AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಹಿಂದೂ ಮಹಿಳೆಯ ಮನೆಯಲ್ಲಿ ಕಾಂಗ್ರೆಸ್​​ ಮುಖಂಡ ಸಿಕ್ಕಿಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ರಾತ್ರಿ ವೇಳೆ ವಿವಾಹಿತ ಹಿಂದೂ ‌ಮಹಿಳೆಯ ಜೊತೆ ಇದ್ದ ಕಾಂಗ್ರೆಸ್ ಮುಖಂಡ ರಾಹಿಲ್​​ನ್ನು ಅಕ್ಕಪಕ್ಕದ ಮನೆಯ ಯುವಕರು ಥಳಿಸಿದ ಘಟನೆ ಚಿಕ್ಕಮಗಳೂರು ನಗರದ ಗಾಂಧಿನಗರದಲ್ಲಿ ನಡೆದಿದ್ದು, ಇದೀಗ ಈ ಪ್ರಕರಣ ಬೇರೆ ಸ್ವರೂಪ ಪಡೆದುಕೊಂಡಿದೆ. ಮಹಿಳೆ ಒಂದು ಹೇಳಿದ್ರೆ, ಈಕೆಯ ಪತಿ ರೆಡ್​ ಹ್ಯಾಂಡ್​ ಆಗಿ ಹಿಡಿದು ಕಣ್ಣಾರೆ ನೋಡಿದ್ದೇನೆ ಎಂದು ವಿಡಿಯೋ ಹರಿಬಿಟ್ಟಿದ್ದಾನೆ. ಹಾಗಾದ್ರೆ, ಹೆಂಡ್ತಿ ಹೇಳಿದ್ದೇನು? ವಿಡಿಯೋನಲ್ಲಿ ಗಂಡ ಹೇಳಿದ್ದೇನು ಎನ್ನುವ ಮಾಹಿತಿ ಇಲ್ಲಿದೆ.

ರಾತ್ರಿ ಹಿಂದೂ ಮಹಿಳೆಯ ಮನೆಯಲ್ಲಿ ಕಾಂಗ್ರೆಸ್​​ ಮುಖಂಡ ಸಿಕ್ಕಿಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಮಹಿಳೆ, ರಾಹಿಲ್
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Feb 05, 2026 | 10:55 PM

Share

ಚಿಕ್ಕಮಗಳೂರು, (ಫೆಬ್ರವರಿ 05): ಚಿಕ್ಕಮಗಳೂರು (Chikkamagaluru) ನಗರದ ಗಾಂಧಿ ನಗರದಲ್ಲಿ ರಾತ್ರಿ ಹಿಂದೂ ಮಹಿಳೆಯ ಮನೆಯಲ್ಲಿ ಕಾಂಗ್ರೆಸ್​​ ಮುಖಂಡ ಸಿಕ್ಕಿಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ ಸಿಕ್ಕಿದೆ. ಚಿಕ್ಕಮಗಳೂರು ಕಾಂಗ್ರೆಸ್ (Congress) ಮುಖಂಡ ರಾಹಿಲ್ ಷರೀಫ್, ಚಿಕ್ಕಮಗಳೂರು ನಗರದ ಗಾಂಧಿ ನಗರದ ಹಿಂದೂ ಮಹಿಳೆ ಜೊತೆ ಇರುವಾಗಲೇ ಸಿಕ್ಕಿಬಿದ್ದಿದ್ದು, ಮಹಿಳೆಯ ಪತಿ ಸ್ಥಳೀಯರ ಜೊತೆ ಸೇರಿಕೊಂಡು ರೆಡ್​ ಹ್ಯಾಂಡ್​​ ಆಗಿ ಹಿಡಿದು ರಾಹಿಲ್ ಷರೀಫನಿಗೆ ಥಳಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು,  ಯಾವಾಗ ಈ ವಿಡಿಯೋ ವೈರಲ್ ಆಯ್ತೋ ಮಹಿಳೆ ಒಂದು ಹೇಳಿಕೆಯೊಂದನ್ನು ನೀಡಿದ್ದಾಳೆ. ರಾಹಿಲ್ ಷರೀಫ್ ಹಾಗೂ ನಾನು ಫ್ರೆಂಡ್ಸ್. ರಾತ್ರಿ ಹುಷಾರಿಲ್ಲ ಎಂದು ಪೋನ್ ಮಾಡಿ ಮಾತ್ರೆ ತರಿಸಿಕೊಂಡಿದ್ದೇ ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದಾಳೆ. ಇನ್ನೂ ರಾಹಿಲ್ ಷರೀಫ್ ಸಹ ಮಾತ್ರೆ ಕೊಡಲು ಬಂದಿದ್ದೆ ಎಂದಿದ್ದಾನೆ.

ಮಹಿಳೆಯ ಪತಿ ಹರಿಬಿಟ್ಟ ವಿಡಿಯೋನಲ್ಲೇನಿದೆ?

ಇಬ್ಬರು ಹೇಳಿಕೆ ಬೆನ್ನಲ್ಲೇ ಮಹಿಳೆಯ ಪತಿಯೂ ಸಹ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಅದು ಆಕೆ ನೀಡಿದ ಹೇಳಿಕೆಗೆ ತದ್ವಿರುದ್ಧವಾಗಿದೆ. ರಾತ್ರಿ ಮನೆಯ ಬಾಗಿಲು ಓಪನ್ ಇತ್ತು. ನನ್ನ ಹೆಂಡತಿಯದ್ದೇ ಸ್ಕೂಟಿಯಲ್ಲಿ ರಾಹಿಲ್ ಷರೀಫ್ ಬಂದಿದ್ದ. ಬಳಿಕ ಇಬ್ಬರೂ ಸೇರಿ ಮನೆಯ‌ಬಾಗಿಲು ಹಾಕಿಕೊಂಡರು. ನಾನು ಕತ್ತಲಲ್ಲಿ ನಿಂತು ಎಲ್ಲವನ್ನೂ ನೋಡಿದೆ. ನಂತರ ಆಕೆಯ (ಹೆಂಡ್ತಿ) ಮನೆಯವರಿಗೆ ಪೋನ್ ಮಾಡಿ ಬರಲು ಹೇಳಿದ್ದು, ಆಮೇಲೆ ಹೋಗಿ ನೋಡಿದಾಗ ಬೆಡ್ ರೂಂನಲ್ಲಿದ್ದರು. ಕೇಳಿದ್ದಕ್ಕೆ ರಾಹಿಲ್ ಷರೀಫ್ ನಾನು ಬಾಂಬೆಯಿಂದ ಈಗ ಬಂದೆ ಅಂತೇಳಿದ. ಅದಕ್ಕೆ ಬಾಂಬೆಯಿಂದ ಬಂದ್ರೆ ನಿಮ್ಮ ಮನೆಗೆ ಹೋಗುವುದು ಬಿಟ್ಟು ಇಲ್ಲಿಗೆ ಯಾಕೆ ಬಂದೆ ? ನಿಮ್ಮ ಮನೆಗೆ ಹೋಗು ಅಂತಿದ್ದಂತೆ ಮಚ್ಚಿನಿಂದ‌ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಬೇರೊಬ್ಬರ ಹೆಂಡ್ತಿ ಜತೆ ಸಿಕ್ಕಿಬಿದ್ದು ಏಟು ತಿಂದ ಪ್ರಕರಣ: ಸ್ಫೋಟಕ ವಿಚಾರ ಬಿಚ್ಚಿಟ್ಟ ಮಹಿಳೆಯ ಗಂಡ!

ನಾವಿಬ್ರೂ ಬೇರೆ ಆಗಲು ರಾಹಿಲ್ ಷರೀಫ್ ಕಾರಣ

ಅಷ್ಟೇ ಅಲ್ಲದೆ ನಾವಿಬ್ಬರೂ ಲವ್ ಮಾಡಿ ಮದ್ವೆ ಆಗಿದ್ವಿ. ಆದರೆ ಕಳೆದ ಒಂದು ವರ್ಷದಿಂದ ದೂರ ಇದ್ದೇವೆ. ನಾವಿಬ್ರೂ ಬೇರೆ ಬೇರೆ ಆಗುವುದಕ್ಕೆ ರಾಹಿಲ್ ಷರೀಫ್ ಕಾರಣ. ಇನ್ನೂ ವರ್ಷದ ಹಿಂದೆ ನನ್ನ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ಹಾಕಿಸಿದ್ರು. ಅದಕ್ಕೂ ಕೂಡಾ ರಾಯಲ್ ಷರೀಫ್ ಕಾರಣ ಎಂದು ಮಹಿಳೆಯ ಪತಿ ಆರೋಪಿಸಿದ್ದಾನೆ.

ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಚಿಕ್ಕಮಗಳೂರು ನಗರ ಪೊಲಿಸರು, ರಾಹಿಲ್ ಷರೀಫ್, ಮಹಿಳೆಯ ಪತಿ ಸೇರಿದಂತೆ ಒಟ್ಟು 6 ಜನರ ವಿರುದ್ಧ ಸ್ವಯಂ ಪ್ರೇರಿತ(ಸುಮೊಟೊ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಎನ್ಎಸ್ ಸೆಕ್ಷನ್ 194(2)ರ ಅಡಿ ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಮಾಡಿದ ಆರೋಪದಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಇದನ್ನೂ ನೋಡಿ: ರಾತ್ರಿ ವೇಳೆ ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್​​ ಮುಖಂಡ: ಹಿಗ್ಗಾಮುಗ್ಗಾ ಥಳಿಸಿದ ಯುವಕರು

ಒಟ್ಟಿನಲ್ಲಿ ಹಲ್ಲೆಯ ವಿಡಿಯೋ, ಮಹಿಳೆಯ ಸ್ಟೇಟ್ ಮೆಂಟ್, ಪತಿಯ ಹೇಳಿಕೆ‌ ಎಲ್ಲವೂ ನಗರ ಪೊಲೀಸ್ ಠಾಣೆಯ ಅಂಗಳಕ್ಕೆ ಶಿಫ್ಟ್ ಆಗಿದ್ದು. ಅಲ್ಲಿ ನಡೆದದ್ದೇನು? ಅಸಲಿಗೆ ಏನಾಯ್ತು? ಮಾತ್ರೆ ಕೊಡಲು ಹೋಗಿದ್ದ ಅಥವಾ ಪತಿ ಆರೋಪವೇ ನಿಜವಾ ಎನ್ನುವುದು ಪೊಲೀಸರ ತನಿಖೆಯ ಬಳಿಕವೇ ಹೊರಬರಬೇಕಿದೆ.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಕ್ರಮ ವಲಸಿಗರನ್ನು ರಕ್ಷಿಸಲು ಟಿಎಂಸಿ ಶಕ್ತಿ ಮೀರಿ ಪ್ರಯತ್ನ;ಮೋದಿ ವಾಗ್ದಾಳಿ
ಅಕ್ರಮ ವಲಸಿಗರನ್ನು ರಕ್ಷಿಸಲು ಟಿಎಂಸಿ ಶಕ್ತಿ ಮೀರಿ ಪ್ರಯತ್ನ;ಮೋದಿ ವಾಗ್ದಾಳಿ
ರಾಹುಲ್ ಗಾಂಧಿಯ ದೇಶದ್ರೋಹಿ ಹೇಳಿಕೆಗೆ ಮೋದಿ ಆಕ್ರೋಶ
ರಾಹುಲ್ ಗಾಂಧಿಯ ದೇಶದ್ರೋಹಿ ಹೇಳಿಕೆಗೆ ಮೋದಿ ಆಕ್ರೋಶ
ನಮ್ಮ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್​​ಸಿಎಲ್​​​​ನ CPRO ಹೇಳಿದ್ದಿಷ್ಟು
ನಮ್ಮ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್​​ಸಿಎಲ್​​​​ನ CPRO ಹೇಳಿದ್ದಿಷ್ಟು
ಮಗ 49 ಕೋಟಿ ರೂ ಲಾಟರಿ ಗೆದ್ದ, ಕುಟುಂಬಸ್ಥರ ಸಂತೋಷ ಹೇಗಿತ್ತು ನೋಡಿ
ಮಗ 49 ಕೋಟಿ ರೂ ಲಾಟರಿ ಗೆದ್ದ, ಕುಟುಂಬಸ್ಥರ ಸಂತೋಷ ಹೇಗಿತ್ತು ನೋಡಿ
ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗಲೇ ವಿಪಕ್ಷದಿಂದ ಸಭಾತ್ಯಾಗ
ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗಲೇ ವಿಪಕ್ಷದಿಂದ ಸಭಾತ್ಯಾಗ
ಲಂಚ ನೀಡಲು ಹಣವಿಲ್ಲದ್ದಕ್ಕೆ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತಂದ ರೈತ
ಲಂಚ ನೀಡಲು ಹಣವಿಲ್ಲದ್ದಕ್ಕೆ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತಂದ ರೈತ
ಶುಲ್ಕ ವಿವಾದ: ಸಂಶೋಧನಾ ಪ್ರಬಂಧ ಸುಟ್ಟುಹಾಕಿ ಕಣ್ಣೀರಿಟ್ಟ ವಿದ್ಯಾರ್ಥಿಗಳು
ಶುಲ್ಕ ವಿವಾದ: ಸಂಶೋಧನಾ ಪ್ರಬಂಧ ಸುಟ್ಟುಹಾಕಿ ಕಣ್ಣೀರಿಟ್ಟ ವಿದ್ಯಾರ್ಥಿಗಳು
PM Modi Speech Live: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ
PM Modi Speech Live: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ
ಸಿಗರೇಟ್ ಸೇದಿದ್ರೆ ರಜತ್ ದೊಡ್ಡ ಹೀರೋನಾ? ದೂರು ನೀಡಿದ ಕರ್ನಾಟಕ ಸೇನಾ ಪಡೆ
ಸಿಗರೇಟ್ ಸೇದಿದ್ರೆ ರಜತ್ ದೊಡ್ಡ ಹೀರೋನಾ? ದೂರು ನೀಡಿದ ಕರ್ನಾಟಕ ಸೇನಾ ಪಡೆ
ಕಾರು ಚಾಲಕನ ಮೇಲೆ ಬೈಕ್​​ ಸವಾರನ ದರ್ಪ: ಮಿರರ್​​ ಮುರಿದಿದ್ದಲ್ಲದೆ ನಿಂದನೆ
ಕಾರು ಚಾಲಕನ ಮೇಲೆ ಬೈಕ್​​ ಸವಾರನ ದರ್ಪ: ಮಿರರ್​​ ಮುರಿದಿದ್ದಲ್ಲದೆ ನಿಂದನೆ