂದಲೂ ಮುರುಘಾಶ್ರೀ ಅಮಾನತು ಮಾಡಿದ್ದು, ಗೌರವ ಕಾರ್ಯದರ್ಶಿ ಪ್ರೊ.ಕೆ.ಇ.ರಾಧಾಕೃಷ್ಣ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಪತ್ತೆಯಾದ ಮೂವರು ಆರೋಪಿಗಳಿಗಾಗಿ ತೀವ್ರ ಶೋಧ
ಪ್ರಕರಣ ಸಂಬಂಧ ನಾಪತ್ತೆಯಾದ ಪರಮಶಿವಯ್ಯ, ಗಂಗಾಧರಯ್ಯ ಮತ್ತು ಓರ್ವ ಬಾಲಾಪರಾಧಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಸ್ವಾಮೀಜಿ ಬಂಧನ ಆಗುವವರೆಗೂ ಮಠದಲ್ಲಿದ್ದ ಮೂವರು, ಮುರುಘಾಶ್ರೀಗಳು ಅರೆಸ್ಟ್ ಆದ ನಂತರ ಭಯದಿಂದ ನಾಪತ್ತೆಯಾಗಿದೆ. ಮೂವರು ಆರೋಪಿಗಳ ಮನೆಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ತಕ್ಷಣ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಆರೋಪಿಗಳ ಪತ್ತೆಗೆ ಎಸ್ಪಿ ಪರಶುರಾಮ್ ತಂಡ ರಚಿಸಿದ್ದಾರೆ. ಆರೋಪಿಗಳಿಂದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಇಂದು ಎರಡನೇ ದಿನ ಕೂಡ ಮುರುಘಾ ಸ್ವಾಮೀಜಿಗಳಿಗೆ ಡ್ರಿಲ್
ನಿನ್ನೆ ಮದ್ಯಾಹ್ನದ ವರೆಗೂ ವಿಚಾರಣೆ ನಡೆಸಿದ್ದ ಖಾಕಿ ಪಡೆ, ಇಂದು ಎರಡನೇ ದಿನ ಕೂಡ ಮುರುಘಾ ಸ್ವಾಮೀಜಿಗಳಿಗೆ ಡ್ರಿಲ್ ಮಾಡಲಿದ್ದಾರೆ. ಎಸ್.ಪಿ ಪರಶುರಾಮ್ ಹಾಗೂ ಡಿವೈಎಸ್ಪಿ ಅನಿಲ್ರಿಂದ ಮತ್ತೆ ಡ್ರಿಲ್ ಮಾಡಲಿದ್ದು, ಬಾಲಕಿಯರ 164 ಹೇಳಿಕೆ ಹಾಗೂ ವಾರ್ಡ್ನ್ ಹೇಳಿಕೆ ಆಧರಿಸಿ ವಿಚಾರಣೆ ನಡೆಸಲಿದ್ದಾರೆ. ಇಂದು ಜಾತಿನಿಂದನೆ ಕೇಸ್ ವಿಚಾರಣೆ ಮಾಡಲಿರೋ ಪೊಲೀಸರು, ಪೊಲೀಸರ ಪ್ರಶ್ನೆಗೆ ಯೋಚನೆ ಮಾಡುತ್ತಲೇ ಸ್ವಾಮೀಜಿ ಉತ್ತರ ನೀಡುತ್ತಿದ್ದಾರೆ. ತನ್ನದೇನು ತಪ್ಪಿಲ್ಲ, ಇದೊಂದು ವ್ಯವಸ್ಥಿತ ಷಡ್ಯಂತ್ರ ಅಂತಾನೇ ಬಹುತೇಕ ಉತ್ತರಗಳನ್ನು ನೀಡಲಾಗುತ್ತಿದೆ.
ಟೆಕ್ನಿಕಲ್ ಎವಿಡೆನ್ಸ್ ಕಲೆಹಾಕಲು ಪೊಲೀಸರು ಮುಂದಾಗಿದ್ದು, ಇದರ ಜೊತೆಗೆ ಬಯೋಲಾಜಿಕಲ್ ಎವಿಡೆನ್ಸ್ ಸಹ ಕಲೆಹಾಕಲು ಖಾಕಿ ಮುಂದಾಗಿದೆ. ಮಠದ ಸ್ಥಳ ಮಹಜರಿಗೆ ಇಂದು ಪೊಲೀಸರು ಕರೆದೊಯ್ಯಲಿದ್ದಾರೆ. ಈಗಾಗಲೇ ಮಠದಲ್ಲಿ ಬಾಲಕಿಯರನ್ನು ಕರೆದೊಯ್ದ ಮಹಜರು ಮಾಡಲಾಗಿದೆ. ಮಹಜರು ಪ್ರಕ್ರಿಯೆ ಮುಗಿದರೆ ಬಹುತೇಕ ತನಿಖೆ ಮುಕ್ತಾಯ ಆಗಬಹುದು. ನಾಳೆ ಕೋರ್ಟ್ಗೆ ಪೊಲೀಸರು ಹಾಜರು ಪಡಿಸಲಿದ್ದಾರೆ. ಬಹುತೇಕ ಕಸ್ಟಡಿಗೆ ಕೇಳೋ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈಗಾಗಲೇ ಜಾಮೀನು ಕೋರಿ ಶರಣರ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕಸ್ಟಡಿ ಮುಗಿದ ಬಳಿಕ ಅರ್ಜಿ ವಿಚಾರಣೆ ಸಾಧ್ಯತೆ ಎನ್ನಲಾಗುತ್ತಿದೆ. ಮೆಡಿಕಲ್ ಗ್ರೌಂಡ್ ಮೇಲೆ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದು, ನಾಳೆ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ.
ಮತ್ತಮಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.