ಸುಗಮ ಸಂಚಾರಕ್ಕೆ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ಸ್​ ಅಡ್ಡಿ: ವಾಹನ ಸವಾರರಿಗೆ ಕಿರಿಕಿರಿ

ಕೋಟೆನಾಡು ಚಿತ್ರದುರ್ಗದಲ್ಲಿ ಪೊಲೀಸ್ ಇಲಾಖೆ ಅವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಿದೆ. ಪರಿಣಾಮ ವಾಹನ ಸವಾರರು, ಪಾದಾಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ಸುಗಮ ಸಂಚಾರಕ್ಕೆ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ಸ್​ ಅಡ್ಡಿ: ವಾಹನ ಸವಾರರಿಗೆ ಕಿರಿಕಿರಿ
ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ಸ್
Edited By:

Updated on: Aug 24, 2023 | 11:08 PM

ಚಿತ್ರದುರ್ಗ, ಆಗಸ್ಟ್​ 24: ಸುಗಮ ಸಂಚಾರಕ್ಕಾಗಿ ನಗರ ಪ್ರದೇಶದಲ್ಲಿ ಟ್ರಾಫಿಕ್ ಸಿಗ್ನಲ್ಸ್ (traffic signals) ಅಳವಡಿಸಲಾಗುತ್ತದೆ. ಅಂತೆಯೇ ವಾಹನ ಸವಾರರಿಗೆ ಟ್ರಾಫಿಕ್ ಸಿಗ್ನಲ್ಸ್ ಸಹಕಾರಿ ಆಗಿರುತ್ತದೆ. ಆದರೆ ಅದೊಂದು ನಗರದಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ಅಳವಡಿಸಿದ್ದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ವರದಿ ಇಲ್ಲಿದೆ. ಕೋಟೆನಾಡು ಚಿತ್ರದುರ್ಗ ನಗರದಲ್ಲಿ ವಾರದ ಹಿಂದಷ್ಟೇ ಹೊಸದಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಗಾಂಧಿವೃತ್ತದಲ್ಲಿ ಸಿಗ್ನಲ್ ಅಳವಡಿಸಲಾಗಿದೆ. ಅರ್ಧ ಕಿ.ಮೀಟರ್ ಗೂ ಕಡಿಮೆ ಅಂತರದಲ್ಲೇ ಇರುವ ಎಸ್ ಬಿಎಮ್ ಸರ್ಕಲ್ ಬಳಿ ಮತ್ತೆ ಸಿಗ್ನಲ್ ಅಳವಡಿಸಲಾಗಿದೆ.

ಅಂತೆಯೇ ಒನಕೆ ಓಬವ್ವ ಸ್ಟೇಡಿಯಂ ಕ್ರಾಸ್ ಮತ್ತು ಚಳ್ಳಕೆರೆ ಗೇಟ್ ಬಳಿಯೂ ಕಡಿಮೆ ಅಂತರದಲ್ಲೇ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಹೀಗಾಗಿ, ಒಂದು ವೃತ್ತದ ಸಿಗ್ನಲ್ ಪಾಸ್ ಆಗಿರುವ ವಾಹನ್ ಪಿಕ್ ಅಪ್ ತೆಗೆದುಕೊಳ್ಳುವ ಮುನ್ನವೇ ಮತ್ತೆ ಸಿಗ್ನಲ್ ಗಾಗಿ ಕಾಯುವಂತಾಗಿದೆ. ಇಡೀ ದುರ್ಗದ ಮುಖ್ಯ ರಸ್ತೆ ಸದಾ ವಾಹನಗಳಿಂದ ತುಂಬಿರುವ ಸ್ಥಿತಿ ನಿರ್ಮಾಣ ಆಗಿದೆ.

ಇದನ್ನೂ ಓದಿ: ಚಿತ್ರದುರ್ಗ: ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಪೈಲಟ್​ ರಹಿತ ತಪಸ್ ವಿಮಾನ ಪತನ

ಪಾದಾಚಾರಿಗಳು ರಸ್ತೆ ದಾಟಲಾಗದ ಸ್ಥಿತಿ ಉಂಟಾಗಿದೆ. ಅಲ್ಲದೆ, ಸಿಗ್ನಲ್ ಗಳಲ್ಲಿ ಅವೈಜ್ಞಾನಿಕವಾಗಿ ಸಮಯ (ಸೆಕೆಂಡ್ಸ್ -ಪಲ್ಸ್) ಅಳವಡಿಸಿದ್ದರಿಂದ ಒಂದೇ ವೃತ್ತದಲ್ಲಿ ಸಿಗ್ನಲ್ ಪಾಸ್​ ಆಗಲೂ ಮೂರು ಮೂರು ಸಲ ಸಿಗ್ನಲ್ ಗಾಗಿ ಕಾಯುವಂತಾಗಿದೆ. ಕೆಲವೆಡೆ ಕೇವಲ 20ಸೆಕೆಂಡ್ಸ್ ಗೆ ಸಿಗ್ನಲ್ ನಿಗದಿಗೊಳಿಸಲಾಗಿದ್ದು
ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೆ ಸದಾಕಾಲ ವಾಹನ ದಟ್ಟಣೆ ಪರಿಣಾಮ ಜನರಿಗೆ ತೊಂದರೆ ಆಗುತ್ತಿದೆ ಎಂಬುದು ಇವರ ಆರೋಪ.

ಈ ಹಿಂದೆ ಯಾವುದೇ ಅಡಚಣೆ ಇಲ್ಲದೆ ಹೊಳಲ್ಕೆರೆ ರಸ್ತೆಯಿಂದ ಕೋರ್ಟ್ ಗೆ ಐದು ನಿಮಿಷದಲ್ಲಿ ಬರುತ್ತಿದ್ದೆವು. ಈಗ ಟ್ರಾಫಿಕ್ ಸಿಗ್ನಲ್ ಅಳವಡಿಸಿದ್ದು ಸಮಯ ವ್ಯರ್ಥಮಾಡಿದಂತಾಗುತ್ತಿದೆ. ಕನಿಷ್ಠ 15ನಿಮಿಷ ಕಾಲ ಟ್ರಾಫಿಕ್ ನಲ್ಲೇ ಕಳೆಯುವಂತಾಗಿದೆ. ಹೀಗಾಗಿ, ಶಾಲೆಗೆ ಹೋಗುವವರು, ಇತರೆ ಕಚೇರಿಗಳಿಗೆ ತೆರಳುವವರಿಗೆ ತೊಂದರೆ ಆಗುತ್ತಿದೆ. ಅವೈಗ್ನಾನಿಕ ಸಿಗ್ನಲ್ ಅಳವಡಿಕೆ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಆಗುವಂತೆ ಸಿಗ್ನಲ್ ಅಳವಡಿಸಬೇಕೆಂಬುದು ಆಗ್ರಹಿಸಲಾಗಿದೆ.

ಇದನ್ನೂ ಓದಿ: ದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಸರಣಿ ಸಾವಿಗೆ ದಾವಣಗೆರೆಯ ಸೂಳೆಕೆರೆ ನೀರು ಕಾರಣವಾ? ಲ್ಯಾಬ್ ವರದಿ ಫಲಿತಾಂಶ ಇಲ್ಲಿದೆ

ಕೋಟೆನಾಡು ಚಿತ್ರದುರ್ಗದಲ್ಲಿ ಪೊಲೀಸ್ ಇಲಾಖೆ ಅವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಿದೆ. ಪರಿಣಾಮ ವಾಹನ ಸವಾರರು, ಪಾದಾಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ಇನ್ನಾದ್ದರೂ ಜಿಲ್ಲಾಡಳಿತ, ಪೊಲೀಸ್​ ಇಲಾಖೆ ಮತ್ತು ನಗರಸಭೆ ಈ ಬಗ್ಗೆ ಗಮನಹರಿಸಿ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರು
ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಸವರಾಜ ಮುದನೂರ್

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Loading...
Unable to load recommendations.
Follow Us