ಬೆಂಗಳೂರು, ಫೆಬ್ರವರಿ 14: ಲೋಕಸಭೆ ಚುನಾವಣೆ ಹಿನ್ನಲೆ ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಮಾಡಲಾಗಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ (D. K. Shivakumar) ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ಹರೀಶ್ ಚೌಧರಿ, ಜಿಗ್ನೇಶ್ ಮೇವಾನ್, ರೋಜಿ ಜಾನ್ ಹಾಗೂ ಎಐಸಿಸಿ ಕಾರ್ಯದರ್ಶಿ ಗಳು ಭಾಗಿಯಾಗಿದ್ದರು. ಲೋಕಸಭೆ ಹಾಗೂ ರಾಜ್ಯಸಭೆ ಟಿಕೆಟ್ಗೆ ಸಂಬಂಧಿಸಿ ನಡೆಯಲಿರುವ ಮಹತ್ವದ ಚರ್ಚೆ ಮಾಡಲಾಗಿದೆ. ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕಾರ್ಯಕರ್ತರು ಕೊಟ್ಟ ಅಭಿಪ್ರಾಯದ ಬಗ್ಗೆ ಚರ್ಚೆ ಆಗಿದೆ. ಜಿಲ್ಲಾ ವೀಕ್ಷಕರು, ಸಚಿವರು, ಕಾರ್ಯಕರ್ತರ ಅಭಿಪ್ರಾಯದ ಬಗ್ಗೆ ಚರ್ಚೆ ಆಗಿದೆ. ಸಮೀಕ್ಷೆ ವರದಿ ಬಗ್ಗೆ ವಿಮರ್ಶೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಮತ್ತೊಂದು ಸುತ್ತಿನ ಸಮೀಕ್ಷೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಇನ್ನೂ ಸಹ ಯಾವುದೇ ಕ್ಷೇತ್ರದ ಟಿಕೆಟ್ ಫೈನಲ್ ಆಗಿಲ್ಲ. ವಿಳಂಬ ಮಾಡುವುದಿಲ್ಲ 50% ಅಭ್ಯರ್ಥಿಗಳ ಪಟ್ಟಿ ಬೇಗ ಮಾಡಬೇಕು. ಸಚಿವರು, ಕಾರ್ಯಕರ್ತರು, ಸಮೀಕ್ಷಾ ತಂಡಗಳು, ವೀಕ್ಷಕರು ನೀಡಿರುವ ಟಿಕೆಟ್ ಆಕಾಂಕ್ಷಿಗಳ ಹೆಸರುಗಳನ್ನ ಚರ್ಚೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ದೇವೇಗೌಡ್ರ ಸಭೆ ಅಂತ್ಯ: ಮಂಡ್ಯ ಜಿಡಿಎಸ್ ಪಾಲು, ಅಭ್ಯರ್ಥಿ ಸಹ ಬಹುತೇಕ ಫೈನಲ್!
ಯಾರು ಏನು ಅಭಿಪ್ರಾಯ ಕೊಟ್ಟಿದ್ದಾರೆಂದು ನನಗೆ ಮಾತ್ರ ಗೊತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಧಿಕೃತ ಪ್ರತಿ ಇವತ್ತು ನೀಡಿದ್ದೇನೆ. ಯಾರು ಏನು ಬರೆದುಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯಗೆ ಕೊಟ್ಟಿದ್ದೇನೆ. ಅಭಿಪ್ರಾಯಗಳನ್ನ ಗೌಪ್ಯವಾಗಿ ಇಡುತ್ತೇವೆ ಎಂದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸಚಿವರು ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯದಲ್ಲಿ ಯಾರು ಬೇಕಾದ್ರೂ ಸ್ಪರ್ಧೆ ಮಾಡಬಹುದು. ಎಲ್ಲರಿಗೂ ಒಂದು ಅವಕಾಶ ಇರಲಿದೆ. ಚುನಾವಣೆಯಲ್ಲಿ ಯಾರು ಗೆಲ್ತಾರೆ ಎನ್ನುವುದು ಪಕ್ಷಕ್ಕೆ ಮುಖ್ಯ. ಸಚಿವರು ಕೊಟ್ಟ ಪಟ್ಟಿಯನ್ನು ಮುಖ್ಯಮಂತ್ರಿಗೆ ಕೊಡಲಾಗಿದೆ. ಸರ್ವೆ ಮಾಡಲು ಸಿಎಂಗೆ ಲಿಸ್ಟ್ ಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೈಕೋರ್ಟ್ನಿಂದ 10 ಸಾವಿರ ದಂಡ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಿಎಂ ಸಿದ್ದರಾಮಯ್ಯ
ಸುದೀರ್ಘ ಚರ್ಚೆ ನಡೆಸಿದ್ದೇವೆ, ಮೊದಲ ಹಂತದ ಚರ್ಚೆ ಮುಗಿದಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಮತ್ತೊಂದು ಸುತ್ತಿನ ಸಭೆ ಅಗತ್ಯವಿದೆ. ಮತ್ತೊಂದು ಸುತ್ತಿನ ಸಭೆ ಬಳಿಕ ಚುನಾವಣಾ ಸಮಿತಿಗೆ ಪಟ್ಟಿ ಕಳಿಸುತ್ತೇವೆ ಎಂದು ಸುರ್ಜೇವಾಲ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:30 pm, Wed, 14 February 24