AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್​ಗೆ ಲಸಿಕೆ ಕಳುಹಿಸಲು ಅನುಮತಿ ಕೇಳಿದ ಸೆರಮ್​ ಸಂಸ್ಥೆ; ದೇಶದಲ್ಲೇ ಕೊರತೆ ಇದೆ, ರಫ್ತು ಸಾಧ್ಯವಿಲ್ಲ ಎಂದ ಭಾರತ ಸರ್ಕಾರ

Corona Vaccine: ಇಂಗ್ಲೆಂಡ್​ಗೆ 50 ಲಕ್ಷ ಡೋಸ್ ಲಸಿಕೆ ರಫ್ತು ಮಾಡಲು ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಮನವಿ ಮಾಡಿದ ಬೆನ್ನಲ್ಲೇ ಅದನ್ನು ನಿರಾಕರಣೆ ಮಾಡಿದ ಕೇಂದ್ರ ಸರ್ಕಾರ ಭಾರತದಲ್ಲಿ ಲಸಿಕೆ ಕೊರತೆ ಹಿನ್ನೆಲೆ ರಫ್ತುಗೆ ಅನುಮತಿ ಇಲ್ಲ ಎಂದಿದೆ.

ಇಂಗ್ಲೆಂಡ್​ಗೆ ಲಸಿಕೆ ಕಳುಹಿಸಲು ಅನುಮತಿ ಕೇಳಿದ ಸೆರಮ್​ ಸಂಸ್ಥೆ; ದೇಶದಲ್ಲೇ ಕೊರತೆ ಇದೆ, ರಫ್ತು ಸಾಧ್ಯವಿಲ್ಲ ಎಂದ ಭಾರತ ಸರ್ಕಾರ
ಸೆರಮ್ ಇನ್ಸ್‌ಟಿಟ್ಯೂಟ್‌ನ ಕೊವಿಶೀಲ್ಡ್ ಲಸಿಕೆ
Skanda
|

Updated on: May 11, 2021 | 12:09 PM

Share

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ವೈದ್ಯಕೀಯ ವ್ಯವಸ್ಥೆಯ ತಳಪಾಯವೇ ಅಲುಗಾಡುವಂತಾಗಿದ್ದು, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಬೇಕಾದ ಬಹುತೇಕ ಎಲ್ಲಾ ಸೌಲಭ್ಯಗಳಲ್ಲೂ ಅಭಾವ ಕಾಣಿಸಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ನಿಯಂತ್ರಿಸಲು ಲಸಿಕೆಯೊಂದೇ ಪರಿಣಾಮಕಾರಿ ಮಾರ್ಗ ಎಂಬ ಅಭಿಪ್ರಾಯವನ್ನು ತಜ್ಞರು ಕೂಡಾ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ದುರದೃಷ್ಟವಶಾತ್ ಇಷ್ಟು ದಿನ ಬೇರೆ ದೇಶಗಳಿಗೆ ಲಸಿಕೆ ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತದಲ್ಲೇ ಈಗ ಲಸಿಕೆ ಕೊರತೆ ಕಾಣಿಸಿಕೊಂಡಿದೆ. ಈ ಕಾರಣದಿಂದ ಭಾರತ ಸರ್ಕಾರ ಈಗ ಲಸಿಕೆ ರಫ್ತು ಮಾಡುವುದಕ್ಕೆ ತಯಾರಿಕಾ ಸಂಸ್ಥೆಗಳಿಗೆ ಅನುಮತಿ ನಿರಾಕರಿಸಿದ್ದು, ದೇಶದಲ್ಲಿ ಲಸಿಕೆ ಕೊರತೆ ಎದುರಾಗಿರುವ ಹಿನ್ನೆಲೆ ಬೇರೆಡೆಗೆ ಕಳುಹಿಸುವುದು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇಂಗ್ಲೆಂಡ್​ಗೆ 50 ಲಕ್ಷ ಡೋಸ್ ಲಸಿಕೆ ರಫ್ತು ಮಾಡಲು ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಮನವಿ ಮಾಡಿದ ಬೆನ್ನಲ್ಲೇ ಅದನ್ನು ನಿರಾಕರಣೆ ಮಾಡಿದ ಕೇಂದ್ರ ಸರ್ಕಾರ ಭಾರತದಲ್ಲಿ ಲಸಿಕೆ ಕೊರತೆ ಹಿನ್ನೆಲೆ ರಫ್ತುಗೆ ಅನುಮತಿ ಇಲ್ಲ ಎಂದಿದೆ. ಸದ್ಯ ದೇಶದ ಹಲವು ರಾಜ್ಯಗಳಲ್ಲಿ ಎರಡನೇ ಡೋಸ್ ಲಸಿಕೆ ಪೂರೈಸುವುದಕ್ಕೂ ಸಮಸ್ಯೆ ತಲೆದೋರಿದ್ದು, 18 ರಿಂದ 44 ವರ್ಷ ವಯೋಮಾನದವರಿಗೆ ಲಸಿಕೆ ನೀಡುವ ಕಾರ್ಯಕ್ರಮವೂ ವಿಳಂಬವಾಗುತ್ತಿದೆ. ಹೀಗಾಗಿ ರಫ್ತು ಮಾಡುವುದನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.

ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ಲಸಿಕೆ ಪೂರೈಸುತ್ತಿರುವ ಗವಿ ಮೈತ್ರಿಕೂಟದಿಂದ ಭಾರತಕ್ಕೆ ಕೊರೊನಾ ಲಸಿಕೆಯ ನೆರವು ಇನ್ನೊಂದೆಡೆ, ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ಲಸಿಕೆ ಪೂರೈಸುತ್ತಿರುವ ಅಂತಾರಾಷ್ಟ್ರೀಯ ಲಸಿಕೆ ಮೈತ್ರಿಕೂಟ ಗವಿ ಮೂಲಕ ಭಾರತಕ್ಕೆ ಲಸಿಕೆಯ ನೆರವು ನೀಡಲು ನಿರ್ಧರಿಸಲಾಗಿದೆ. ಗವಿ ಎಂಬುದು ಒಂದು ಅಂತಾರಾಷ್ಟ್ರೀಯ ಲಸಿಕೆ ಮೈತ್ರಿಕೂಟವಾಗಿದೆ. ಮಾರಣಾಂತಿಕ ರೋಗಗಳಿಂದ, ಬಡರಾಷ್ಟ್ರಗಳ ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡುವ ಕಾರ್ಯಕ್ರಮವೇ ಗವಿ. ಇದು ಮೂಲತಃ ಒಂದು ಸ್ವಯಂಸೇವಾ ಸಂಸ್ಥೆ. ಆದರೆ, ಇದು ವಿಶ್ವ ಆರೋಗ್ಯ ಸಂಸ್ಥೆಯ ಜತೆಗೆ ಕಾರ್ಯನಿರ್ವಹಿಸುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಬ್ಯಾಂಕ್, ಯುನಿಸೆಫ್, ಲಸಿಕೆ ತಯಾರಿಕಾ ಕಂಪನಿಗಳು, ಲಸಿಕೆ ಅಭಿವೃದ್ಧಿ ಸಂಸ್ಥೆಗಳು, ಲಸಿಕೆ ದಾನ ನೀಡುವ ದೇಶಗಳು, ಬಿಲ್‌ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಹಾಗೂ ಹಲವು ಎನ್‌ಜಿಒಗಳ ಸಹಯೋಗದಲ್ಲಿ ಕೆಲಸ ಮಾಡುತ್ತದೆ.

ಭಾರತದ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿರುವ ಗವಿ‌ ಮೈತ್ರಿಕೂಟ ಭಾರತಕ್ಕೆ 2.5 ಕೋಟಿ ಡೋಸ್ ಲಸಿಕೆಯನ್ನು ಸಬ್ಸಿಡಿ ದರದಲ್ಲಿ ಪೂರೈಸುವುದಾಗಿ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗವಿ ಮೈತ್ರಿಕೂಟದ ವಕ್ತಾರರು ಭಾರತಕ್ಕೆ ಲಸಿಕೆ ವಿತರಿಸುವುದಕ್ಕೆ ಕೋವ್ಯಾಕ್ಸ್ ಮಂಡಳಿಯ ಒಪ್ಪಿಗೆ ಸಿಕ್ಕಿದ್ದು, ತಕ್ಷಣವೇ ಸಬ್ಸಿಡಿ ದರದಲ್ಲಿ 2.5 ಕೋಟಿ ಡೋಸ್ ಲಸಿಕೆ ಹಾಗೂ ಆರ್ಥಿಕ ಸಹಾಯವನ್ನೂ ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Explainer: ಭಾರತದಲ್ಲಿ 2ನೇ ಡೋಸ್ ಕೊರೊನಾ ಲಸಿಕೆ ಪಡೆಯಲು ಏಕಿಷ್ಟು ಪರದಾಟ? ಪರಿಹಾರವೇನು?