ಕಾಂಗ್ರೆಸ್ ಪಕ್ಷದಲ್ಲಿ ದಿನಕ್ಕೊಂದು ಗಲಾಟೆ; ರಾಜ್ಯ ಕಾಂಗ್ರೆಸ್ಗೆ ಶೀಘ್ರ ಕೋರ್ ಕಮಿಟಿ ರಚನೆ ಮಾಡುವ ಸಾಧ್ಯತೆ
ಕಾರ್ಯಾಧ್ಯಕ್ಷರ ಸೇರ್ಪಡೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. 10 ದಿನಗಳಲ್ಲಿ ಕೋರ್ ಕಮಿಟಿ ಅಧಿಕೃತ ರಚನೆ ಸಾಧ್ಯತೆ ಇದೆ. ಸಿದ್ದರಾಮಯ್ಯ, ಡಿಕೆಶಿ ಬಣ ಕಚ್ಚಾಟಕ್ಕೆ ಕಡಿವಾಣಕ್ಕೆ ಯೋಜನೆ ರೂಪಿಸಲಾಗಿದೆ.
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ದಿನಕ್ಕೊಂದು ಗಲಾಟೆ, ಮಾತುಗಳು ಕೇಳಿವರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ಗೆ ಶೀಘ್ರ ಕೋರ್ ಕಮಿಟಿ ರಚನೆ ಮಾಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. 10 ಸದಸ್ಯರ ಕೋರ್ ಕಮಿಟಿಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್, ಎಂ.ಬಿ. ಪಾಟೀಲ್, ಹೆಚ್.ಕೆ. ಪಾಟೀಲ್, ರೆಹಮಾನ್ ಖಾನ್ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಾರ್ಯಾಧ್ಯಕ್ಷರ ಸೇರ್ಪಡೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. 10 ದಿನಗಳಲ್ಲಿ ಕೋರ್ ಕಮಿಟಿ ಅಧಿಕೃತ ರಚನೆ ಸಾಧ್ಯತೆ ಇದೆ. ಸಿದ್ದರಾಮಯ್ಯ, ಡಿಕೆಶಿ ಬಣ ಕಚ್ಚಾಟಕ್ಕೆ ಕಡಿವಾಣಕ್ಕೆ ಯೋಜನೆ ರೂಪಿಸಲಾಗಿದೆ. ಯಾವುದೇ ನಿರ್ಧಾರಗಳಿದ್ರೂ ಕೋರ್ ಕಮಿಟಿಯಲ್ಲೇ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಸಾಮೂಹಿಕ ನಾಯಕತ್ವದಡಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಕೆಪಿಸಿಸಿ ಪ್ರತಿ ನಿರ್ಧಾರ, ಕಾರ್ಯಕ್ರಮ, ತಂತ್ರಗಾರಿಕೆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಕೋರ್ ಕಮಿಟಿ ಸಭೆಯಲ್ಲೇ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಎಲ್ಲರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಎಂದು ತಿಳಿಯಲಾಗಿದೆ.
ಮೈಸೂರು: ಮುಂದಿನ ಸಿಎಂ ಎಂದು ಘೋಷಣೆ ಕೂಗದಂತೆ ಕಟ್ಟುನಿಟ್ಟಿನ ಸೂಚನೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಘೋಷಣೆ ಕೂಗಿಲ್ಲ. ಮೈಸೂರು ನಗರಕ್ಕೆ ಆಗಮಿಸಿದ ಸಿದ್ದರಾಮಯ್ಯ ಪರ ಮುಂದಿನ ಸಿಎಂ ಎಂದು ಕಾರ್ಯಕರ್ತರು ಘೋಷಣೆ ಕೂಗದ ಘಟನೆ ಮೈಸೂರಿನಲ್ಲಿ ನಡೆದಿದೆ.
ರಾಜಕೀಯ ಹುಲಿ, ರಾಜ್ಯದ ಹುಲಿ, ಮೈಸೂರು ಹುಲಿ ಎಂದು ಸಿದ್ದರಾಮಯ್ಯ ಪರ ಘೋಷಣೆ ಕೈ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಎರಡು ತಿಂಗಳ ಬಳಿಕ ಸಿದ್ದರಾಮಯ್ಯ ತವರಿಗೆ ಆಗಮಿಸಿದ್ದಾರೆ. ಇಂದು, ನಾಳೆ ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ಕೈಗೊಳ್ಳಲಿದ್ದಾರೆ.
ರಾಜ್ಯ ಕಾಂಗ್ರೆಸ್ನಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರ ವಿವಾದ ರಾಜ್ಯ ಕಾಂಗ್ರೆಸ್ನಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರ ವಿವಾದ ವಿಚಾರವಾಗಿ ಯುವ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಲ್ಲವರುಗೆ ಕಾಂಗ್ರೆಸ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತರಾಟೆ ತೆಗೆದುಕೊಂಡಿದ್ದಾರೆ. ಅನಗತ್ಯವಾಗಿ ಅಧ್ಯಕ್ಷ ಬದಲಾವಣೆಗೆ ಮುಂದಾಗಿದ್ದು ಏಕೆ? ಇಬ್ಬರ ಗಲಾಟೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಿದೆ. ನಿಮ್ಮ ನಡೆಯಿಂದ ರಾಹುಲ್ ಗಾಂಧಿಗೂ ಬೇಸರ ಉಂಟಾಗಿದೆ. ಸದ್ಯಕ್ಕೆ ಯಾವುದೇ ಬದಲಾವಣೆ ಮಾಡದಂತೆ ಸೂಚನೆ ನೀಡಿದ್ದಾರೆ.
ಯುವ ನಾಯಕರಿಬ್ಬರ ಹೊರತಾಗಿ 3ನೇ ವ್ಯಕ್ತಿಯತ್ತ ಗಮನ ಕೊಟ್ಟರೆ, ಯಾರನ್ನೇ ಮಾಡಿದರೂ ಇನ್ನೊಬ್ಬರಿಗೆ ಅಸಮಾಧಾನ ಇದೆ. ಹಾಗಾಗಿ, ಯಥಾಸ್ಥಿತಿ ಕಾಯ್ದಿರಿಸಿ ಎಐಸಿಸಿಗೆ ಘಟನೆ ವಿವರ ನೀಡಿ ಎಂದು ಕೃಷ್ಣ ಅಲ್ಲವರುಗೆ ಕೆ.ಸಿ.ವೇಣುಗೋಪಾಲ್ರಿಂದ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಮುಂದುವರಿಕೆ: ವೆಬ್ಸೈಟ್ನಲ್ಲಿ ಅಧಿಕೃತ ಘೋಷಣೆ
ದಲಿತ ಸಿಎಂ ಕೂಗು ಸದ್ಯ ಅಪ್ರಸ್ತುತ; ಕಾಂಗ್ರೆಸ್ನಲ್ಲಿ ಒಳಜಗಳವಿಲ್ಲ: ಬಿ ಕೆ ಕೋಳಿವಾಡ
Published On - 6:08 pm, Wed, 30 June 21