ರಾಜ್ಯ ಬಿಜೆಪಿಯಿಂದ ‘ನನ್ನ ಬೂತ್-ಕೊರೋನ ಮುಕ್ತ ಬೂತ್’ ಅಭಿಯಾನದಲ್ಲಿ 56,211 ಕಾರ್ಯಕರ್ತರು ಭಾಗಿ

karnataka BJP: ಈ ವರ್ಷದ ಕೊರೋನಾದ 2ನೇ ಅಲೆಯ ಭೀಕರ ಕಠಿಣ ಸಂದರ್ಭದಲ್ಲಿ ನಾವು ನಿರಂತರವಾಗಿ ನಮ್ಮ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ, ಮಂಡಲಗಳಲ್ಲಿ ಸೇರಿದಂತೆ ನಮ್ಮ ಬೂತ್ ಮಟ್ಟದವರೆಗೆ ನಾವು ನಿರಂತರವಾಗಿ ಸೇವೆ ಮಾಡುತ್ತಿದ್ದೇವೆ.

ರಾಜ್ಯ ಬಿಜೆಪಿಯಿಂದ ‘ನನ್ನ ಬೂತ್-ಕೊರೋನ ಮುಕ್ತ ಬೂತ್’ ಅಭಿಯಾನದಲ್ಲಿ 56,211 ಕಾರ್ಯಕರ್ತರು ಭಾಗಿ
ಬಿಜೆಪಿ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಶ್ವತನಾರಾಯಣ ಅವರು ಇಂದು ವಿಧಾನಸೌಧದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯ ಸಾರಾಂಶ ಇಲ್ಲಿದೆ:

ಸೇವೆಯೇ ಸಂಘಟನೆ 2.0
ಕೊರೊನಾ ಮಾಹಾಮಾರಿ ಇಂದು ವಿಶ್ವದಾದ್ಯಂತ ವ್ಯಾಪಿಸಿ, ಕೋಟ್ಯಂತರ ಜನರ ಜೀವನ ದುಸ್ಥರಗೊಳಿಸಿದೆ. ನಮ್ಮ ದೇಶದಲ್ಲಿ ಲಕ್ಷಾಂತರ ಸಾವು ಸಂಭವಿಸುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಪಕ್ಷವು ಜವಾಬ್ದಾರಿಯುತ ಪಕ್ಷವಾಗಿ ಸಂಘಟಿತ ಸೇವಾ ಮನೋಭಾವ ಮತ್ತು ನಮ್ಮ ಸಾಮಾಜಿಕ ಬದ್ಧತೆಯಿಂದ ಮಾನವೀಯ ನೆಲೆಗಟ್ಟಿನಲ್ಲಿ ಹಾಗೂ ಸಂಕಷ್ಟದಲ್ಲಿರುವವರ ಜನರ ಸೇವೆ ಮಾಡುವ ದೃಷ್ಟಿಯಿಂದ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು “ಸೇವೆಯೇ ಸಂಘಟನೆ” ಕಾರ್ಯದಲ್ಲಿ ತೊಡಗುವಂತೆ ರಾಷ್ಟ್ರಾದ್ಯಂತ ಸೇವೆಯಲ್ಲಿ ತೊಡಗಲು ಕರೆ ನೀಡಿದಾಗ ಅವರ ಮಾರ್ಗದರ್ಶನದಲ್ಲಿ ಈ ಹಿಂದೆಯು ನಾವು ಕಳೆದ ವರ್ಷ ಹಲವಾರು ಸೇವಾ ಕಾರ್ಯ ಮಾಡಿದ್ದೇವೆ. ಪ್ರಸ್ತುತ ಈ ವರ್ಷದ ಕೊರೋನಾದ 2ನೇ ಅಲೆಯ ಭೀಕರ ಕಠಿಣ ಸಂದರ್ಭದಲ್ಲಿ ನಾವು ನಿರಂತರವಾಗಿ ನಮ್ಮ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ, ಮಂಡಲಗಳಲ್ಲಿ ಸೇರಿದಂತೆ ನಮ್ಮ ಬೂತ್ ಮಟ್ಟದವರೆಗೆ ನಾವು ನಿರಂತರವಾಗಿ ಸೇವೆ ಮಾಡುತ್ತಿದ್ದೇವೆ.

‘ನನ್ನ ಬೂತ್ – ಕೊರೊನಾ ಮುಕ್ತ ಬೂತ್’ – ಅಭಿಯಾನ’
ರಾಜ್ಯಾದ್ಯಂತ ಇಂದು ನಾವು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ `ಕಾಲ್ ಸೆಂಟರ್’ ಮತ್ತು `ಕೇರ್ ಸೆಂಟರ್’ ತೆರೆಯುವುದರ ಮುಖಾಂತರ ‘ನನ್ನ ಬೂತ್ – ಕೊರೊನಾ ಮುಕ್ತ ಬೂತ್’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ರಾಜ್ಯದ 37 ಬಿಜೆಪಿ ಜಿಲ್ಲೆಗಳಲ್ಲಿ 250 ಕೇಂದ್ರಗಳಲ್ಲಿ ಕೊರೊನಾ ಸಹಾಯ ಕೇಂದ್ರಗಳನ್ನು ತೆರೆದು, ರಾಜ್ಯಾದ್ಯಂತ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ.

ಈ ಕೇಂದ್ರಗಳಲ್ಲಿ 13 ರೀತಿಯ ಸೇವಾ ಚಟುವಟಿಕೆಗಳು:
1) ಆಸ್ಪತ್ರೆಗಳ ಮಾಹಿತಿ 2) ವೆಂಟಿಲೇರ್ಸ್ ಬಗ್ಗೆ ಮಾಹಿತಿ 3) ಆಂಬ್ಯೂಲೆನ್ಸ್ ಸೇವೆ 4) ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ 5) ಮಾಸ್ಕ್ ಗಳ ವಿತರಣೆ 6) ಕೊರೊನಾ ಪೀಡಿತ ಮನೆಗಳಿಗೆ ಆಹಾರ ಪೊಟ್ಟಣ ವಿತರಣೆ 7) ಆಕ್ಸಿಜನ್ ಬೇಕಾದವರಿಗೆ ಸ್ಪಂದನೆ 8) ರೆಮಿಡಿಸಿವಿರ್ ಇಂಜೆಕ್ಷನ್ ಬೇಕಾದವರಿಗೆ ಸಹಾಯ ಹಸ್ತ 9) ಶವ ಸಂಸ್ಕಾರ 10) ವಯಸ್ಸಾದ ಕೊರೋನ ಪೀಡಿತರಿಗೆ ಸೇವೆ 11) ರಕ್ತದಾನ ಕಾರ್ಯಕ್ರಮಗಳು 12) ಟೆಲಿಮೆಡಿಸಿನ್ 13) ಐಸೋಲೇಷನ್ (ಆರೈಕೆ) ಕೇಂದ್ರ ಹೀಗೆ ಹಲವಾರು ರೀತಿಯಲ್ಲಿ ಕೊರೋನ ಸೋಂಕಿತರಿಗೆ ಪಕ್ಷದ ಕಾರ್ಯಕರ್ತರು ನೆರವಾಗುತ್ತಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ರಾಜ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಾಗೂ ಪಕ್ಷದ ರಾಜ್ಯ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ನನ್ನ ಬೂತ್ – ಕೊರೋನ ಮುಕ್ತ ಬೂತ್’ ಅಭಿಯಾನದಲ್ಲಿ ಒಟ್ಟು 56,211 ಕಾರ್ಯಕರ್ತರು ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸೇವೆ ಮಾಡುತ್ತಿದ್ದಾರೆ.

ಇದುವರೆಗೆ ನಡೆಸಿದ 13 ರೀತಿಯ ಚಟುವಟಿಕೆಗಳ ಅಂಕಿ-ಅಂಶಗಳು

1. ರಾಜ್ಯಾದ್ಯಂತ ಸಹಾಯ ಕೇಂದ್ರಗಳು : 250
2. ವಿತರಿಸಿದ ಮಾಸ್ಕ್ ಗಳು : 2,48,211
3. ವಿತರಿಸಿದ ಆಹಾರ ಪೊಟ್ಟಣಗಳು : 78,532
4. ವಿತರಿಸಿದ ಪಡಿತರ ಕಿಟ್ : 19,464
5. ಸೋಂಕಿತರಿಗೆ ಆಕ್ಸಿಜೆನ್ ನೆರವು : 3,394
6. ರೆಮ್ಡಿಸಿವಿರ್ ಇಂಜೆಕ್ಷನ್ ಸಹಾಯ : 4,325
(ವೈದ್ಯರು ಮತ್ತು ಆಸ್ಪತ್ರೆಗಳ ಸಹಕಾರದಿಂದ)
7. ವೆಂಟಿ ಲೆಟರ್ ಸಹಾಯ : 1927
8. ಆಂಬ್ಯೂಲೆನ್ಸ್ಗಳು : 34, (ನೆರವು 1,616 ಜನರಿಗೆ)
9. ರಕ್ತದಾನ ಕಾರ್ಯಕ್ರಮಗಳು : 76 (5218 ಯೂನಿಟ್)
10. ಐಸೋಲೇಷನ್ (ಆರೈಕೆ) ಕೇಂದ್ರಗಳು : 23
11. ಟೆಲಿಫೋನ್ ಮುಖಾಂತರ ವೈದ್ಯಕೀಯ ಸಹಾಯ : 250 ಕೇಂದ್ರಗಳು (ವೈದ್ಯರುಗಳು ಸುಮಾರು 300)
12. ಶವಸಂಸ್ಕಾರ : 35 ಕೇಂದ್ರಗಳಲ್ಲಿ ಮಾಡಲಾಗಿದೆ.
13. ವ್ಯಾಕ್ಸಿನೇಷನ್ ಮತ್ತು ಐಸೋಲೇಷನ್ ಬಗ್ಗೆ ಜಾಗೃತಿ : ರಾಜ್ಯಾದ್ಯಂತ ಬೂತ ಗಳಲ್ಲಿ ವ್ಯಾಕ್ಸಿನೇಷನ್ ಮತ್ತು ಮನೆಯಲ್ಲಿಯೇ ಇದ್ದು ಕೊರೊನಾ ಚಿಕಿತ್ಸೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಈ ಅಭಿಯಾನದಲ್ಲಿ ಕೊರೊನಾ ಕುರಿತು ರಾಜ್ಯದ ಸುಮಾರು 26,852 ಕಾರ್ಯಕರ್ತರು ಮನೆ-ಮನೆ ಭೇಟಿ ನೀಡಿ, ಜಾಗೃತಿ ಮೂಡಿಸಿದ್ದಾರೆ. ಕೊರೊನಾ ಲಸಿಕೆ (ಪಡೆದುಕೊಳ್ಳುವಂತೆ) ಕುರಿತು ಜಾಗೃತಿ ಮತ್ತು ಉತ್ತೇಜನ ನೀಡುವ ಕಾರ್ಯದಲ್ಲಿ ಸುಮಾರು 41,358 ಕಾರ್ಯಕರ್ತರು ಭಾಗವಹಿಸಿದ್ದಾರೆ. ‘ನನ್ನ ಬೂತ್ – ಕೊರೊನಾ ಮುಕ್ತ ಬೂತ್’ ಅಭಿಯಾನದಲ್ಲಿ 56,211 ಕಾರ್ಯಕರ್ತರು ಭಾಗವಹಿಸಿದ್ದಾರೆ. ಹಿರಿಯ ನಾಗರಿಕರಿಗೆ ಲಸಿಕೆ ಹಾಗೂ ಆಸ್ಪತ್ರೆಗೆ ದಾಖಲಿಸುವುದು, ಔಷಧಿ ಸಹಾಯ ಮಾಡುವಲ್ಲಿ ಸುಮಾರು 27,302 ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಶವ ಸಂಸ್ಕಾರ:
ಈ ಜಿಲ್ಲೆಯೊಂದರಲ್ಲಿಯೇ ನಮ್ಮ ಪಕ್ಷದ ಕಾರ್ಯಕರ್ತರು ಶವಸಂಸ್ಕಾರದಲ್ಲಿ ನಿರತರಾಗಿದ್ದು, ಇದುವರೆಗೆ 80 ಶವಸಂಸ್ಕಾರಗಳನ್ನು ಮಾಡಿದ್ದಾರೆ.

ಜನಸೇವಾ ಸಂಸ್ಥೆ ಮತ್ತು ಬಿಜೆಪಿ ಜೊತೆಗೂಡಿ ಮಾಡುತ್ತಿರುವ ಯೋಜನೆ:
ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕಲಬುರ್ಗಿ, ಸೇಡಂ, ಬೀದರ್ ಈ 7 ಕೇಂದ್ರಗಳಲ್ಲಿ 500 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ತುರ್ತು ಇರುವವರಿಗೆ ತಾತ್ಕಾಲಿಕ ಆಕ್ಸಿಜೆನ್ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನಲ್ಲಿ 3 ಕೇಂದ್ರಗಳಲ್ಲಿ ಐಸೋಲೇಷನ್ ಕೇಂದ್ರಗಳ ಅರಂಭ:
ನಾವೊಂದು ಜವಾಬ್ದಾರಿಯುತ ಸಂಘಟಿತ ಸೇವಾ ಮನೋಭಾವದ ಪಕ್ಷದ ಕಾರ್ಯಕರ್ತರಾಗಿ ನಮ್ಮ ಸಾಮಾಜಿಕ ಬದ್ಧತೆಯನ್ನು ರಾಜಕೀಯ ಅಧಿಕಾರ ಸೇವೆಗಾಗಿ, ಅಂತ್ಯೋದಯಕ್ಕಾಗಿ, ಶ್ರೀಸಾಮಾನ್ಯರ ರಕ್ಷಣೆ, ಪೋಷಣೆ ಮಾಡುವ ಉದ್ದೇಶದಿಂದ ಸಂಕಷ್ಟದಲ್ಲಿರುವವರೆಗೆ ಸಂವೇದನಾಶೀಲರಾಗಿ ಸ್ಪಂದಿಸುವ ಕಾರ್ಯದಲ್ಲಿ ನಮ್ಮ ಕಾರ್ಯಕರ್ತರು ತೊಡಗಿದ್ದಾರೆ.

(coronavirus rampage: more than 56 thousand karnataka bjp karyakartas serve in 37 bjp districts in karnataka)