AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಕ್ಕೆ ಹಸಿರು ನಿಶಾನೆ ತೋರಿದ ಮುಖ್ಯಮಂತ್ರಿ ಯಡಿಯೂರಪ್ಪ

ರೈತರಿಗಾಗಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನ(ಕೃಷಿ ಸಂಜೀವಿನಿ) ಯನ್ನು ಹಸಿರು ನಿಶಾನೆ ತೋರಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಲೋಕಾರ್ಪಣೆ ಮಾಡಿದ್ದಾರೆ.

ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಕ್ಕೆ ಹಸಿರು ನಿಶಾನೆ ತೋರಿದ ಮುಖ್ಯಮಂತ್ರಿ ಯಡಿಯೂರಪ್ಪ
ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನ(ಕೃಷಿ ಸಂಜೀವಿನಿ)
ಆಯೇಷಾ ಬಾನು
| Edited By: |

Updated on:Jan 07, 2021 | 1:23 PM

Share

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ವಿಧಾನಸೌಧದಲ್ಲಿ ರೈತರಿಗಾಗಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನವನ್ನು (ಕೃಷಿ ಸಂಜೀವಿನಿ) ಹಸಿರು ನಿಶಾನೆ ತೋರಿಸುವ ಮೂಲಕ ಲೋಕಾರ್ಪಣೆ ಮಾಡಿದ್ದಾರೆ. ಈ ವೇಳೆ DCM ಲಕ್ಷ್ಮಣ ಸವದಿ, ಕೃಷಿ ಸಚಿವ ಬಿ.ಸಿ. ಪಾಟೀಲ್, ಸಚಿವ ಎಸ್​.ಟಿ. ಸೋಮಶೇಖರ್ ಉಪಸ್ಥಿತರಿದ್ದರು.

ನೇರವಾಗಿ ಹೊಲಗಳಿಗೇ ಹೋಗುತ್ತವೆ 40 ಸಸ್ಯ ಆರೋಗ್ಯ ಚಿಕಿತ್ಸಾ ವಾಹನಗಳು.. ಈ ವೇಳೆ ಮಾತನಾಡಿದ ಸಿಎಂ B.S.ಯಡಿಯೂರಪ್ಪ “ರೈತರು ಬೆಳೆದ ಬೆಳೆಗಳ ಆರೋಗ್ಯ ತಪಾಸಣೆಗೆ ಈ ವಾಹನ ಸಹಕಾರಿಯಾಗಲಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ವಾಹನಗಳು ನೇರವಾಗಿ ಹೊಲಗಳಿಗೇ ಹೋಗುತ್ತವೆ. ಮಣ್ಣು, ನೀರು, ರೋಗ ಪರೀಕ್ಷೆ ಮಾಡುತ್ತವೆ. 40 ವಾಹನಗಳನ್ನು ಈಗ ಲೋಕಾರ್ಪಣೆ ಮಾಡಲಾಗಿದೆ. ಇವುಗಳ ಕಾರ್ಯನಿರ್ವಹಣೆ ನೋಡಿಕೊಂಡು ಮುಂದಿನ ದಿನಗಳಲ್ಲಿ ವಾಹನ ಸಂಖ್ಯೆ ಹೆಚ್ಚಳಕ್ಕೆ ಚಿಂತನೆ ನಡೆಸಲಾಗುತ್ತೆ” ಎಂದು ಹೇಳಿದ್ರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ ” ಇದು ಸಿಎಂ ಬಿಎಸ್‌ವೈರ ಕನಸಿನ ಯೋಜನೆಯಾಗಿದೆ. ಬೆಳೆಗಳಲ್ಲಿ ಸಮಸ್ಯೆ ಇದ್ದರೆ ಸಹಾಯವಾಣಿ ಸಂಖ್ಯೆ- 155 313 ಕ್ಕೆ ಕರೆ ಮಾಡಬಹುದು. ನೇರವಾಗಿ ನಿಮ್ಮ ತೋಟದ ಬಳಿಯೇ ವಾಹನ ಬರುತ್ತೆ. ಬೆಳೆ ಸಮಸ್ಯೆ ಸಂಪೂರ್ಣ ಮಾಹಿತಿ ನೀಡಲಾಗುವುದು. ರಾಜ್ಯದ ಪ್ರತಿ ಜಿಲ್ಲೆಗೂ ಒಂದು ವಾಹನ ನೀಡಲಾಗಿದೆ” ಎಂದು ಹೇಳಿದ್ರು.

ಮೋದಿಯಿಂದ ಇಂದು ರಿವಾರಿ-ಮಾದರ್ ಮಾರ್ಗದ ಸರಕು ಸಾಗಣೆ ರೈಲು ಮಾರ್ಗದ ಲೋಕಾರ್ಪಣೆ

Published On - 1:18 pm, Thu, 7 January 21