ಚಿತ್ರದುರ್ಗ: 8 ತಿಂಗಳ ಮಗು ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
2022ರ ನವಂಬರ್.19 ರಂದು ಎಂಟು ತಿಂಗಳ ಮಗು ಮೇಲೆ ಈಶಣ್ಣ(37) ಎಂಬ ಅಪರಾಧಿ ಅತ್ಯಾಚಾರವೆಸಗಿದ್ದ. ಈ ಕುರಿತು ತುರುವನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ನ್ಯಾಯಾಧೀಶರಾದ ಬಿ.ಕೆ.ಕೋಮಲಾ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ.
ಚಿತ್ರದುರ್ಗ, ಅ.11: ಪೋಕ್ಸೋ ಕೇಸ್(Pocs0 Case)ನ ಅಪರಾಧಿಗೆ 20 ವರ್ಷ ಜೈಲು, 25 ಸಾವಿರ ರೂ. ದಂಡವನ್ನು ವಿಧಿಸಿ ಚಿತ್ರದುರ್ಗ (Chitradurga) ದ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. 2022ರ ನವಂಬರ್.19 ರಂದು ಎಂಟು ತಿಂಗಳ ಮಗು ಮೇಲೆ ಈಶಣ್ಣ(37) ಎಂಬ ಅಪರಾಧಿ ಅತ್ಯಾಚಾರವೆಸಗಿದ್ದ. ಈ ಕುರಿತು ತುರುವನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ನ್ಯಾಯಾಧೀಶರಾದ ಬಿ.ಕೆ.ಕೋಮಲಾ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಸಹೋದರಿಯ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಅಪರಾಧಿಗೆ ಒಡಿಶಾ ಹೈಕೋರ್ಟ್ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಜೊತೆಗೆ ರಕ್ಷಾ ಬಂಧನದಂದೇ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆಗೆ ಆದೇಶಿಸಿತ್ತು. ಹಾಗೆಯೇ ಅವಳು 14 ವರ್ಷದವಳಿದ್ದಾಗ ಆಕೆ ಗರ್ಭಧರಿಸುವಂತೆ ಮಾಡಿ, ಬಳಿಕ ಗರ್ಭಪಾತ ಮಾಡಿಸಿರುವ ಆರೋಪದ ಮೇಲೆ ನ್ಯಾಯಮೂರ್ತಿ ಎಸ್‌ಕೆ ಸಾಹೂ ಅಪರಾಧಿಗೆ 40,000 ರೂ. ದಂಡ ವಿಧಿಸಿದ್ದರು. ಅದನ್ನು ಕೊಡಲು ಸಾಧ್ಯವಾಗದಿದ್ದರೆ ಅಪರಾಧಿಗೆ ಇನ್ನೂ ಎರಡು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ:POCSO Act: ಹೆಚ್ಚುತ್ತಿರುವ ಪೋಕ್ಸೋ ಕೇಸ್ -9ನೇ ತರಗತಿಯಿಂದ ಕಾಯ್ದೆ ಬಗ್ಗೆ ಶಿಕ್ಷಣ, ಪಠ್ಯ ರಚಿಸಲು ಹೈಕೋರ್ಟ್ ಸೂಚನೆ
ಅಷ್ಟೇ ಅಲ್ಲ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ 30 ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು. ಅಪರಾಧಿ ಮುರುಗೇಶ್ಗೆ ಎಂಬಾತನಿಗೆ 30 ವರ್ಷ ಜೈಲುಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ದೇವೆಮಾನೆ ಅವರು ಆದೇಶಿಸಿದ್ದರು. ಇತ 2022 ರ ಅಕ್ಟೋಬರ್ 9ರಂದು ಎಂಟು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಈ ಪ್ರಕರಣ ಸಂಬಂಧ ಮುಳಬಾಗಲು ಗ್ರಾಮಾಂತರ ಠಾಣಾ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ನ್ಯಾಯಾಧೀಶರಾದ ದೇವೆಮಾನೆ ಅವರು ವಿಚಾರಣೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದರು.
ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ