ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಕೈ ಬೆರಳಿಗೆ ಗಾಯ
ವಿಧಾನಸೌಧದ ಸಮಿತಿ ಕೊಠಡಿ 313 ರಿಂದ ಜನಸ್ಪಂದನೆ ಕಾರ್ಯಕ್ರಮ ಬರುತ್ತಿರುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೆ ಗಾಯವಾಗಿದೆ. ಆದರೂ ಕೂಡ ಗಾಯಕ್ಕೆ ಕರ್ಚೀಫ್ ಸುತ್ತಿಕೊಂಡು ಸಭೆಗೆ ತೆರಳಿದರು.
ಬೆಂಗಳೂರು, ಆಗಸ್ಟ್ 27: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಕೈ ಬೆರಳಿಗೆ ಗಾಯವಾಗಿದೆ. ವಿಧಾನಸೌಧದ (Vidhansoudha) ಸಮಿತಿ ಕೊಠಡಿ 313 ರಿಂದ ಜನಸ್ಪಂದನೆ ಕಾರ್ಯಕ್ರಮ ಬರುತ್ತಿರುವ ವೇಳೆ ಗುಂಡು ಸೂಜಿ ಚುಚ್ಚಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೆ ಗಾಯವಾಗಿದೆ. ಈ ವೇಳೆ ಮುಖ್ಯಮಂತ್ರಿಗಳು ಬೆರಳಿಗೆ ಕರ್ಚೀಫ್ ಸುತ್ತಿಕೊಂಡು ಸಭೆಗೆ ತೆರಳಿದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ವೈದ್ಯರು ಸಿದ್ದರಾಮಯ್ಯ ಅವರ ಬೆರಳಿಗೆ ಪ್ರಥಮ ಚಿಕಿತ್ಸೆ ನೀಡಿದರು.
ಕಾವೇರಿ ನಿವಾಸದಲ್ಲಿ ಜನರ ಸಮಸ್ಯೆ ಆಲಿಸಿ ಅರ್ಜಿ ಸ್ವೀಕರಿಸುವ ವೇಳೆ ಸಿಎಂ ಸಿದ್ದರಾಮಯ್ಯ ಕೈಗೆ ಗುಂಡು ಪಿನ್ ಚುಚ್ಚಿ ಗಾಯವಾಗಿದ್ದು, ಗಾಯವಾಗಿದ್ದ ಜಾಗಕ್ಕೆ ಕರ್ಚಿಫ್ ಸುತ್ತಿಕೊಂಡು ಸಿದ್ದರಾಮಯ್ಯ ಸಭೆಗೆ ತೆರಳಿದರು.ಈ ವೇಳೆ ಅಧಿಕಾರಿಗಳು ಏನು ಮಾಡಬೇಕು ಎಂದು ತೋಚದೆ ಕಕ್ಕಾಬಿಕ್ಕಿಯಾಗಿದರು. ಆದರೆ, ಸಿಎಂ, ಅಲ್ಲಿಯೇ ಕರ್ಚೀಫ್ ಸುತ್ತಿಕೊಂಡು ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರು, ಮಾಹಿತಿ ಆಯುಕ್ತರ ನೇಮಕ ಸಂಬಂಧದ ಸಭೆಗೆ ಹೋಗಿದರು.
ವಿಧಾನಸೌಧಕ್ಕೆ ಆಗಮಿಸಿದ ವೇಳೆಯೂ ರಕ್ತ ನಿಂತಿರಲಿಲ್ಲ. ಹೀಗಾಗಿ ವೈದ್ಯರಿಗೆ ಮಾಹಿತಿ ನೀಡಿದರು. ತಕ್ಷಣವೇ ಆಗಮಿಸಿದ ವೈದ್ಯರು ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಸಿಎಂಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು.
ಕುಸಿದ ಸಿದ್ದರಾಮಯ್ಯ
ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು ಕುಸಿದು ಕೂತ ಘಟನೆ ನಡೆದಿತ್ತು. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಬಳಿ ಪ್ರಚಾರಕ್ಕೆ ತೆರಳಿದ್ದ ಸಿದ್ದರಾಮಯ್ಯ ಅವರು ಬಳಲಿಕೆಯಿಂದ ಕುಸಿದು ಕೂತ ಘಟನೆ ನಡೆದಿತ್ತು. ಈ ವೇಳೆ ತಕ್ಷಣ ಸ್ಪಂದಿಸಿದ ಅವರ ಗನ್ ಮ್ಯಾನ್, ಅವರನ್ನೆತ್ತಿ ಕಾರಿನಲ್ಲಿ ಕೂರಿಸಿದ್ದರು. ಬಳಿಕ ಅವರಿಗೆ ತಂಪು ಪಾನೀಯ ನೀಡಿ ಆರೈಕೆ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Tue, 27 August 24