AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆನಾಡಿನಲ್ಲಿ ಬುಡಕಟ್ಟು ಸಂಸ್ಕೃತಿ ಅನಾವರಣ, ಮುಳ್ಳು ಗಿಡದಿಂದಲೇ ದೇಗುಲ ನಿರ್ಮಾಣ

ಚಿತ್ರದುರ್ಗ: ಒಂದು ಸಣ್ಣ ಮುಳ್ಳು ಚುಚ್ಚಿದ್ರೆ ತಡೆದುಕೊಳ್ಳಲು ಆಗುವುದಿಲ್ಲ. ಆದ್ರೆ, ಅಲ್ಲಿ ಮಾತ್ರ ಮುಳ್ಳಿನ ರಾಶಿಯ ಮೇಲೆ ಕುಣಿದಾಡುವ ವಿಶಿಷ್ಟ ಆಚರಣೆ ಇಂದಿಗೂ ಜೀವಂತವಾಗಿದೆ. ವಿಶೇಷ ಅಂದ್ರೆ ಅಲ್ಲಿ ಮುಳ್ಳಿನಿಂದಲೇ ದೇಗುಲ ನಿರ್ಮಾಣವಾಗಿದೆ. ಅಪರೂಪದ ಬುಡಕಟ್ಟು ಉತ್ಸವಕ್ಕೆ ಕೋಟೆನಾಡು ಸಜ್ಜಾಗಿದೆ. ಮುಳ್ಳಿನಿಂದ ಗುಡಿ. ಮುಳ್ಳುಗಿಡದಿಂದಲೇ ಗೋಪುರ. ಮುಳ್ಳುಗಿಡದಿಂದಲೇ ನಿರ್ಮಾಣವಾದ ದೇಗುಲದ ಮೇಲೆ ಕಳಶ ಪ್ರತಿಷ್ಟಾಪನೆ. ಮುಳ್ಳಿನಲ್ಲೇ ನಡೆದಾಡುತ್ತಿದ್ರೂ ನೋವಿಲ್ಲ. ಮುಳ್ಳಿನ ರಾಶಿಯ ಮೇಲೆ ಹತ್ತಿ ಇಳಿಯುತ್ತಿದ್ರೂ ಕಿಚ್ಚಿಂತು ಅಳುಕುತ್ತಿಲ್ಲ. ಅಷ್ಟಕ್ಕೂ ಇದು ಬುಡಕಟ್ಟು ಸಮುದಾಯದ ವಿಶಿಷ್ಟ ಸಂಸ್ಕೃತಿಯ […]

ಕೋಟೆನಾಡಿನಲ್ಲಿ ಬುಡಕಟ್ಟು ಸಂಸ್ಕೃತಿ ಅನಾವರಣ, ಮುಳ್ಳು ಗಿಡದಿಂದಲೇ ದೇಗುಲ ನಿರ್ಮಾಣ
ಸಾಧು ಶ್ರೀನಾಥ್​
|

Updated on:Jan 09, 2020 | 7:34 AM

Share

ಚಿತ್ರದುರ್ಗ: ಒಂದು ಸಣ್ಣ ಮುಳ್ಳು ಚುಚ್ಚಿದ್ರೆ ತಡೆದುಕೊಳ್ಳಲು ಆಗುವುದಿಲ್ಲ. ಆದ್ರೆ, ಅಲ್ಲಿ ಮಾತ್ರ ಮುಳ್ಳಿನ ರಾಶಿಯ ಮೇಲೆ ಕುಣಿದಾಡುವ ವಿಶಿಷ್ಟ ಆಚರಣೆ ಇಂದಿಗೂ ಜೀವಂತವಾಗಿದೆ. ವಿಶೇಷ ಅಂದ್ರೆ ಅಲ್ಲಿ ಮುಳ್ಳಿನಿಂದಲೇ ದೇಗುಲ ನಿರ್ಮಾಣವಾಗಿದೆ. ಅಪರೂಪದ ಬುಡಕಟ್ಟು ಉತ್ಸವಕ್ಕೆ ಕೋಟೆನಾಡು ಸಜ್ಜಾಗಿದೆ.

ಮುಳ್ಳಿನಿಂದ ಗುಡಿ. ಮುಳ್ಳುಗಿಡದಿಂದಲೇ ಗೋಪುರ. ಮುಳ್ಳುಗಿಡದಿಂದಲೇ ನಿರ್ಮಾಣವಾದ ದೇಗುಲದ ಮೇಲೆ ಕಳಶ ಪ್ರತಿಷ್ಟಾಪನೆ. ಮುಳ್ಳಿನಲ್ಲೇ ನಡೆದಾಡುತ್ತಿದ್ರೂ ನೋವಿಲ್ಲ. ಮುಳ್ಳಿನ ರಾಶಿಯ ಮೇಲೆ ಹತ್ತಿ ಇಳಿಯುತ್ತಿದ್ರೂ ಕಿಚ್ಚಿಂತು ಅಳುಕುತ್ತಿಲ್ಲ. ಅಷ್ಟಕ್ಕೂ ಇದು ಬುಡಕಟ್ಟು ಸಮುದಾಯದ ವಿಶಿಷ್ಟ ಸಂಸ್ಕೃತಿಯ ಅನಾವರಣ.

ಮುಳ್ಳು ಗಿಡದಿಂದಲೇ ದೇಗುಲ ನಿರ್ಮಾಣ! ಕೋಟೆನಾಡು ಚಿತ್ರದುರ್ಗ ಜಿಲ್ಲೆ ಅಂದ್ರೆ ಬುಡಕಟ್ಟು ಸಂಪ್ರದಾಯ ಹೆಚ್ಚಿರೋ ನೆಲ. ಅದ್ರಲ್ಲೂ ಗೊಲ್ಲ, ಕಾಡುಗೊಲ್ಲ ಸಮುದಾಯದ ಜನ ಇಲ್ಲಿ ಹೆಚ್ಚಿದ್ದಾರೆ. ಈ ನಡುವೆ ಚಳ್ಳಕೆರೆ ತಾಲ್ಲೂಕಿನ ಪುರ್ಲಹಳ್ಳಿಯಲ್ಲಿ ವಿಶೇಷವಾದ ಮುಳ್ಳಿನ ಉತ್ಸವವೇ ಜರುಗುತ್ತದೆ. ಪುರ್ಲಹಳ್ಳಿಯ ಹೊರ ವಲಯದಲ್ಲಿರುವ ‘ವಸಲುದಿಬ್ಬ’ ಎಂಬ ಪ್ರದೇಶದಲ್ಲಿ ಸುಮಾರು 15ದಿನಗಳ ಕಾಲ ಕ್ಯಾತಪ್ಪ ದೇವರ ಜಾತ್ರೆ ನಡೆಯುತ್ತೆ . ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪ ದೇವರ ವಿಶಿಷ್ಟ ಜಾತ್ರೆ ಇದಾಗಿದ್ದು ವಸಲು ದಿಬ್ಬದಲ್ಲಿ 20ಅಡಿ ಎತ್ತರ, 15ಅಡಿ ಸುತ್ತಳತೆಯಲ್ಲಿ ಬಾರೇಕಳ್ಳಿ ಅಂದ್ರೆ ಮುಳ್ಳಿನ ಗಿಡದಿಂದಲೇ ಗೋಪುರ ನಿರ್ಮಿಸಲಾಗುತ್ತೆ. ಗೋಪುರದ ತುದಿಯಲ್ಲಿ ಕಳಶವಿಟ್ಟು ಗುಡಿಯಲ್ಲಿ ಕ್ಯಾತಪ್ಪ ದೇವರನ್ನು ಪ್ರತಿಷ್ಠಾಪಿಸಲಾಗುತ್ತೆ .

ಇನ್ನು 13ಗುಡಿಕಟ್ಟು ಸಮುದಾಯದವ್ರು ತಿಂಗಳ ಕಾಲ ‘ನವಣೆ’ ವೃತ ಆಚರಿಸುತ್ತಾರೆ. ಈ ನವಣೆ ವೃತ ಹಿಂದೆ ದೊಡ್ಡ ಕತೆ ಇದೆ. ಈ ಸಮಯದಲ್ಲಿ ಈ ಸಮುದಾಯದವರು ನವಣೆ ಮತ್ತು ಹುರುಳಿಯನ್ನು ಒಂದು ತಿಂಗಳು ಕಾಲ ಸೇವಿಸುವುದಿಲ್ಲ. ಎಷ್ಟು ಕಟ್ಟು ನಿಟ್ಟು ಅಂದ್ರೆ ನವಣೆ ಬೆಳೆದ ಹೊಲದಲ್ಲೇ ಹೋಗಲ್ವಂತೆ. ಹೀಗೆ ಮುಳ್ಳಿನಿಂದಲೇ ನಿರ್ಮಾಣವಾಗಿರೋ ದೇಗುಲದ ಮೇಲಿನ ಕಳಶವನ್ನ ಜನವರಿ 13 ರಂದು ಕೆಳಗಿಳಿಸಲಾಗುತ್ತೆ. ಬರಿಗಾಲಿನಲ್ಲಿ, ಬರಿಮೈಯಲ್ಲಿ ಮುಳ್ಳಿನ ದೇಗುಲ ಏರಿ ಕಳಶ ಇಳಿಸುವುದೇ ಒಂದು ರೋಚಕ. ಆ ಕೆಲಸವನ್ನ ಈರಗಾರರ ವಂಶಸ್ಥರು ಮಾಡ್ತಾರೆ.

ಒಟ್ನಲ್ಲಿ ಆಧುನಿಕತೆಯ ಭರಾಟೆಯ ನಡುವೆಯೂ ಕೋಟೆನಾಡಿನಲ್ಲಿ ಇಂದಿಗೂ ಹಳೇಯ ಆಚರಣೆಗಳನ್ನ ಜೀವಂತವಾಗಿ ಇಟ್ಟುಕೊಳ್ಳಲಾಗಿದೆ. ಆ ಮೂಲಕ ತಮ್ಮ ವಿಶಿಷ್ಟ ಸಂಸ್ಕೃತಿಯನ್ನ ಉಳಿಸಿಕೊಂಡಿದ್ದಾರೆ.

Published On - 7:33 am, Thu, 9 January 20