ಕೋರ್ಟ್ ಸಿಬ್ಬಂದಿಗೆ ಕೊರೊನಾ; ಹರಪನಹಳ್ಳಿ ನ್ಯಾಯಾಲಯ ಸೀಲ್‌ಡೌನ್
ವಿಜಯನಗರ ಜಿಲ್ಲೆಯ ಹರಪನಹಳ್ಳಿ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಐವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವನ್ನು ಸೀಲ್‌ಡೌನ್ ಮಾಡಲಾಗಿದೆ.
ವಿಜಯನಗರ: ಜಿಲ್ಲೆಯ ಹರಪನಹಳ್ಳಿ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಐವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವನ್ನು ಸೀಲ್‌ಡೌನ್ ಮಾಡಲಾಗಿದೆ. ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ 60 ಜನ ಸಿಬ್ಬಂದಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿದೆ. ಟೆಸ್ಟ್ ವರದಿ ಬರುವವರೆಗೆ ಹೋಮ್ ಕ್ವಾರಂಟೈನ್ ಸೂಚಿಸಲಾಗಿದೆ. ದಿನ ಸಾಗುತ್ತಿದ್ದಂತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಜಿಲ್ಲೆಯಲ್ಲೂ ಕೊರೊನಾ ಆತಂಕ ಮನೆಮಾಡಿದೆ.
ಹಿರಿಯ ನ್ಯಾಯಾಧೀಶೆ ಉಂಡಿ ಮಂಜುಳಾ ನ್ಯಾಯಾಲಯಕ್ಕೆ 7 ದಿನ ರಜೆ ಘೋಷಿಸಿದ್ದಾರೆ. ಈ ಐವರ ಸಂಪರ್ಕಕ್ಕೆ ಬಂದ 60 ಜನರ ಗಂಟಲು ದ್ರವ ಸಂಗ್ರಹಿಸಲಾಗಿದೆ. ವರದಿ ಬರುವ ತನಕ ಮನೆಯಲ್ಲಿ ಪ್ರತ್ಯೇಕ ಇರುವಂತೆ ಸೂಚನೆ ನೀಡಲಾಗಿದೆ.
ಹಲವಾಗಲು ಗ್ರಾಮದಲ್ಲಿ ಒಂದೇ ಕುಟುಂಬದ ಐವರಿಗೆ ಸೋಂಕು ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮನೆ ಸೀಲ್ ಡೌನ್ ಮಾಡಲಾಗಿದೆ. ಅವರ ಸಂಪರ್ಕದಲ್ಲಿರುವ ಅಕ್ಕಪಕ್ಕದವರ ಗಂಟಲು ದ್ರವ ಪರೀಕ್ಷೆ ಮಾಡಿಸಲಾಗಿದೆ. ಸ್ಥಳಕ್ಕೆ ಹರಪನಹಳ್ಳಿ ತಹಶೀಲ್ದಾರ ಎಲ್.ಎಂ ನಂದೀಶ್, ತಾಲೂಕಾ ವೈದ್ಯಾಧಿಕಾರಿ ಡಾ.ವೆಂಕಟೇಶ ಭೇಟಿ ನೀಡಿ ಗ್ರಾಮಸ್ಥರಿಗೆ ತಿಳುವಳಿಕೆ ಹೇಳಿದ್ದಾರೆ.
ಇದನ್ನೂ ಓದಿ: ಕೊಪ್ಪಳದ ಏಳು ವರ್ಷ ಮಗುವಿಗೆ ವಕ್ಕರಿಸಿದ ಕೊರೊನಾ
ವಿದ್ಯಾರ್ಥಿಗಳಿಗೆ ಬೆನ್ನು ಬಿಡದೆ ಕಾಡಿದ ವೈರಸ್: ಇಂದೂ ಕೊಪ್ಪಳ, ಮಣಿಪಾಲದಲ್ಲಿ ಮುಂದುವರಿದ ಕೊರೊನಾ ಅಟ್ಟಹಾಸ