ಬೆಂಗಳೂರು: ಕೊರೊನಾ ಸಮಯದಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಸಾರಿಗೆ ನೌಕರರು ನಾಳಿನ ಮುಷ್ಕರವನ್ನು ಕೈಬಿಡಬೇಕು. ಪ್ರತಿಭಟನೆ ಮಾಡಿದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ. ಬೇರೆ ರಾಜ್ಯಗಳಲ್ಲಿ ಕೊರೊನಾ ನೆಪವೊಡ್ಡಿ ಸಂಬಳ ಕಡಿತ ಮಾಡಲಾಗಿದೆ. ಆದರೆ ನಾವು ಸಾರಿಗೆ ನೌಕರರ ಸಂಬಳವನ್ನು ಕಡಿತ ಮಾಡಿಲ್ಲ. ಸೌರಿಗೆ ನೌಕರರ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಸಾರಿಗೆ ಸಿಬ್ಬಂದಿ ನೌಕರರು ಹಠಮಾರಿತನದಿಂದ ಹೊರಬರಬೇಕು ಎಂದು ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಲಕ್ಷ್ಮಣ ಸವದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ರಾಜ್ಯ ಕಾಂಗ್ರೆಸ್ ಘಟಕ ‘ನೌಕರರಿಗೆ ಖಾಸಗಿ ಬಸ್‌ಗಳ ಬೆದರಿಕೆ ಹಾಕುತ್ತಿರುವ ನೀವು, ಸಾರ್ವಜನಿಕರ ಹಿತವನ್ನು ಯೋಚಿಸಿದ್ದೀರಾ’ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.
ರಾಜ್ಯ ಬಿಜೆಪಿ ಸರ್ಕಾರಕ್ಕೆ ನೌಕರರ ಹಿತವೂ ಬೇಕಿಲ್ಲ. ಜನರ ಸುರಕ್ಷತೆಯೂ ಬೇಕಿಲ್ಲ ದುಪ್ಪಟ್ಟು ದರ ಸುಲಿಗೆಗೆ ನಿಯಂತ್ರಣ ಹೇರಿದ್ದೀರಾ? ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಂಡಿದ್ದೀರಾ? ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರದ ಕ್ರಮ ಮನುಷ್ಯತ್ವವಿಲ್ಲದ ಸರ್ವಾಧಿಕಾರಿ ನಡೆ. ಸಾರಿಗೆ ನೌಕರರ ವೇತನ ತಡೆ ಹಿಡಿಯಲಾಗಿದೆ. ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪನವರೇ ನೌಕರರ ಮೇಲೆ ನಿಮಗೇಕೆ ಅಷ್ಟು ದ್ವೇಷ? ಸಾರಿಗೆ ನೌಕರರು ಪಾಕಿಸ್ತಾನದವರೇ ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ಪ್ರಶ್ನೆ ಮಾಡಿದೆ.
ನೌಕರರಿಗೆ ಖಾಸಗಿ ಬಸ್‌ಗಳ ಬೆದರಿಕೆ ತೋರಿಸುತ್ತಿರುವ @LaxmanSavadi ಅವರೇ,
ಸಾರ್ವಜನಿಕರ ಹಿತವನ್ನ ಯೋಚಿಸಿದ್ದೀರಾ?ಹಬ್ಬ ಹರಿದಿನಗಳಲ್ಲಿ ದುಪ್ಪಟ್ಟು ದರ ಸುಲಿಗೆಗೆ ನಿಯಂತ್ರಣ ಹೇರಿದ್ದೀರಾ?
ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಂಡಿದ್ದೀರಾ?@BJP4Karnataka ಸರ್ಕಾರಕ್ಕೆ ನೌಕರರ ಹಿತವೂ ಬೇಕಿಲ್ಲ, ಜನರ ಸುರಕ್ಷತೆಯೂ ಬೇಕಿಲ್ಲ.
— Karnataka Congress (@INCKarnataka) April 7, 2021
ರಾಜ್ಯ ಸರ್ಕಾರ ಮೊಂಡುತನ ಬಿಟ್ಟು ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು. ಜೊತೆಗೆ ಪ್ರಯಾಣಿಕರ, ನೌಕರರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಘಟಕ ಆಗ್ರಹಿಸಿದೆ.
ಕರ್ನಾಟಕ ರಾಜ್ಯದಲ್ಲಿ ಬೆಳಿಗ್ಗೆಯಿಂದಲೇ ಸಾರಿಗೆ ನೌಕರರ ಮುಷ್ಕರ ಬಿಸಿ ತಟ್ಟಿದೆ. ಪ್ರಯಾಣಿಕರು ನಿಂತಲ್ಲೇ ನಿಲ್ಲುವ ಸಂದಿಗ್ಧ ಸ್ಥಿತಿ. ಇನ್ನು ಕೆಲವರು ಕಾಲ್ನಡಿಗೆಯಲ್ಲಿಯೇ ಮನೆ ಸೇರುವ ಪರಿಸ್ಥಿತಿ ಎದುರಾಗಿದೆ. ಏತನ್ಮಧ್ಯೆ ಸಾರಿಗೆ ಬಸ್ಗಳು ಇಲ್ಲಿದಿದ್ದರೂ, ಪರ್ಯಾಯವಾಗಿ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚರಿಸಿದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಬಸ್ ಸಂಚಾರವಾಗಿಲ್ಲ. ಬಸ್ಸ್ಟ್ಯಾಂಡ್ನಲ್ಲಿಯೇ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಸಾರಿಗೆ ನೌಕರರ ವೇತನ ತಡೆ ಹಿಡಿದ @BJP4Karnataka ಸರ್ಕಾರದ ಕ್ರಮ ಮನುಷ್ಯತ್ವವಿಲ್ಲದ ಸರ್ವಾಧಿಕಾರಿ ನಡೆ.@BSYBJP ಅವರೇ, ಇಷ್ಟೊಂದು ದ್ವೇಷ ಮಾಡಲು ಸಾರಿಗೆ ನೌಕರರೇನು ಪಾಕಿಸ್ತಾನದವರೇ?
ಸರ್ಕಾರ ಮೊಂಡುತನ ಬಿಟ್ಟು ನೌಕರರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು.
ಪ್ರಯಾಣಿಕರ, ನೌಕರರ ಹಿತ ಕಾಯುವ ಕೆಲಸ ಮಾಡಬೇಕು.— Karnataka Congress (@INCKarnataka) April 7, 2021
ಇದನ್ನೂ ಓದಿ: Bus Strike: ಸಾರಿಗೆ ಸಿಬ್ಬಂದಿ ನೌಕರರು ಹಠಮಾರಿತನದಿಂದ ಹೊರಬರಬೇಕು: ಸಚಿವ ಲಕ್ಷ್ಮಣ ಸವದಿ
Published On - 5:08 pm, Wed, 7 April 21