ಮಂಡಿನೋವು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಸಿದ್ದರಾಮಯ್ಯ ಡಿಸ್ಚಾರ್ಜ್
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಂಡಿನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ಗಂಟೆಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆದ ನಂತರ ಅವರು ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯರು ಎರಡು ದಿನ ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದಾರೆ. ಮೊಣಕಾಲಿನ ಗಾಯದಿಂದಾಗಿ ಚಿಕ್ಕಬಳ್ಳಾಪುರ ಭೇಟಿ ರದ್ದಾಗಿದೆ.

ಬೆಂಗಳೂರು, ಫೆಬ್ರವರಿ 02: ಮಂಡಿನೋವು ಹಿನ್ನಲೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಸತತ 2 ಗಂಟೆಗೂ ಹೆಚ್ಚು ಕಾಲ ಚಿಕಿತ್ಸೆ ಪಡೆದು ಇದೀಗ ಡಿಸ್ಚಾರ್ಜ್ ಆಗಿದ್ದಾರೆ. ಡಾ.ಸತ್ಯನಾರಾಯಣರಿಂದ ಸಿಎಂಗೆ ಆರೋಗ್ಯ ತಪಾಸಣೆ ಮಾಡಿದು, ನೀ ಪ್ಯಾಡ್ ಹಾಕಿದ್ದಾರೆ. ಸದ್ಯ ಎರಡು ದಿನ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಡಿಸ್ಚಾರ್ಜ್ ಬಳಿಕ ಕಾವೇರಿ ನಿವಾಸಕ್ಕೆ ಸಿದ್ದರಾಮಯ್ಯ ತೆರಳಿದ್ದಾರೆ.
ಸಿಎಂ ಮೊಣಕಾಲಿಗೆ ಬಲವಾದ ಗಾಯವಾಗಿದೆ: ಡಾ.ಎಂ.ಸಿ.ಸುಧಾಕರ್
ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿಕೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಮೊಣಕಾಲಿಗೆ ಬಲವಾದ ಗಾಯವಾಗಿದೆ. ವಿಶ್ರಾಂತಿ ಪಡೆಯಲು ವೈದ್ಯರು ಹೇಳಿದ್ದಾರೆ. ಬೆಳಗ್ಗೆ ಸ್ನಾನದ ಮನೆಯಲ್ಲಿ ಸಿಎಂ ಕಾಲು ಜಾರಿ ಬಿದ್ದಿದ್ದಾರೆ. ನಾವೇ ಕಾರು ಹತ್ತಿಸಿ ಅವರನ್ನು ಆಸ್ಪತ್ರೆಗೆ ಕಳಿಸಿದ್ದೆವು. ಆಸ್ಪತ್ರೆಯಲ್ಲಿ ಅವರ ಮೊಣಕಾಲು ಸ್ಕ್ಯಾನ್ ಮಾಡಿದ್ದಾರೆ. ಮೊಳೆಯಲ್ಲಿ ಕ್ರ್ಯಾಕ್ ಇಲ್ಲ ಸ್ವೇಲಿಂಗ್ ಇದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ: 2 ದಿನ ವಿಶ್ರಾಂತಿ ಸೂಚಿಸಿದ ವೈದ್ಯರು
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸಿಎಂ ಚಿಕಿತ್ಸೆ ಪಡೆದುಕೊಂಡಿದ್ದು, ವೈದ್ಯರು ಎಡಗಾಲಿನ ಎಕ್ಸ್ ರೇ ಮಾಡಿದ್ದು, ರಿಪೋರ್ಟ್ನಲ್ಲಿ ಎಲ್ಲಾ ನಾರ್ಮಲ್ ಇದೆ. ಮಂಡಿ ನೋವಿಗೆ ಮಾತ್ರೆ ನೀಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಲೆಗಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮತ್ತೆ ಶಸ್ತ್ರಚಿಕಿತ್ಸೆ ಮಾಡಿದ ಜಾಗದಲ್ಲೇ ಒತ್ತಡ ಬಿದ್ದು ನೋವು ಹೆಚ್ಚಳವಾಗಿದೆ. ಸದ್ಯ ಎಲ್ಲೂ ಪ್ರಯಾಣ ಮಾಡದಂತೆ ತಿಳಿಸಿರುವುದಾಗಿ ಮಣಿಪಾಲ್ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಇತ್ತ ಬಿಆರ್ ಪಾಟೀಲ್ ರಾಜೀನಾಮೆ: ಅತ್ತ ದಿಲ್ಲಿ ವಿಮಾನ ಹತ್ತಲು ಸಚಿವರ ತಂಡ ಪ್ಲ್ಯಾನ್
ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಬೇಕಿತ್ತು. ಹೊಸೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಡಾ.ಹೆಚ್.ನರಸಿಂಹಯ್ಯ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಆದರೆ ಮಂಡಿನೋವು ಹಿನ್ನಲೆ ಸಿಎಂ ಭೇಟಿ ದಿಢೀರ್ ರದ್ದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.