ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಮತ್ತೊಬ್ಬರು ಬಲಿ! ಎಲ್ಲಿ?
ಬೆಂಗಳೂರು: ಕಿಲ್ಲರ್ ಕೊರೊನಾ ಕಂಡು ಕೇಳರಿಯದ ರೀತಿ ಕರುನಾಡನ್ನೇ ಆಪೋಷನ ತೆಗೆದುಕೊಳ್ಳೋಕೆ ನಿಂತಿದೆ. ಹೆಮ್ಮಾರಿಯ ನಾಗಲೋಟ ರಾಜ್ಯದಲ್ಲಿ ಮುಂದುವರಿದಿದ್ದು, ಯಾರು ಊಹಿಸದ ರೀತಿಯಲ್ಲಿ ನರ್ತಿಸುತ್ತಿದೆ. ಅದರಲ್ಲೂ ನಿನ್ನೆ ಡೆಡ್ಲಿ ವೈರಸ್ ತನ್ನ ಇನ್ನೊಂದು ಮುಖವನ್ನ ತೋರಿಸಿದೆ. ಕೊರೊನಾ ಅಟ್ಟಹಾಸದ ಮಟ್ಟ ಅಂದಾಜಿಗೆ ಸಿಗ್ತಿಲ್ಲ.. ಇಂದು ಕಮ್ಮಿ ಆಗ್ಬಹುದು, ನಾಳೆ ಕಮ್ಮಿ ಆಗ್ಬಹುದು ಅನ್ನೋ ಲೆಕ್ಕಾಚಾರಗಳು ತಲೆಕೆಳಗಾಗ್ತಿವೆ. ಸುಳಿವೆ ನೀಡದಂತೆ, ನುಗ್ಗಿ ಬರ್ತಿರೋ ಹೆಮ್ಮಾರಿ ಕರುನಾಡನ್ನ ದಿನ ದಿನವೂ, ಅಣು ಕ್ಷಣವೂ ಕಂಗೆಡಿಸುತ್ತಲೇ ಇದೆ. 2 ಸಾವಿರದ ಗಡಿ […]
ಬೆಂಗಳೂರು: ಕಿಲ್ಲರ್ ಕೊರೊನಾ ಕಂಡು ಕೇಳರಿಯದ ರೀತಿ ಕರುನಾಡನ್ನೇ ಆಪೋಷನ ತೆಗೆದುಕೊಳ್ಳೋಕೆ ನಿಂತಿದೆ. ಹೆಮ್ಮಾರಿಯ ನಾಗಲೋಟ ರಾಜ್ಯದಲ್ಲಿ ಮುಂದುವರಿದಿದ್ದು, ಯಾರು ಊಹಿಸದ ರೀತಿಯಲ್ಲಿ ನರ್ತಿಸುತ್ತಿದೆ. ಅದರಲ್ಲೂ ನಿನ್ನೆ ಡೆಡ್ಲಿ ವೈರಸ್ ತನ್ನ ಇನ್ನೊಂದು ಮುಖವನ್ನ ತೋರಿಸಿದೆ.
ಕೊರೊನಾ ಅಟ್ಟಹಾಸದ ಮಟ್ಟ ಅಂದಾಜಿಗೆ ಸಿಗ್ತಿಲ್ಲ.. ಇಂದು ಕಮ್ಮಿ ಆಗ್ಬಹುದು, ನಾಳೆ ಕಮ್ಮಿ ಆಗ್ಬಹುದು ಅನ್ನೋ ಲೆಕ್ಕಾಚಾರಗಳು ತಲೆಕೆಳಗಾಗ್ತಿವೆ. ಸುಳಿವೆ ನೀಡದಂತೆ, ನುಗ್ಗಿ ಬರ್ತಿರೋ ಹೆಮ್ಮಾರಿ ಕರುನಾಡನ್ನ ದಿನ ದಿನವೂ, ಅಣು ಕ್ಷಣವೂ ಕಂಗೆಡಿಸುತ್ತಲೇ ಇದೆ.
2 ಸಾವಿರದ ಗಡಿ ದಾಟಿ ಕೊರೊನಾ ರಣಕೇಕೆ..! ಯಾವುದು ಆಗ್ಬಾರದು ಅಂತಾ ಅಂದ್ಕೊಂಡಿದ್ರೋ, ಯಾವುದು ನಡೀಬಾರದು ಅಂತಾ ಲಾಕ್ಡೌನ್, ಕರ್ಫ್ಯೂ, ಬಂದ್ ಅಂತಾ ಮಾಡಿದ್ರೋ, ಅದೆಲ್ಲವೂ ಕೊರೊನಾ ಅಟ್ಟಹಾಸದ ಮುಂದೆ ಛಿದ್ರ ಛಿದ್ರವಾಗ್ತಿದೆ. ಯಾಕಂದ್ರೆ ನಿನ್ನೆ ಒಂದೇ ದಿನ ಬರೋಬ್ಬರಿ 130 ಮಂದಿಯ ದೇಹ ಹೊಕ್ಕಿದ್ದು, ಸೋಂಕಿತರ ಸಂಖ್ಯೆ 2089 ಆಗಿದೆ.
ಕೊರೊನಾ ಸೋಂಕಿಗೆ ಮತ್ತೊಬ್ಬರು ಬಲಿ..! ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ವೀರಸಾಗರ ಗ್ರಾಮದ 55 ವರ್ಷದ ವೃದ್ಧೆ ನಿನ್ನೆ ಕೊರೊನಾಕ್ಕೆ ಬಲಿಯಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಮೇ 22ರಂದು ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಿಸದೆ ತುಮಕೂರು ಕೊವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ ಈವರೆಗೆ 43 ಜನ ಬಲಿಯಾಗಿದ್ದಾರೆ.
ಬೆಳಗಾವಿಯಲ್ಲಿ ಮತ್ತೆ ಸ್ಫೋಟವಾಗುತ್ತಾ ಕೊರೊನಾ..? ಇನ್ನು ಬೆಳಗಾವಿಯಲ್ಲಿ ಮತ್ತೆ ಕೊರೊನಾ ಸ್ಫೋಟವಾಗುವ ಲಕ್ಷಣ ಎದ್ದು ಕಾಣುತ್ತಿದೆ. ಇವತ್ತು 810 ಜನರ ವರದಿ ಇವತ್ತು ಅಥವಾ ನಾಳೆ ಬರಲಿದ್ದು, ಕೊರೊನಾ ಭಯ ಜಿಲ್ಲೆಯಲ್ಲಿ ಮತ್ತಷ್ಟು ಆವರಿಸಿದೆ.
ಮಹಾರಾಷ್ಟ್ರದಿಂದ ಬಂದವರಿಂದ್ಲೇ ಕರುನಾಡಿಗೆ ಕುತ್ತು..! ಕೊರೊನಾ ಹೀಗೆ ಸುನಾಮಿಯಂತೆ ಅಪ್ಪಳಿಸಲು ಕಾರಣ ಮಹಾರಾಷ್ಟ್ರದಿಂದ ಬಂದವರ ಕೊಡುಗೆಯೇ ಹೆಚ್ಚು. ಕಳೆದ 9 ದಿನದಲ್ಲಿ ದಾಖಲಾದ ಸಾವಿರ ಕೇಸ್ಪೈಕಿ ಬರೋಬ್ಬರಿ 786 ಮಂದಿ ಮಹಾರಾಷ್ಟ್ರದಿಂದಲೇ ಬಂದವರಾಗಿದ್ದಾರೆ.
ಒಟ್ನಲ್ಲಿ, 2 ಸಾವಿರದ ಗಡಿದಾಟಿರೋ ರಕ್ಕಸನ ಕೇಕೆಗೆ ಕರುನಾಡು ಬೆಚ್ಚಿ ಬಿದಿದ್ದೆ. ನಿತ್ಯವೂ ಶತಕ ಬಾರಿಸುತ್ತಿರೋ ಡೆಡ್ಲಿ ಆಟಗಾರನ ಎದುರು ಜನ ಕಂಗಾಲಾಗಿ ಹೋಗಿದ್ದಾರೆ. ಇವತ್ತು ಕೂಡ ಸಾಕಷ್ಟು ಜನರ ವರದಿ ಬರಲಿದ್ದು, ಶಕತ ಬಾರಿಸೋಕೆ ಡೆಡ್ಲಿ ವೈರಸ್ ಕಾದು ಕುಳಿತಿದೆ.