ಭಾರತ್ ಜೋಡೋ ಯಾತ್ರೆ ಇಂದು ಕೋಟೆನಾಡು ಚಿತ್ರದುರ್ಗಕ್ಕೆ ಪ್ರವೇಶ: ಕೆಲ ಕಡೆ ಮಾರ್ಗ ಬದಲಾವಣೆ, ವಿವರ ಇಲ್ಲಿದೆ

ಚಿತ್ರದುರ್ಗ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಹಲವು ಮಾರ್ಗಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಡಳಿತ ಆದೇಶಿಸಿದೆ.

ಭಾರತ್ ಜೋಡೋ ಯಾತ್ರೆ ಇಂದು ಕೋಟೆನಾಡು ಚಿತ್ರದುರ್ಗಕ್ಕೆ ಪ್ರವೇಶ: ಕೆಲ ಕಡೆ ಮಾರ್ಗ ಬದಲಾವಣೆ, ವಿವರ ಇಲ್ಲಿದೆ
ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ಸಾಂತ್ವನ ಹೇಳಿದ ರಾಹುಲ್ ಗಾಂದಿ
Follow us
TV9 Web
| Updated By: ಆಯೇಷಾ ಬಾನು

Updated on:Oct 10, 2022 | 12:05 PM

ಚಿತ್ರದುರ್ಗ: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬಳೆಕಟ್ಟೆಯಿಂದ ಆರಂಭವಾಗಿರುವ ಭಾರತ್​ ಜೋಡೋ ಪಾದಯಾತ್ರೆ(Bharat Jodo Yatra) ಇಂದು ಕೋಟೆ ನಾಡು ಚಿತ್ರದುರ್ಗ ತಲುಪಲಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಕೆಲ ಕಡೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಹಲವು ಮಾರ್ಗಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಡಳಿತ ಆದೇಶಿಸಿದೆ. ಇಂದು, ನಾಳೆ, ಹುಳಿಯಾರು-ಚಳ್ಳಕೆರೆ ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಹುಳಿಯಾರಿನಿಂದ ಶಿರಾ ಮಾರ್ಗವಾಗಿ ರಾ.ಹೆ 48ರಲ್ಲಿ ಹಿರಿಯೂರಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಹಾಗೂ ಚಳ್ಳಕೆರೆಯಿಂದ ಚಿತ್ರದುರ್ಗ ಮಾರ್ಗವಾಗಿ ಹಿರಿಯೂರು ತಲುಪಲು ಮಾರ್ಗ ಬದಲಾವಣೆ ಮಾಡಲಾಗಿದೆ.

ಅ.12 ಮತ್ತು 14ರಂದು ಚಳ್ಳಕೆರೆ-ಬಳ್ಳಾರಿ ರಾ.ಹೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಬಳ್ಳಾರಿಯಿಂದ ಹೊಸಪೇಟೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಸಂಚರಿಸಲು ಮಾರ್ಗ ಬದಲಾವಣೆ ಮಾಡಲಾಗಿದೆ. ಹಿರಿಯೂರಿನಿಂದ ಚಿತ್ರದುರ್ಗ ಮಾರ್ಗವಾಗಿ ಹೊಸಪೇಟೆ, ಬಳ್ಳಾರಿಗೆ ಸಂಚರಿಸಲು ಜಿಲ್ಲಾಡಳಿತ ತಿಳಿಸಿದೆ. ಭದ್ರತೆ, ಸುಗಮ ಸಂಚಾರ ದೃಷ್ಟಿಯಿಂದ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ.

ತುಮಕೂರು ಜಿಲ್ಲೆಯಲ್ಲಿ ಇಂದು ಕೊನೆಗೊಳ್ಳಲಿದೆ ಯಾತ್ರೆ

ಚಿಕ್ಕನಾಯಕನಹಳ್ಳಿ ತಾಲೂಕಿನ ಬಳೆಕಟ್ಟೆಯಿಂದ ಯಾತ್ರೆ ಆರಂಭವಾಗಿದೆ. ಮಧ್ಯಾಹ್ನ ಬರಕನಾಳುನಿಂದ ಬಸವನಗುಡಿವರೆಗೂ ಯಾತ್ರೆ ನಡೆಯಲಿದ್ದು ಹುಳಿಯಾರಿನಲ್ಲಿ ರಾಹುಲ್ ಗಾಂಧಿ ಕಾರ್ನರ್ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಈಗ ತುಂತುರು ಮಳೆಯಲ್ಲೇ ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ದಾರೆ. ಪಾದಯಾತ್ರೆಯಲ್ಲಿ ಡಿಕೆ ಶಿವಕುಮಾರ್, ಪರಮೇಶ್ವರ್, ಜಯಚಂದ್ರ ಸಾಥ್ ಸೇರಿದಂತೆ ಸ್ಥಳೀಯ ಶಾಸಕರು, ನಾಯಕರು ರಾಹುಲ್​ಗೆ ಸಾಥ್ ನೀಡಿದ್ದಾರೆ.

ನಿನ್ನೆ ರಾತ್ರಿ ಚಿಕ್ಕನಾಯಕನಹಳ್ಳಿಯ ಪೋಚಿಕಟ್ಟೆಯಲ್ಲಿ ಕಾಂಗ್ರೆಸ್ ನಾಯಕರು ವಾಸ್ತವ್ಯ ಹೂಡಿದ್ದರು. ಇನ್ನು ಪಾದಯಾತ್ರೆ ವೇಳೆ ರಸ್ತೆ ಬದಿ ನಿಂತಿದ್ದ ಲಂಬಾಣಿ ಸಮುದಾಯದ ಜೊತೆ ರಾಹುಲ್ ಗಾಂಧಿ ಮಾತನಾಡಿದರು. ಮಹಿಳೆಯರು ತಮ್ಮ ಸಾಂಪ್ರದಾಯಿಕ ನೃತ್ಯ ಮಾಡಿ ಮನರಂಜನೆ ನೀಡಿದರು.

ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ಸಾಂತ್ವನ ಹೇಳಿದ ರಾಹುಲ್

ಇನ್ನು ಪಾದಯಾತ್ರೆ ವೇಳೆ ದೌರ್ಜನ್ಯಕ್ಕೆ ಒಳಗಾದ ದಲಿತ ಕುಟುಂಬದವರನ್ನೂ ರಾಹುಲ್ ಮಾತನಾಡಿಸಿದ್ದಾರೆ. ಪಾದಯಾತ್ರೆ ವೇಳೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯಲ್ಲಿ ದೌರ್ಜನ್ಯಕ್ಕೊಳಗಾದ ಕುಟುಂಬಸ್ಥರನ್ನು ತುಮಕೂರಿಗೆ ಕರೆಸಿಕೊಂಡು ರಾಹುಲ್ ಸಾಂತ್ವನ ಹೇಳಿದರು.

ಇನ್ನು ಇಂದಿನಿಂದ ಅಕ್ಟೋಬರ್ 14ರವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದ್ದು ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನಲ್ಲಿ ಯಾತ್ರೆ ಸಾಗಲಿದೆ. ಈ ಹಿನ್ನೆಲೆ ಪೊಲೀಸ್ ಭದ್ರತೆ ಹೆಚ್ಚು ಮಾಡಲಾಗಿದೆ. ಇಬ್ಬರು SP, 7 ಡಿವೈಎಸ್​ಪಿ, 29 ಪಿಐ, 89 ಪಿಎಸ್​ಐ, ಕೆಎಸ್ಆರ್​ಪಿ 5, DAR 7 ತುಕಡಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ರಾಹುಲ್ ಗಾಂಧಿ ಬರುವ ವೇಳೆ ಕಳ್ಳನ ಕೈ ಚಳಕ

ಎಲ್ಲರೂ ರಾಹುಲ್ ಗಾಂಧಿ ನೋಡಲು ಮುಗಿಬಿದ್ದಾಗ ಕಳ್ಳ ತನ್ನ ಕೈ ಚಳಕ ಪ್ರದರ್ಶಿಸಿದ್ದಾನೆ. ವ್ಯಕ್ತಿಯೊಬ್ಬನ ಜೇಬಿಗೆ ಕೈ ಹಾಕಿದ್ದು ಆತ ಹಿಂದೆ ತಿರುಗಿ ನೋಡಿದ್ದಾನೆ. ಜನರಿಗೆ ಕೃತ್ಯ ಗೊತ್ತಾಗ್ತಿದ್ದಂತೆ ಅಲ್ಲಿಂದ ಓಟ ಕಿತ್ತಿದ ಕಳ್ಳನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಟೈಮ್​ ಲೈನ್

ಪಾದಯಾತ್ರೆ ಇಂದು ಬೆಳಗ್ಗೆ 11:30ಕ್ಕೆ ಹುಳಿಯಾರ್ ರಸ್ತೆ ಮೂಲಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣ ಪ್ರವೇಶ ಮಾಡಲಿದೆ. ಬಳಿಕ ಹಿರಿಯೂರಿನ ವೇದಾವತಿ ನಗರ ಬಳಿ ಸಂಜೆವರೆಗೆ ವಿಶ್ರಾಂತಿ ಪಡೆದು ಸಂಜೆ 4ಗಂಟೆಗೆ ಹಿರಿಯೂರಿನ ಹರ್ತಿಕೋಟೆ ಗ್ರಾಮದವರೆಗೆ ಯಾತ್ರೆ ಸಾಗಲಿದೆ. ಹರ್ತಿಕೋಟೆ ಬಳಿ ವಾಸ್ತವ್ಯ ಹೂಡಲಿದ್ದು. ಅ. 11ರ ಬೆಳಗ್ಗೆ 6:30ಕ್ಕೆ ಹರ್ತಿಕೋಟೆಯಿಂದ ಯಾತ್ರೆ ಆರಂಭವಾಗಲಿದೆ. ಬೆಳಗ್ಗೆ 11ಗಂಟೆಗೆ ಸಾಣೀಕೆರೆ ಗ್ರಾಮದ ಬಳಿ ವಿಶ್ರಾಂತಿ ಪಡೆದು ಸಂಜೆ 4ಕ್ಕೆ ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಮದಿಂದ ಯಾತ್ರೆ ಆರಂಭವಾಗುತ್ತೆ. ಸಂಜೆ7 ಗಂಟೆಗೆ ಸಿದ್ದಾಪುರ ಬಳಿ ವಿಶ್ರಾಂತಿ. ಸಿದ್ದಾಪುರ ಬಳಿ ರಾತ್ರಿ ವಾಸ್ತವ್ಯ ಹೂಡಿ ಅ. 12 ರ ಬೆಳಗ್ಗೆ 6:30ಕ್ಕೆ ಚಳ್ಳಕೆರೆ ಟೌನ್ ನಿಂದ ಯಾತ್ರೆ ಆರಂಭವಾಗುತ್ತೆ. ಬೆಳಗ್ಗೆ 11ಕ್ಕೆ ಗಿರಿಯಮ್ಮನಹಳ್ಳಿ ಬಳಿ ವಿಶ್ರಾಂತಿ. ಸಂಜೆ 4ಗಂಟೆಗೆ ಯಾತ್ರೆ ಮತ್ತೆ ಆರಂಭ, ಸಂಜೆ 7ಗಂಟೆಗೆ ಹಿರೇಹಳ್ಳಿ ಬಳಿ ವಾಸ್ತವ್ಯ.

ಅ.14 ಬೆಳಗ್ಗೆ 6:30ಕ್ಕೆ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದಿಂದ ಯಾತ್ರೆ ಆರಂಭವಾಗಲಿದ್ದು ಬೆಳಗ್ಗೆ 11ಕ್ಕೆ ಕೋನಸಾಗರ ಗ್ರಾಮದ ಬಳಿ ವಿಶ್ರಾಂತಿ, ಸಂಜೆ 4ಕ್ಕೆ ಯಾತ್ರೆ ಶುರುವಾಗಿ ಸಂಜೆ 7ಕ್ಕೆ ರಾಂಪುರ ಬಳಿ ವಾಸ್ತವ್ಯ. ಅ.15ರ ಬೆಳಗ್ಗೆ 6:30ಕ್ಕೆ ರಾಂಪುರದಿಂದ ಯಾತ್ರೆ ಆರಂಭವಾಗಿ ಬೆಳಗ್ಗೆ 11ಕ್ಕೆ ಆಂಧ್ರ ಪ್ರದೇಶದ ಮಾದೇನಹಳ್ಳಿ ಬಳಿ ವಿಶ್ರಾಂತಿ. ಸಂಜೆ 7ಕ್ಕೆ ಬಳ್ಳಾರಿ ಸಮೀಪದ ಓಬಳಾಪುರಂ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

Published On - 9:34 am, Mon, 10 October 22

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ