ಡಿ.ಕೆ.ಶಿವಕುಮಾರ್​ ಕಪ್ಪು ಹಣ ನೀಡಿ ಸಾಲ ನೀಡುತ್ತೇನೆಂದು ಜನರಿಗೆ ಪಂಗನಾಮ ಹಾಕಿದ ‘ಕೈ’ ನಾಯಕಿ

ಡಿ.ಕೆ.ಶಿವಕುಮಾರ್​ ಕಪ್ಪು ಹಣ ನೀಡಿ ಸಾಲ ನೀಡುತ್ತೇನೆಂದು ಜನರಿಗೆ ಪಂಗನಾಮ ಹಾಕಿದ ‘ಕೈ’ ನಾಯಕಿ
ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ

ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಡಿ.ಕೆ.ಶಿವಕುಮಾರ್ ಹೆಸರಿನ ಜೊತೆಗೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೆಸರು ಕೂಡಾ ಬಳಕೆ ಮಾಡಿ ಜನರಿಗೆ ವಂಚಿಸಿದ್ದಾರೆ. ನನ್ನ ಮನೆಗೆ 5 ಲಕ್ಷ ಸಾಲಬೇಕಿತ್ತು. ಇದಕ್ಕೆ ಸಾಲ ನೀಡಬೇಕಾದರೆ 10 ಸಾವಿರ ರೂ. ಹಣವನ್ನು ನೀಡಿ ಎಂದು ಪೂರ್ಣಿಮಾ ಸವದತ್ತಿ ಹೇಳಿದ್ದರು.

sandhya thejappa

| Edited By: sadhu srinath

Feb 27, 2021 | 11:18 AM

ಹುಬ್ಬಳ್ಳಿ: ಮನೆ ಮತ್ತು ಕಡಿಮೆ ಬಡ್ಡಿಗೆ ಸಾಲ ಕೊಡಿಸುತ್ತೇನೆಂದು ನಂಬಿಸಿ ಹುಬ್ಬಳ್ಳಿಯ ಕಾಂಗ್ರೆಸ್ ನಾಯಕಿಯೊಬ್ಬರು ಜನರಿಗೆ ಮೋಸ ಮಾಡಿರುವ ಆರೋಪ ಕೇಳಿಬಂದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ರವರ ಕಪ್ಪು ಹಣವನ್ನು ಸಾಲವಾಗಿ ನೀಡುತ್ತೇನೆಂದು ಹೇಳಿ ಕಾಂಗ್ರೆಸ್ ನಾಯಕನ ಹೆಸರಲ್ಲಿ ವಂಚನೆ ಮಾಡಿದ್ದಾರೆಂದು ತಿಳಿದುಬಂದಿದೆ.

ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಡಿ.ಕೆ ಶಿವಕುಮಾರ್​ರವರ ಕಪ್ಪು ಹಣದಿಂದ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡುತ್ತೇನೆಂದು ಜನರಿಗೆ ನಂಬಿಸಿ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ಕೇಳಿಬಂದಿದೆ. ‘‘ನಾನು ಕೆಪಿಸಿಸಿ ಕಚೇರಿಯಿಂದ ಕರೆ ಮಾಡುತ್ತಿದ್ದೇನೆ. ನನಗೆ 10,000 ಸಾವಿರ ಹಣವನ್ನು ನೀಡಿದರೆ ಡಿಕೆಶಿಯವರ ಕಪ್ಪು ಹಣದಿಂದ ನಿಮಗೆ ಸಾಲವನ್ನು ಕೊಡುತ್ತೇವೆ’’ ಎಂದು ಹೇಳಿ ಲಕ್ಷ ಲಕ್ಷ ಹಣ ವಸೂಲಿ ಮಾಡಿ ಸುಮಾರು 35ಕ್ಕೂ ಹೆಚ್ಚು ಜನರಿಗೆ ಮಹಾಮೋಸ ಮಾಡಿರುವ ಆರೋಪಗಳು ಕೇಳಿಬಂದಿವೆ.

ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಡಿ.ಕೆ. ಶಿವಕುಮಾರ್ ಹೆಸರಿನ ಜೊತೆಗೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೆಸರು ಕೂಡಾ ಬಳಕೆ ಮಾಡಿ ಜನರಿಗೆ ವಂಚಿಸಿದ್ದಾರೆ. ನನ್ನ ಮನೆಗೆ 5 ಲಕ್ಷ ಸಾಲಬೇಕಿತ್ತು. ಇದಕ್ಕೆ ಸಾಲ ನೀಡಬೇಕಾದರೆ 10 ಸಾವಿರ ರೂ. ಹಣವನ್ನು ನೀಡಿ ಎಂದು ಪೂರ್ಣಿಮಾ ಸವದತ್ತಿ ಹೇಳಿದ್ದರು. ನಿಜವೆಂದು ನಂಬಿ ಕೇಳಿದಷ್ಟು ಹಣವನ್ನು ನೀಡಿದ್ದೆ. ಆದರೆ ಯಾವುದೇ ಹಣವನ್ನು ನೀಡದೇ ನಂಬಿಕೆಯ ದ್ರೋಹ ಮಾಡಿದ್ದಾರೆಂದು ಮೋಸ ಹೋದ ಅಕಾಶ್ ತಿಳಿಸಿದ್ದಾರೆ.

ಪ್ರಥಮ ವರ್ತಮಾನ ವರದಿ

ಸಾಲವನ್ನು ಕೊಡಿ ಎಂದು ಕೇಳಿದರೆ ನನಗೆ ನೀವು ಹಣವನ್ನೇ ನೀಡಿಲ್ಲ ಎಂದು ಹೇಳಿದ್ದ ಪೂರ್ಣಿಮಾ ಇದೀಗ ಪರಾರಿಯಾಗಿದ್ದಾರೆ. ಹಣವನ್ನು ನೀಡಿ ಎರಡು ವರ್ಷವಾದರೂ ಸಾಲವನ್ನು ಪಡೆಯದ ಜನರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪೂರ್ಣಿಮಾ ಸವದತ್ತಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಅಲ್ಲದೇ ಸಾಲ ಮಾಡಿ ಹಣ ನೀಡಿದವರು ನಮ್ಮ ಹಣ ನಮಗೆ ಕೊಡಿಸಿ ಎಂದು ಕಣ್ಣೀರಿಡುತ್ತಿದ್ದಾರೆ.

ಪೂರ್ಣಿಮಾ ಸವದತ್ತಿ ವಿರುದ್ಧ ದೂರು ದಾಖಲು

ಇದನ್ನೂ ಓದಿ: 

DK Shivakumar | ಸಂಪತ್​ ರಾಜ್​ ಬೆನ್ನಿಗೆ ನಿಂತ ಡಿಕೆಶಿ.. ಶಾಸಕರ ಮನೆಗೆ ಬೆಂಕಿ ಕೇಸ್​ನಲ್ಲಿ ಮಾಜಿ ಮೇಯರ್ ಪಾತ್ರವಿಲ್ಲ ಎಂದರು

ವಿವಿಧ ಬೇಡಿಕೆ ಆಗ್ರಹಿಸಿ ಚಾಲಕರಿಂದ ಅರೆಬೆತ್ತಲೆ ಪ್ರತಿಭಟನೆ: ಡಿಕೆಶಿ, ಕೋಡಿಹಳ್ಳಿ ಭಾಗಿ

Follow us on

Related Stories

Most Read Stories

Click on your DTH Provider to Add TV9 Kannada