AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ನೂತನ ಕಟ್ಟಡದಲ್ಲಿ ಇಲ್ಲ ಶೌಚಾಲಯ; ಅಧಿಕಾರಿಗಳು ಕಂಗಾಲು

ಸೂಕ್ತ ಕಟ್ಟಡವಿಲ್ಲದೆ ಕೇಂದ್ರಿಯ ವಿದ್ಯಾಲಯ ಆರಂಭದ ಕಾರ್ಯ ನೆನೆಗುದಿಗೆ ಬಿದ್ದಿದೆ. ಮತ್ತೊಂದು ಕಡೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡದ ಅಸಲಿಯತ್ತು ಬಯಲಾಗಿದೆ. ಇನ್ನು ಬಿಜೆಪಿ ಆಡಳಿತದ ವೇಳೆಯೇ ಈ ಗೋಲ್ ಮಾಲ್ ನಡೆದಿರುವ ಬಗ್ಗೆ ಪ್ರಶ್ನೆ ಎದ್ದಿದೆ. ಬಿಜೆಪಿ ಎಂಎಲ್​ಸಿಯೇ ಈ ಬಗ್ಗೆ ಆರೋಪ ಮಾಡುತ್ತಿದ್ದಾರೆ.

ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ನೂತನ ಕಟ್ಟಡದಲ್ಲಿ ಇಲ್ಲ ಶೌಚಾಲಯ; ಅಧಿಕಾರಿಗಳು ಕಂಗಾಲು
ನೂತನ ಕಟ್ಟಡ
TV9 Web
| Updated By: preethi shettigar|

Updated on: Feb 15, 2022 | 9:44 AM

Share

ಚಿತ್ರದುರ್ಗ: ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದೆ. ಆದರೆ, ಸೂಕ್ತ ಕಟ್ಟಡ ಸಿಗದೆ ವಿದ್ಯಾಲಯ ಆರಂಭ ನೆನೆಗುದಿಗೆ ಬಿದ್ದಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ನೂತನ ಕಟ್ಟಡವೊಂದನ್ನು (Building) ಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಶೌಚಾಲಯವೇ(Toilet) ಇಲ್ಲದೆ ಕಾಲೇಜು ಕಟ್ಟಡ ನಿರ್ಮಾಣ ಕಂಡು ಅಧಿಕಾರಿಗಳು ಕಂಗಾಲಾಗಿದ್ದಾರೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ದೂರು ನೀಡಿರುವುದಾಗಿ ಬಿಜೆಪಿ(BJP) ಎಂಎಲ್​ಸಿ ಕೆ.ಎಸ್.ನವೀನ್ ಕಿಡಿಕಾರಿದ್ದಾರೆ.

ಚಿತ್ರದುರ್ಗ ನಗರದ ಸೈನ್ಸ್ ಕಾಲೇಜು ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿಯಲ್ಲಿ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡವೊಂದು ನಿರ್ಮಾಣ ಆಗಿದೆ. ಕೇಂದ್ರಿಯ ವಿದ್ಯಾಲಯಕ್ಕೆ ಕಟ್ಟಡ ಅಗತ್ಯವಿರುವ ಕಾರಣ ಈ ಕಟ್ಟಡವನ್ನು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಪರಿಶೀಲಿಸಿದ್ದಾರೆ. ಆದರೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಈ ಕಟ್ಟಡದಲ್ಲಿ ಶೌಚಾಲಯ ವ್ಯವಸ್ಥೆಯೇ ಇಲ್ಲ.

ಕಟ್ಟಡ ನಿರ್ಮಾಣ ಮಾಡಿರುವ ಕ್ರೈಸ್ ಸಂಸ್ಥೆಯ (karnataka residential education institutions society) ಅಧಿಕಾರಿಗಳನ್ನು ಈ ಕುರಿತು ಪ್ರಶ್ನೆ ಮಾಡಿದರೆ ಉಡಾಫೆ ಉತ್ತರ ನೀಡಿದ್ದಾರೆ. ಪ್ರಶ್ನಿಸಿದ ಬಳಿಕ ತೋರ್ಪಡಿಕೆಗೆ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಹೀಗಾಗಿ, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಚಿತ್ರಗಳೊಂದಿಗೆ ದೂರು ನೀಡಿದ್ದೇನೆ. ಇನ್ನು ಮುಂದೆ ಕ್ರೈಸ್​ಗೆ ಕಟ್ಟಡ ಕಾಮಗಾರಿ ನೀಡಬೇಡಿ ಎಂದು ಮನವಿ ಮಾಡಿದ್ದೇನೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದ್ದಾರೆ.

ಇನ್ನು ಸೂಕ್ತ ಕಟ್ಟಡವಿಲ್ಲದೆ ಕೇಂದ್ರಿಯ ವಿದ್ಯಾಲಯ ಆರಂಭದ ಕಾರ್ಯ ನೆನೆಗುದಿಗೆ ಬಿದ್ದಿದೆ. ಮತ್ತೊಂದು ಕಡೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡದ ಅಸಲಿಯತ್ತು ಬಯಲಾಗಿದೆ. ಇನ್ನು ಬಿಜೆಪಿ ಆಡಳಿತದ ವೇಳೆಯೇ ಈ ಗೋಲ್ ಮಾಲ್ ನಡೆದಿರುವ ಬಗ್ಗೆ ಪ್ರಶ್ನೆ ಎದ್ದಿದೆ. ಬಿಜೆಪಿ ಎಂಎಲ್​ಸಿಯೇ ಈ ಬಗ್ಗೆ ಆರೋಪ ಮಾಡುತ್ತಿದ್ದಾರೆ.

ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಅವರು ಸಹ ವಿಧಾನ ಪರಿಷತ್ ಸದಸ್ಯ ನವೀನ್​ಗೆ ಸಾಥ್ ನೀಡಿದ್ದು, ನನ್ನ ಕ್ಷೇತ್ರದಲ್ಲಿ ಕ್ರೈಸ್ ಸಂಸ್ಥೆ ಬದಲು ಲೋಕೋಪಯೋಗಿ ಇಲಾಖೆಗೆ ಕಾಮಗಾರಿ ನೀಡಿದ್ದೇವೆ. ಅಂತೆಯೇ ಇಬ್ಬರೂ ಮಾತಾಡಿಕೊಂಡು ಸದನದ ನಡೆಯುತ್ತಿರುವ ಸಂದರ್ಭದಲ್ಲೇ ಹೆಚ್ಚಿನ ಹಣ ಮಂಜೂರು ಮಾಡಿಸುತ್ತೇವೆ. ಎಪ್ರಿಲ್ ವೇಳೆ ಕೇಂದ್ರಿಯ ವಿದ್ಯಾಲಯಕ್ಕೆ ಬೇಕಾದಂತೆ ಕಟ್ಟಡ ನಿರ್ಮಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಸೈನ್ಸ್ ಕಾಲೇಜು ಕಟ್ಟಡ ಅವೈಜ್ಞಾನಿಕವಾಗಿ ನಿರ್ಮಾಣ ಆಗಿದೆ. ಹೀಗಾಗಿ, ಈ ಬಗ್ಗೆ ತನಿಖೆ ನಡೆಸಿ ಕ್ರೈಸ್ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಶೀಘ್ರ ಉಪಯುಕ್ತ ಕಟ್ಟಡವನ್ನಾಗಿ ನಿರ್ಮಾಣ ಮಾಡಿ ಕೇಂದ್ರಿಯ ವಿದ್ಯಾಲಯ ಆರಂಭಕ್ಕೆ ಮುಹೂರ್ತ ನಿಗದಿ ಮಾಡಬೇಕಿದೆ.

ವರದಿ: ಬಸವರಾಜ ಮುದನೂರ್

ಇದನ್ನೂ ಓದಿ: ಕಟ್ಟಡವೊಂದನ್ನು ಉದ್ಘಾಟಿಸಲು ಶಾಲಾ ಮಕ್ಕಳಂತೆ ಕಚ್ಚಾಡಿದರು ಸಚಿವ ಎಮ್​ಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ!

ಕಟ್ಟಡ ಉದ್ಘಾಟನೆ ವೇಳೆ ಟೇಪ್ ಕಟ್ ಮಾಡುವ ವಿಚಾರಕ್ಕೆ ಗಲಾಟೆ: ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್