ರಾಜ್ಯದಲ್ಲಿ ಈವರೆಗೆ ಶೇ.4.5ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಿಕೆ; ಭಾರತ ಈವರೆಗೆ ಕೇವಲ 16.5 ಮಿಲಿಯನ್ ಲಸಿಕೆಗೆ ಆರ್ಡರ್!

| Updated By: ganapathi bhat

Updated on: Aug 23, 2021 | 12:38 PM

60 ವರ್ಷ ಮೇಲ್ಪಟ್ಟ 8,41,056 ಜನರಿಗೆ 2ನೇ ಡೋಸ್ ನೀಡಿಕೆ ಪೂರ್ಣಗೊಂಡಿದೆ. 44-59 ವರ್ಷದೊಳಗಿನ 3,29,952 ಜನರಿಗೆ 2ನೇ ಡೋಸ್ ಕೂಡ ನೀಡಲಾಗಿದೆ. 18-44 ವರ್ಷ ವಯೋಮಿತಿಯ 5,759 ಮಂದಿಗೆ ಲಸಿಕೆ ವಿತರಣೆಯಾಗಿದೆ.

ರಾಜ್ಯದಲ್ಲಿ ಈವರೆಗೆ ಶೇ.4.5ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಿಕೆ; ಭಾರತ ಈವರೆಗೆ ಕೇವಲ 16.5 ಮಿಲಿಯನ್ ಲಸಿಕೆಗೆ ಆರ್ಡರ್!
ಲಸಿಕೆಯ ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಶೇ.4.5ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಿಕೆಯಾಗಿದೆ. ಈವರೆಗೆ 17,77,751 ಡೋಸ್ ಕೊವಿಡ್ ಲಸಿಕೆ ನೀಡಲಾಗಿದೆ. 6,85,327 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದ್ದು, 4,39,162 ಆರೋಗ್ಯ ಕಾರ್ಯಕರ್ತರಿಗೆ 2ನೇ ಡೋಸ್ ಕೂಡ ನೀಡಿದೆ. 4,40,302 ಮುಂಚೂಣಿಯ ಕಾರ್ಯಕರ್ತರಿಗೆ ಮೊದಲ ಡೋಸ್ ಹಾಗೂ 1,67,581 ಮಂದಿ ಮುಂಚೂಣಿಯ ಕಾರ್ಯಕರ್ತರಿಗೆ 2ನೇ ಡೋಸ್ ಲಸಿಕೆ ಹಾಕಿಸಲಾಗಿದೆ.

60 ವರ್ಷ ಮೇಲ್ಪಟ್ಟ 8,41,056 ಜನರಿಗೆ 2ನೇ ಡೋಸ್ ನೀಡಿಕೆ ಪೂರ್ಣಗೊಂಡಿದೆ. 44-59 ವರ್ಷದೊಳಗಿನ 3,29,952 ಜನರಿಗೆ 2ನೇ ಡೋಸ್ ಕೂಡ ನೀಡಲಾಗಿದೆ. 18-44 ವರ್ಷ ವಯೋಮಿತಿಯ 5,759 ಮಂದಿಗೆ ಲಸಿಕೆ ವಿತರಣೆಯಾಗಿದೆ.

ಭಾರತ ಲಸಿಕೆ ಆಮದು ವಿಚಾರದಲ್ಲಿ ಕೂಡ ಹಿಂದೆ ಉಳಿದಿದೆ. ಭಾರತ ಈವರೆಗೆ ಕೇವಲ 16.5 ಮಿಲಿಯನ್ ಲಸಿಕೆಗೆ ಆರ್ಡರ್ ಮಾಡಿದೆ. ಆದರೆ, ಅಮೆರಿಕ 2020ರ ಜುಲೈನಲ್ಲೇ 400 ಮಿಲಿಯನ್ ಲಸಿಕೆಗೆ ಆರ್ಡರ್ ಮಾಡಿತ್ತು. ಯುರೋಪಿಯನ್ ಒಕ್ಕೂಟ 800 ಮಿಲಿಯನ್ ಲಸಿಕೆಗೆ ಆರ್ಡರ್ ಮಾಡಿತ್ತು. ಇಂಗ್ಲೆಂಡ್ 120 ಮಿಲಿಯನ್‌ ಲಸಿಕೆಗೆ ಆರ್ಡರ್ ನೀಡಿದರೆ, ಬ್ರೆಜಿಲ್ 90 ಮಿಲಿಯನ್ ಲಸಿಕೆಗೆ ಆರ್ಡರ್ ನೀಡಿತ್ತು.

ವ್ಯಾಕ್ಸಿನ್ ಕೊರತೆ ಬಗ್ಗೆ ಹೈಕೋರ್ಟ್ ಆತಂಕ‌
2ನೇ ಡೋಸ್ ವ್ಯಾಕ್ಸಿನ್ ಕೊರತೆ ಬಗ್ಗೆ ಹೈಕೋರ್ಟ್ ಆತಂಕ‌ ವ್ಯಕ್ತಪಡಿಸಿದೆ. 18 ರಿಂದ 44 ವರ್ಷದವರಿಗಿರಲಿ 45 ವರ್ಷದವರಿಗೂ ಲಸಿಕೆ ಸಿಗ್ತಿಲ್ಲ. 65 ಲಕ್ಷ ಜನರಿಗೆ 2ನೇ ಡೋಸ್ ಕೊವಿಡ್ ಲಸಿಕೆ ಸಿಕ್ಕಿಲ್ಲ. 1.60 ಲಕ್ಷ ಜನರಿಗೆ 8 ವಾರವಾದರೂ 2ನೇ ಡೋಸ್ ಸಿಕ್ಕಿಲ್ಲ. 16.63 ಲಕ್ಷ ಜನಕ್ಕೆ 6 ವಾರವಾದರೂ 2ನೇ ಡೋಸ್ ಸಿಕ್ಕಿಲ್ಲ. ಒಟ್ಟು 26 ಲಕ್ಷ ಜನಕ್ಕೆ ತಕ್ಷಣ ವ್ಯಾಕ್ಸಿನೇಷನ್‌ ಅಗತ್ಯವಿದೆ. ಕ್ರಮ ಕೈಗೊಳ್ಳದಿದ್ದರೆ ಲಸಿಕಾ ಕಾರ್ಯಕ್ರಮವೇ ವಿಫಲವಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ, ನ್ಯಾ. ಅರವಿಂದ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್​ಗೆ ಲಸಿಕೆ ಕಳುಹಿಸಲು ಅನುಮತಿ ಕೇಳಿದ ಸೆರಮ್​ ಸಂಸ್ಥೆ; ದೇಶದಲ್ಲೇ ಕೊರತೆ ಇದೆ, ರಫ್ತು ಸಾಧ್ಯವಿಲ್ಲ ಎಂದ ಭಾರತ ಸರ್ಕಾರ

ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ಲಸಿಕೆ ಪೂರೈಸುತ್ತಿರುವ ಗವಿ ಮೈತ್ರಿಕೂಟದಿಂದ ಭಾರತಕ್ಕೆ ಕೊರೊನಾ ಲಸಿಕೆಯ ನೆರವು

Published On - 3:55 pm, Tue, 11 May 21