ಸರ್ಕಾರದ ಕೊವಿಡ್​ ಮಾರ್ಗಸೂಚಿಗೆ ಕ್ಯಾರೇ ಅನ್ನದ ಜನ: ಸಾವಿರದ ಸನಿಹಕ್ಕೆ ತಲುಪಿದ ಕೊರೊನಾ ಕೇಸ್​!

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧಾನ ಗತಿಯಲ್ಲಿ ಮತ್ತೆ ಏರಿಕೆ ಕಾಣುತ್ತಿದೆ. ಹೌದು, ಸುಮಾರು 5 ತಿಂಗಳ ಬಳಿಕ ಕೇಸ್‌ಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಇದೀಗ, ಕೊರೊನಾ ಕೇಸ್‌ಗಳು ಸಾವಿರದ ಸನಿಹಕ್ಕೆ ತಲುಪಿದ್ದು ನಿನ್ನೆ ಒಂದೇ ದಿನ 934 ಪ್ರಕರಣಗಳು ವರದಿಯಾಗಿದೆ. ಇದಲ್ಲದೆ, ಕೊರೊನಾ ಪಾಸಿಟಿವಿಟಿ ರೇಟ್‌ ಸಹ ಶೇಕಡಾ 1.27ರಷ್ಟು ಆಗಿದೆ.

ಸರ್ಕಾರದ ಕೊವಿಡ್​ ಮಾರ್ಗಸೂಚಿಗೆ ಕ್ಯಾರೇ ಅನ್ನದ ಜನ: ಸಾವಿರದ ಸನಿಹಕ್ಕೆ ತಲುಪಿದ ಕೊರೊನಾ ಕೇಸ್​!
ಸರ್ಕಾರದ ಕೊವಿಡ್​ ಮಾರ್ಗಸೂಚಿಗೆ ಕ್ಯಾರೇ ಅನ್ನದ ಜನ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Mar 15, 2021 | 5:05 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧಾನ ಗತಿಯಲ್ಲಿ ಮತ್ತೆ ಏರಿಕೆ ಕಾಣುತ್ತಿದೆ. ಹೌದು, ಸುಮಾರು 5 ತಿಂಗಳ ಬಳಿಕ ಕೇಸ್‌ಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಇದೀಗ, ಕೊರೊನಾ ಕೇಸ್‌ಗಳು ಸಾವಿರದ ಸನಿಹಕ್ಕೆ ತಲುಪಿದ್ದು ನಿನ್ನೆ ಒಂದೇ ದಿನ 934 ಪ್ರಕರಣಗಳು ವರದಿಯಾಗಿದೆ. ಇದಲ್ಲದೆ, ಕೊರೊನಾ ಪಾಸಿಟಿವಿಟಿ ರೇಟ್‌ ಸಹ ಶೇಕಡಾ 1.27ರಷ್ಟು ಆಗಿದೆ.

2 ತಿಂಗಳ ಬಳಿಕ ಶೇ.1ರ ಗಡಿ ದಾಟಿರುವ ಪಾಸಿಟಿವ್ ರೇಟ್ ಶೇ.1.7ರಷ್ಟಿತ್ತು. ಈ ವಾರ ಕೊರೊನಾ ಪಾಸಿಟಿವ್ ರೇಟ್ ಶೇ.1.27ರಷ್ಟಾಗಿದೆ. ಜೊತೆಗೆ, ಕಳೆದ 7 ದಿನಗಳಿಂದ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಇದೇ ರೀತಿ ಹೆಚ್ಚಾದರೆ ಕೊರೊನಾ 2ನೇ ಅಲೆ ಬರುವ ಮುನ್ಸೂಚನೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ನೀಡಿರುವ ಮಾರ್ಗಸೂಚಿಗೆ ಕ್ಯಾರೇ ಅನ್ನದ ಸಾರ್ವಜನಿಕರ ನಿರ್ಲಕ್ಷ್ಯದಿಂದ ಕೊರೊನಾ ಸೋಂಕು ಮತ್ತೆ ಎಲ್ಲೆಡೆ ಹರಡುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಹಾಗಾಗಿ, ಮಾರ್ಚ್‌ನಿಂದ 3ತಿಂಗಳ ಕಾಲ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ, ಎರಡನೇ ಅಲೆಯಲ್ಲಿ ಕೊರೊನಾ ಆರ್ಭಟ ಹೆಚ್ಚಾದರೆ ಕಂಟ್ರೋಲ್‌ ಮಾಡೋದು ಬಹಳ ಕಷ್ಟವಾಗುತ್ತದೆ ಎಂದು ತಜ್ಞರು ಸೂಚಿಸಿದ್ದಾರೆ. ನಿನ್ನೆ ಬೆಂಗಳೂರು, ಬೆಳಗಾವಿ, ದಕ್ಷಿಣ ಕನ್ನಡ, ಕಲಬುರಗಿ ಹಾಗೂ ಮೈಸೂರಿನಲ್ಲಿ ಹೆಚ್ಚು ಕೇಸ್‌ಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಇದೀಗ ಮಹಾಮಾರಿಯ ತಡೆಗೆ ಸರ್ಕಾರ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಇಂದು ಮಹತ್ವದ ಸಭೆ ಕರೆದಿದ್ದಾರೆ. ಸಭೆಯಲ್ಲಿ ರಾಜ್ಯದ ಸದ್ಯದ ಕೊರೊನಾ ಪರಿಸ್ಥಿತಿ ಮತ್ತು ಅದರ ಹರಡುವಿಕೆಯನ್ನು ತಡೆಯಲು ಕಠಿಣ ಕ್ರಮಗಳನ್ನು ಜಾರಿ ಮಾಡೋ ಕುರಿತು ಚರ್ಚೆ ಸಹ ನಡೆಯಲಿದೆ. ತಾಂತ್ರಿಕ ಸಲಹಾ ಸಮಿತಿ ನೀಡಿರೋ ಸಲಹೆಗಳ ಬಗ್ಗೆ ಮಾತುಕತೆ ಸಹ ನಡೆಯಲಿದೆ.

ಶಿವಮೊಗ್ಗದ ಹಾಸ್ಟೆಲ್‌ನಲ್ಲಿದ್ದ ಇಬ್ಬರು ಪದವಿ ವಿದ್ಯಾರ್ಥಿಗಳಿಗೆ ಕೊರೊನಾ ಈ ನಡುವೆ, ಇಬ್ಬರು ಪದವಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪತ್ತೆಯಾಗಿರುವ ಪ್ರಸಂಗ ಶಿವಮೊಗ್ಗದ ಜೆ.ಪಿ.ನಗರದಲ್ಲಿರುವ ಹಾಸ್ಟೆಲ್‌ನಿಂದ ವರದಿಯಾಗಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ 95 ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಱಂಡಮ್ ಕೊರೊನಾ ಟೆಸ್ಟ್ ಮಾಡಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಯಿಂದ ಕೊರೊನಾ ಟೆಸ್ಟ್ ನಡೆಸಲಾಗುತ್ತಿದೆ.

ಇದನ್ನೂ ಓದಿ: ಡಾ. ಅಕ್ಸಾ ಶೇಖ್.. ಕೊವಿಡ್ ಲಸಿಕಾ ಕೇಂದ್ರಕ್ಕೆ ಮುಖ್ಯಸ್ಥರಾಗಿರುವ ಏಕೈಕ ತೃತೀಯಲಿಂಗಿ- ಹೆಮ್ಮೆಯೊಂದಿಗೆ ನಿರಾಶೆಯೂ ಇದೆ ಎನ್ನುತ್ತಾರೆ ಈ ವೈದ್ಯೆ