ಬೆಡ್ ಖಾಲಿ ಇಲ್ಲ ಅಂತ ಸೀದಾ CM ನಿವಾಸಕ್ಕೆ ಬಂದ ಕೊರೊನಾ ಸೋಂಕಿತ!

ಬೆಂಗಳೂರು: ಸಿಎಂ‌ ಬಿ.ಎಸ್​ ಯಡಿಯೂರಪ್ಪ ನಿವಾಸಕ್ಕೆ ಕೊರೊನಾ ಸೋಂಕಿತ ವ್ಯಕ್ತಿ ಭೇಟಿ ಕೊಟ್ಟಿದ್ದಾನೆ. ಸೋಂಕಿತ ಎಂದು ಹೇಳಿಕೊಂಡು ಬಂದ ವ್ಯಕ್ತಿ ನನಗೆ ಸಹಾಯ ಮಾಡಿ ಎಂದು ಸಿಎಂ ಮನೆ ಬಳಿ  ನಿಂತಿದ್ದಾನೆ. ಬನಶಂಕರಿಯ ಅಂಬೇಡ್ಕರ್ ನಗರದ ಆಟೋ ಚಾಲಕನಾಗಿರುವ ಸೋಂಕಿತ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ವರದಿ ಬಂದ ಬಳಿಕ ಇಂದು ಬೆಳಗ್ಗೆ BBMP ಯಿಂದ ಪಾಸಿಟಿವ್ ಬಂದ ಬಗ್ಗೆ ಕರೆ ಬಂದಿದೆ. ಆದರೆ ಬಿಬಿಎಂಪಿ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ದಾಖಲಿಸಿಲ್ಲ. ಬದಲಿಗೆ ಆಸ್ಪತ್ರೆಗಳಲ್ಲಿ […]

ಬೆಡ್ ಖಾಲಿ ಇಲ್ಲ ಅಂತ ಸೀದಾ CM ನಿವಾಸಕ್ಕೆ ಬಂದ ಕೊರೊನಾ ಸೋಂಕಿತ!
Edited By:

Updated on: Jul 16, 2020 | 5:13 PM

ಬೆಂಗಳೂರು: ಸಿಎಂ‌ ಬಿ.ಎಸ್​ ಯಡಿಯೂರಪ್ಪ ನಿವಾಸಕ್ಕೆ ಕೊರೊನಾ ಸೋಂಕಿತ ವ್ಯಕ್ತಿ ಭೇಟಿ ಕೊಟ್ಟಿದ್ದಾನೆ. ಸೋಂಕಿತ ಎಂದು ಹೇಳಿಕೊಂಡು ಬಂದ ವ್ಯಕ್ತಿ ನನಗೆ ಸಹಾಯ ಮಾಡಿ ಎಂದು ಸಿಎಂ ಮನೆ ಬಳಿ  ನಿಂತಿದ್ದಾನೆ.

ಬನಶಂಕರಿಯ ಅಂಬೇಡ್ಕರ್ ನಗರದ ಆಟೋ ಚಾಲಕನಾಗಿರುವ ಸೋಂಕಿತ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ವರದಿ ಬಂದ ಬಳಿಕ ಇಂದು ಬೆಳಗ್ಗೆ BBMP ಯಿಂದ ಪಾಸಿಟಿವ್ ಬಂದ ಬಗ್ಗೆ ಕರೆ ಬಂದಿದೆ. ಆದರೆ ಬಿಬಿಎಂಪಿ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ದಾಖಲಿಸಿಲ್ಲ.

ಬದಲಿಗೆ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ‌ ಇಲ್ಲ. ಖಾಲಿ ಆದ ಮೇಲೆ ನೋಡುವ ಎಂದು ಹೇಳಿದ್ದಾರೆ. ನಂತರ ಕಾಲ್ ರಿಸೀವ್ ಮಾಡ್ತಿಲ್ಲ. ಹೀಗಾಗಿ ಸಿಎಂ ನಿವಾಸದ ಬಳಿ ಬಂದು ನನಗೆ ಸಹಾಯ ಮಾಡಿ ಎಂದು ಬೇಡಿಕೊಂಡಿದ್ದಾನೆ. ಎಲ್ಲೂ ದಾಖಲಿಸಿಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಂತೆ ಕೊನೆಗೆ ಌಂಬುಲೆನ್ಸ್​ನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.