ಹುಬ್ಬಳ್ಳಿಯಿಂದ ದಿಲ್ಲಿವರೆಗೂ ರಂಜಾನ್ ಅಚರಣೆ ಹೀಗೆ ನಡೆದಿದೆ!
ಹುಬ್ಬಳ್ಳಿ: ಜಗತ್ತಿನಾದ್ಯಂತ ಈ ಬಾರಿಯ ರಂಜಾನ್ ಹಬ್ಬ ವಿಶೇಷ ಮಹತ್ವ ಪಡೆದುಕೊಂಡಿದೆ. ಮುಸ್ಲಿಂ ಸಮುದಾಯದವರು ರಂಜಾನ್ ಮಾಸಾಚರಣೆ ಅಂತ್ಯಕ್ಕೆ ಇಂದು ವಿಶೇಷ ಸಂಭ್ರಮ ಸಡಗರದಿಂದ ಇಂದು ಪ್ರಾರ್ಥನೆ ಮಾಡಿದ್ದಾರೆ. ಆದ್ರೆ ಅನಿವಾರ್ಯವಾಗಿ ತಮ್ಮ ತಮ್ಮ ಮನೆಗಳಲ್ಲೇ ಈದ್ ಆಚರಸಿದ್ದಾರೆ. ಇನ್ನು ಜನ್ರತಿನಿಧಿಗಳೂ ಸಹ ತಮ್ಮ ಮನೆಗಳಲ್ಲೇ ರಂಜಾನ್ ಪ್ರಾರ್ಥನೆ ಸಲ್ಲಿಸಿ, ಸಮುದಾಯದವರಿಗೆ ಮಾದರಿಯಾಗಿದ್ದಾರೆ. ಬಹಳಷ್ಟು ಕಡೆ ಮುಸ್ಲಿಂ ಸಮುದಾಯವರು ತಮ್ಮ ಮನೆಗಳಲ್ಲೆ ರಂಜಾನ್ ಹಬ್ಬ ಆಚರಿಸಿದ್ದಾರೆ. ಅನೇಕ ಮಂದಿ ಮನೆಯ ಮಹಡಿ ಮೇಲೆ ತೆರಳಿ, ಅಲ್ಲೇ ಹಬ್ಬ […]
ಹುಬ್ಬಳ್ಳಿ: ಜಗತ್ತಿನಾದ್ಯಂತ ಈ ಬಾರಿಯ ರಂಜಾನ್ ಹಬ್ಬ ವಿಶೇಷ ಮಹತ್ವ ಪಡೆದುಕೊಂಡಿದೆ. ಮುಸ್ಲಿಂ ಸಮುದಾಯದವರು ರಂಜಾನ್ ಮಾಸಾಚರಣೆ ಅಂತ್ಯಕ್ಕೆ ಇಂದು ವಿಶೇಷ ಸಂಭ್ರಮ ಸಡಗರದಿಂದ ಇಂದು ಪ್ರಾರ್ಥನೆ ಮಾಡಿದ್ದಾರೆ. ಆದ್ರೆ ಅನಿವಾರ್ಯವಾಗಿ ತಮ್ಮ ತಮ್ಮ ಮನೆಗಳಲ್ಲೇ ಈದ್ ಆಚರಸಿದ್ದಾರೆ. ಇನ್ನು ಜನ್ರತಿನಿಧಿಗಳೂ ಸಹ ತಮ್ಮ ಮನೆಗಳಲ್ಲೇ ರಂಜಾನ್ ಪ್ರಾರ್ಥನೆ ಸಲ್ಲಿಸಿ, ಸಮುದಾಯದವರಿಗೆ ಮಾದರಿಯಾಗಿದ್ದಾರೆ.
ಬಹಳಷ್ಟು ಕಡೆ ಮುಸ್ಲಿಂ ಸಮುದಾಯವರು ತಮ್ಮ ಮನೆಗಳಲ್ಲೆ ರಂಜಾನ್ ಹಬ್ಬ ಆಚರಿಸಿದ್ದಾರೆ. ಅನೇಕ ಮಂದಿ ಮನೆಯ ಮಹಡಿ ಮೇಲೆ ತೆರಳಿ, ಅಲ್ಲೇ ಹಬ್ಬ ಆಚರಿಸಿ, ಪರಸ್ಪರ ಶೂಭಾಶಯ ಕೋರಿದ್ದಾರೆ. ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿರುವ ರಶೀದ್ ಶೇಖ್ ಕುಟುಂಬಸ್ಥರು ಮನೆಯಲ್ಲೆ ಪ್ರಾರ್ಥನೆ ಮಾಡಿದ್ದಾರೆ. ಇದು ಒಂದು ಉದಾಹರಣೆಯಷ್ಟೆ. ಹೀಗೆ ದೇಶದ ಉದ್ದಗಲಕ್ಕೂ ಜನ ತಮ್ಮ ತಮ್ಮ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿ, ಹಬ್ಬ ಆಚರಿಸಿದ್ದಾರೆ.
ಮಹಾಮಾರಿ ಕೊರೊನಾದಂದಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಚಾಲೂಗೊಳಿಸಿರುವುದರಿಂದ ಜನ ಮನೆಗಳನ್ನು ಬಿಟ್ಟು ಹೊರಬರುವಂತಿಲ್ಲ. ಹಾಗಾಗಿ ಅನಿವಾರ್ಯವಾಗಿ ಪ್ರಾರ್ಥನೆಗಳು ಮನೆಮಟ್ಟಸಕ್ಕೆ ನಡೆದಿವೆ.
ಬಿಕೋ ಎನ್ನುತ್ತಿರುವ ಮಸೀದಿಗಳು! ನಾಲ್ಕನೆ ಲಾಕ್ ಡೌನ್ ನಿಂದಾಗಿ ಮಸೀದಿಗಳಲ್ಲಿ ಬಂದು ಪ್ರಾರ್ಥನೆ ಸಲ್ಲಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಜನ ಮಸೀದಿಗಳಿಗೆ ಬರುವುದನ್ನು ತಡೆಯಲು ಬಿಗಿ ಪೊಲೀಸ್ ಕಾವಲು ಹಾಕಲಾಗಿದೆ. ಹಾಗಾಗಿ ಮಸೀದಿಗಳಿಗೆ ಬೀಗ ಹಾಕಲಾಗಿದ್ದು, ಬಿಕೋ ಎನ್ನುತ್ತಿವೆ.
Published On - 11:14 am, Mon, 25 May 20