AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಗ ಕುರಿತು ಅವಹೇಳನಕಾರಿ ಮಾತು: ಧರ್ಮರಾಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಮತ್ತೊಮ್ಮೆ ಕ್ಷಮೆಯಾಚಿಸಿದ ಶಾಸಕ ಹ್ಯಾರಿಸ್

ಕರಗ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದ ಕಾಂಗ್ರೆಸ್​ ಶಾಸಕ ಎನ್​ಎ ಹ್ಯಾರಿಸ್​ ಮತ್ತೊಮ್ಮೆ ಕ್ಷಮೆ ಕೇಳಿದ್ದಾರೆ. ತಿಗಳರ ಪೇಟೆಯಲ್ಲಿರುವ ಶ್ರೀಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಎರಡನೇ ಬಾರಿಗೆ ಕ್ಷಮೆಯಾಚಿಸಿದ್ದಾರೆ.

ಕರಗ ಕುರಿತು ಅವಹೇಳನಕಾರಿ ಮಾತು: ಧರ್ಮರಾಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಮತ್ತೊಮ್ಮೆ ಕ್ಷಮೆಯಾಚಿಸಿದ ಶಾಸಕ ಹ್ಯಾರಿಸ್
ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಹ್ಯಾರಿಸ್​ ಭೇಟಿ
ರಮೇಶ್ ಬಿ. ಜವಳಗೇರಾ
|

Updated on:Mar 17, 2023 | 10:49 AM

Share

ಬೆಂಗಳೂರು: ಬೆಂಗಳೂರು ಕರಗವನ್ನು(bengaluru karaga) ನಾಟಕ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದ ಶಾಂತಿನಗರ ಕಾಂಗ್ರೆಸ್ ಎನ್​ಎ​ ಹ್ಯಾರಿಸ್ (NA Haris​ ಮತ್ತೊಮ್ಮೆ ಕ್ಷಮೆ ಕೇಳಿದ್ದಾರೆ. ಕಾಂಗ್ರೆಸ್​ನ ಕಾರ್ಯಕ್ರಮದಲ್ಲಿವೊಂದರಲ್ಲಿ ಬಿಜೆಪಿಯನ್ನು ಟೀಕೆ ಮಾಡುವ ಭರದಲ್ಲಿ ಬೆಂಗಳೂರು ಕರಗವನ್ನು ನಾಟಕ ಎಂದು ಹೇಳಿದ್ದರು. ಇದರಿಂದ ಆಕ್ರೋಶಗಳ ವ್ಯಕ್ತವಾಗುತ್ತಿದ್ದಂತೆಯೇ ಸಮಾಜಿಕ ಜಾಲತಾಣಗಳ ಮೂಲಕ ಕ್ಷಮೆ ಕೋರಿದ್ದರು. ಆದರೂ ಸುಮ್ಮನಾಗದ ತಿಗಳ ಸಮಾಜ ಮುಖಂಡರು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಹಿನ್ನೆಲೆ ಇಂದು(ಮಾರ್ಚ್ 17) ನೇರವಾಗಿ ತಿಗಳರ ಪೇಟೆಯಲ್ಲಿರುವ ವಿಶ್ವ ವಿಖ್ಯಾತ “ಬೆಂಗಳೂರು ಕರಗ” ಶಕ್ತ್ಯೋತ್ಸವದ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ(Dharmaraya Swami Temple) ಭೇಟಿ ನೀಡಿ ಕ್ಷಮೆಯಾಚಿಸಿದರು. ಎರಡನೇ ಬಾರಿ ಕ್ಷಮೆ ಕೇಳುವ ಮೂಲಕ ಡ್ಯಾಮೇಜ್​ ಕಂಟ್ರೋಲ್​​ಗೆ ಪ್ರಯತ್ನಿಸಿದರು.

ಇದನ್ನೂ ಓದಿ: ಬಿಜೆಪಿ ಟೀಕಿಸುವ ಭರದಲ್ಲಿ ಕರಗಕ್ಕೆ ಶಾಸಕ ಹ್ಯಾರಿಸ್ ಅವಹೇಳನ: ಭಾರಿ ಪ್ರತಿಭಟನೆ ಸುಳಿವು ಸಿಗುತ್ತಿದ್ದಂತೆ ಕ್ಷಮೆಯಾಚನೆ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಹ್ಯಾರಿಸ್​, ದೇವರ ಮೇಲೆ ನನಗೆ ಅಪಾರ ಭಕ್ತಿ ಗೌರವವಿದೆ. ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ನಾನು ಕ್ಷಮೆ ಕೇಳಿದ್ದೇನೆ. ಪ್ರತಿವರ್ಷವೂ ಬೆಂಗಳೂರು ಕರಗ ಉತ್ಸವದಲ್ಲಿ ಭಾಗಿಯಾಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇನ್ನು ಇದೇ ವೇಳೆ ಕರಗ ಸಮಿತಿ ಅಧ್ಯಕ್ಷ ಸತೀಶ್ ಮಾತನಾಡಿದ್ದು, ಶಾಸಕರು ಈಗಾಗಲೇ ನಮ್ಮ ಸಮಾಜದ ಕ್ಷಮೆ ಕೇಳಿದ್ದರು. ಆದರೂ ಅದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ಖುದ್ದಾಗಿ ಶಾಸಕರು ಆಗಮಿಸಿ ದೇವರ ಬಳಿ ಕ್ಷಮೆ ಕೇಳಿದ್ದಾರೆ. ದಯವಿಟ್ಟು ನಮ್ಮ ಸಮಾಜದವರು ಇದನ್ನು ಇಲ್ಲಿಗೆ ಬಿಡಬೇಕು ಎಂದು ಮನವಿ ಮಾಡಿದ್ದು, ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ ಯಾರು ಕರಗದ ಬಗ್ಗೆ ಅವಹೇಳನಕಾರಿಯಾಗಿ‌ ಮಾತಾಡಬೇಡಿ. ಮಾತಾಡಿದ್ರೆ ಇದನ್ನು ತೀವ್ರವಾಗಿ ವಿರೋಧಿಸುತ್ತೇನೆ ಎಂದು ಎಚ್ಚರಿಕೆಯನ್ನು ನೀಡಿದರು.

ಏನಿದು ಘಟನೆ?

ಸಾರ್ವಜನಿಕರನ್ನು ಉದ್ದೇಶಿಸಿ ರಾಜಕೀಯವಾಗಿ ಮಾತನಾಡುತ್ತಿದ್ದ ಹ್ಯಾರಿಸ್​, ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಆ ವೇಳೆ ಆಡಳಿತ ಪಕ್ಷದವನ್ನು ಟೀಕಿಸುವ ಭರದಲ್ಲಿ ‘ಅವರು ನಾಟಕ ಮಾಡುತ್ತಿದ್ದಾರೆ, ಇದೊಂದು ಎರಡು ತಿಂಗಳು ನಾಟಕದ ಸಮಯ, ಹಬ್ಬಕ್ಕೆ ಕರಗ ಟೈಮ್​ನಲ್ಲೆಲ್ಲ ಹಾಕೊಂಡು ಬರ್ತಾರಲ್ಲ, ಅದೇ ಥರ ಇವರೆಲ್ಲ ಈಗ ಓಡಾಡುತ್ತಿರೋದು ಎಂದು ಹೇಳಿದ್ದರು. ಹೀಗಾಗಿ ಹ್ಯಾರಿಸ್ ಹೇಳಿಕೆಗೆ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದವು. ಅಲ್ಲದೇ ಕರಗ ಉತ್ಸವ ಮಂಡಳಿ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿತ್ತು. ಇತ್ತ ಇದರ ಸುಳಿವು ಸಿಗುತ್ತಿದ್ದಂತೆ ಹ್ಯಾರಿಸ್ ಫೇಸ್​ಬುಕ್​ ಮೂಲಕ ಕ್ಷಮೆಯಾಚಿಸಿದ್ದರು.

Published On - 10:42 am, Fri, 17 March 23