ಬಾಗಲಕೋಟೆ: ಶಾಲೆಯಲ್ಲಿ ಕಳ್ಳತನ; ಕಂಪ್ಯೂಟರ್ ಕದ್ದೋಯ್ದ ಖದೀಮರು
ಶಾಲೆಯಲ್ಲಿ ಇಂದು (ಜುಲೈ 19) ಬೆಳಿಗ್ಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿದೆ. ಎಲ್ಲ ಪರೀಕ್ಷಾ ಕೊಠಡಿಗಳನ್ನು ಓಪನ್ ಮಾಡಿದ್ದಾರೆ. ಕಚೇರಿ ಕೊಠಡಿಯಲ್ಲಿದ್ದ ಬೀಗ ಒಡೆದು ಇತರೆ ಕೊಠಡಿಗಳನ್ನು ಓಪನ್ ಮಾಡಿದ್ದಾರೆ.
ಬಾಗಲಕೋಟೆ: ತಾಲೂಕಿನ ತುಳಸಿಗೇರಿ ಗ್ರಾಮದ ಸರ್ಕಾರಿ ಮಾದರಿ ಕುವೆಂಪು ಪ್ರಾಥಮಿಕ ಶಾಲೆಯಲ್ಲಿ ಕಳ್ಳತನವಾಗಿದೆ. ಶಾಲೆಯಲ್ಲಿನ ಒಟ್ಟು ನಾಲ್ಕು ಕಂಪ್ಯೂಟರ್ ಮತ್ತು ಒಂದು ಪ್ರಿಂಟರ್ನ ಕದ್ದೊಯ್ದಿದ್ದಾರೆ. ಕಂಪ್ಯೂಟರ್ ಎಜ್ಯುಕೇಶನ್ ಕೊಠಡಿಯಲ್ಲಿದ್ದ ಒಟ್ಟು 11 ಕಂಪ್ಯೂಟರ್ಗಳ ಪೈಕಿ ಮೂರು ಕಂಪ್ಯೂಟರ್, ಶಾಲೆ ಕಾರ್ಯಾಲಯದಲ್ಲಿದ್ದ ಒಂದು ಕಂಪ್ಯೂಟರ್, ಒಂದು ಪ್ರಿಂಟರ್ನ ಕಳ್ಳತನ ಮಾಡಿದ್ದಾರೆ.
ಶಾಲೆಯಲ್ಲಿ ಇಂದು (ಜುಲೈ 19) ಬೆಳಿಗ್ಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿದೆ. ಎಲ್ಲ ಪರೀಕ್ಷಾ ಕೊಠಡಿಗಳನ್ನು ಓಪನ್ ಮಾಡಿದ್ದಾರೆ. ಕಚೇರಿ ಕೊಠಡಿಯಲ್ಲಿದ್ದ ಬೀಗ ಒಡೆದು ಇತರೆ ಕೊಠಡಿಗಳನ್ನು ಓಪನ್ ಮಾಡಿದ್ದಾರೆ. ಜೊತೆಗೆ ಶಾಲೆ ಕಾರ್ಯಾಲಯದ ಲಾಕರ್ ಮುರಿದು ವಸ್ತುಗಳನ್ನು ಕಿತ್ತಾಡಿದ್ದಾರೆ. ಇದರಿಂದ ಪ್ರಶ್ನೆ ಪತ್ರಿಕೆ ಇರಬಹುದು ಎಂಬ ಕಲ್ಪನೆಯಲ್ಲಿ ವಸ್ತುಗಳನ್ನು ತಡಕಾಡಿರಬಹುದು ಎಂಬ ಸಂಶಯ ಕೂಡ ಇದೆ. ಅದರ ಜೊತೆಗೆ ಪ್ರಿಂಟರ್ ಕದ್ದೊಯ್ದಿದ್ದು, ಈ ಬಗ್ಗೆ ಕಲಾದಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ಅಂತ ಶಾಲೆ ಮುಖ್ಯ ಶಿಕ್ಷಕ ಚಂದ್ರಶೇಖರ ಸಣ್ಣಪ್ಪನವರ ತಿಳಿಸಿದ್ದಾರೆ.
ಮಾದರಿ ಹಾಗೂ ಶತಮಾನೋತ್ಸವ ಶಾಲೆಯಾಗಿದ್ದು, ಶಾಲೆಯಲ್ಲಿ ಸಂಜೆ ಹೊರಗಡೆ ಲೈಟ್ ವ್ಯವಸ್ಥೆ ಇರಲಿಲ್ಲ ಎನ್ನುವ ಮಾಹಿತಿ ಇದೆ. ಜೊತೆಗೆ ಸಿಸಿಟಿವಿ ಕ್ಯಾಮರಾ ಕೂಡ ಇರಲಿಲ್ಲ. ಶಾಲೆಯಲ್ಲಿ ಕಳ್ಳತನ ನಡೆದರೂ ಸಿಬ್ಬಂದಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ತೊಂದರೆ ಮಾಡಿಲ್ಲ. ವಿದ್ಯಾರ್ಥಿಗಳು ಭಯ ಮುಕ್ತವಾಗಿ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಿದ್ದಾರೆ. ಸದ್ಯ ಕಲಾದಗಿ ಪೊಲೀಸರು ಶ್ವಾನದಳ ಸಮೇತ ತನಿಖೆ ಮುಂದುವರಿಸಿದ್ದು, ತನಿಖೆ ನಂತರ ಕಳ್ಳತನ ನಡೆಸಿದರು ಯಾರು ಎಂದು ತಿಳಿದು ಬರಲಿದೆ.
ಇದನ್ನೂ ಓದಿ
ಆದೇಶಗಳನ್ನು ಉಲ್ಲಂಘಿಸಿದ ಬಿಡಿಎಗೆ ಹೈಕೋರ್ಟ್ ತರಾಟೆ
ಡಿಪ್ಲೊಮಾ ವಿದ್ಯಾರ್ಥಿಗಳಿಂದ ಪ್ರತಿಭಟನೆ; ಪರೀಕ್ಷೆಗೆ ತೀವ್ರ ವಿರೋಧ
(Computers are theft at a Bagalkot school)