ನೆಚ್ಚಿನ ಮೇಷ್ಟ್ರ ಬೀಳ್ಕೊಡುಗೆಗೆ ಗ್ರಾಮವೆಲ್ಲಾ Present ಸರ್, ಆದ್ರೆ ದೈಹಿಕ ಅಂತರ Absent​!

ಯಾದಗಿರಿ: ಜಿಲ್ಲೆಯು ಸಹ ಕೊರೊನಾ ಸುಳಿಯಲ್ಲಿ ಸಿಲುಕಿದೆ. ದಿನೇ ದಿನೆ ಪತ್ತೆಯಾಗುತ್ತಿರುವ ಹೊಸ ಕೇಸ್​ಗಳಿಂದ ಜನ ನಲುಗಿ ಹೋಗಿದ್ದಾರೆ. ಆದರೆ, ಈ ನಡುವೆ ನಿವೃತ್ತಿ ಹೊಂದಿದ ನೆಚ್ಚಿನ ಮುಖ್ಯ ಶಿಕ್ಷಕರಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿದ ಸನ್ನಿವೇಶ ಜಿಲ್ಲೆಯ ವಡಗೇರ ತಾಲೂಕಿನ ನೀಲಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ 2 ದಿನಗಳ ಹಿಂದೆ ನೀಲಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಶರಣಪ್ಪ ನಡುವಿನಕೇರೆ ಕರ್ತವ್ಯದಿಂದ ನಿವೃತ್ತರಾದರು. ನೆಚ್ಚಿನ ಶಿಕ್ಷಕರಾಗಿದ್ದ ಶರಣಪ್ಪರಿಗೆ ಅವರ ಶಿಷ್ಯವೃಂದ ಹಾಗೂ ಗ್ರಾಮಸ್ಥರು ಅದ್ಧೂರಿಯಾದ ಬೀಳ್ಕೊಡುಗೆ ಕಾರ್ಯಕ್ರಮವನ್ನ […]

ನೆಚ್ಚಿನ ಮೇಷ್ಟ್ರ ಬೀಳ್ಕೊಡುಗೆಗೆ ಗ್ರಾಮವೆಲ್ಲಾ Present ಸರ್, ಆದ್ರೆ ದೈಹಿಕ ಅಂತರ Absent​!
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Jul 16, 2020 | 7:20 PM

ಯಾದಗಿರಿ: ಜಿಲ್ಲೆಯು ಸಹ ಕೊರೊನಾ ಸುಳಿಯಲ್ಲಿ ಸಿಲುಕಿದೆ. ದಿನೇ ದಿನೆ ಪತ್ತೆಯಾಗುತ್ತಿರುವ ಹೊಸ ಕೇಸ್​ಗಳಿಂದ ಜನ ನಲುಗಿ ಹೋಗಿದ್ದಾರೆ. ಆದರೆ, ಈ ನಡುವೆ ನಿವೃತ್ತಿ ಹೊಂದಿದ ನೆಚ್ಚಿನ ಮುಖ್ಯ ಶಿಕ್ಷಕರಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿದ ಸನ್ನಿವೇಶ ಜಿಲ್ಲೆಯ ವಡಗೇರ ತಾಲೂಕಿನ ನೀಲಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ 2 ದಿನಗಳ ಹಿಂದೆ ನೀಲಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಶರಣಪ್ಪ ನಡುವಿನಕೇರೆ ಕರ್ತವ್ಯದಿಂದ ನಿವೃತ್ತರಾದರು. ನೆಚ್ಚಿನ ಶಿಕ್ಷಕರಾಗಿದ್ದ ಶರಣಪ್ಪರಿಗೆ ಅವರ ಶಿಷ್ಯವೃಂದ ಹಾಗೂ ಗ್ರಾಮಸ್ಥರು ಅದ್ಧೂರಿಯಾದ ಬೀಳ್ಕೊಡುಗೆ ಕಾರ್ಯಕ್ರಮವನ್ನ ಆಯೋಜಿಸಿದ್ದರು. ವಿದ್ಯಾರ್ಥಿಗಳು Present ಸರ್, ಸಾಮಾಜಿಕ ಅಂತರ Absent ಸರ್! ಶರಣಪ್ಪರಿಗೆ ಅದ್ಧೂರಿ ಸನ್ಮಾನ ನೀಡುವುದರ ಜೊತೆಗೆ ರಥದಲ್ಲಿ ಕೂರಿಸಿ ಗ್ರಾಮದೆಲ್ಲೆಲ್ಲಾ ಮೆರವಣಿಗೆ ಸಹ ಮಾಡಿದರು. ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸಹ ಭಾಗಿಯಾದರು. ಈ ನಡುವೆ ಸಾಮಾಜಿಕ ಅಂತರ ಪಾಲಿಸೋದು ಏನಾಯ್ತು ಅಂತಾ ಕೇಳೋದೂ ಬೇಡ. ಗುಂಪುಗುಂಪಾಗಿ ಮೆರವಣಿಗೆ ನಡೆಸಿದ ನೀಲಹಳ್ಳಿಯ ಗ್ರಾಮಸ್ಥರೇ ಇದಕ್ಕೆ ಉತ್ತರ ನೀಡಬೇಕು. ಒಟ್ನಲ್ಲಿ ಮೇಷ್ಟ್ರ ಕ್ಲಾಸ್​ನಲ್ಲಿ ಓದಿದ್ದ ಎಲ್ಲಾ ವಿದ್ಯಾರ್ಥಿಗಳು Present ಸರ್​ ಎಂದು ಹಾಜರಿ ಕೂಗಿದ್ರೂ ಸಾಮಾಜಿಕ ಅಂತರ ಮಾತ್ರ Absent ಸರ್ ಎಂಬುವಂತೆ ಇತ್ತು.

Published On - 7:14 pm, Thu, 16 July 20

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ