School Reopening: ದುಡುಕಿ ಶಾಲೆ ಆರಂಭಿಸಲು ನಿರ್ಧರಿಸಬೇಡಿ: ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಸಲಹೆ

School Reopening: ದುಡುಕಿ ಶಾಲೆ ಆರಂಭಿಸಲು ನಿರ್ಧರಿಸಬೇಡಿ: ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಸಲಹೆ
ಡಾ.ಮಂಜುನಾಥ್

Covid 19: ಈ ಹಿಂದೆ ಕೇರಳ-ಮಹಾರಾಷ್ಟ್ರದಲ್ಲಿ ಕೇಸ್ ಹೆಚ್ಚಳ ಆದಾಗ ಕರ್ನಾಟಕದಲ್ಲಿ 2 ವಾರದ ಬಳಿಕ ಸೋಂಕಿತರ ಸಂಖ್ಯೆ ಹೆಚ್ಚಳವಾಗಿತ್ತು. ಹೀಗಾಗಿ, ಈ ಬಾರಿಯೂ ಇದೇ ಮಾದರಿ ಏರಿಕೆ ಸಾಧ್ಯತೆಯಿದೆ.

TV9kannada Web Team

| Edited By: guruganesh bhat

Aug 02, 2021 | 7:57 PM

ಬೆಂಗಳೂರು: ಕರ್ನಾಟಕಲ್ಲಿ ಶಾಲೆಗಳನ್ನು ಆರಂಭಿಸಲು ದುಡುಕುವುದು ಬೇಡ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ನೆರೆಯ ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಆಗಸ್ಟ್ 15ರವರೆಗೂ ಶಾಲೆ ಆರಂಭಕ್ಕೆ ಕಾಯುವುದು (School Reopening) ಸೂಕ್ತವಾಗಿದೆ. ಇನ್ನೆರಡು ವಾರ ಕಾದು ನೋಡಿ ಶಾಲೆ ಆರಂಭಿಸಿದರೆ ಒಳಿತು. ಶಾಲೆಗಳನ್ನ ಆರಂಭಿಸಲು ದುಡುಕಿನ ನಿರ್ಧಾರ ಒಳ್ಳೆಯದಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕೇರಳ-ಮಹಾರಾಷ್ಟ್ರದಲ್ಲಿ ಕೇಸ್ ಹೆಚ್ಚಳ ಆದಾಗ ಕರ್ನಾಟಕದಲ್ಲಿ 2 ವಾರದ ಬಳಿಕ ಸೋಂಕಿತರ ಸಂಖ್ಯೆ ಹೆಚ್ಚಳವಾಗಿತ್ತು. ಹೀಗಾಗಿ, ಈ ಬಾರಿಯೂ ಇದೇ ಮಾದರಿ ಏರಿಕೆ ಸಾಧ್ಯತೆಯಿದೆ. ಶಾಲೆಗಳನ್ನು ಆರಂಭಿಸುವ ವಿಚಾರ ಬಹಳ ಸೂಕ್ಷ್ಮ ನಿರ್ಧಾರವಾಗಿದೆ. ಇದರ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಬೇಕಾಗಿದೆ. ಕೇರಳ ಗಡಿ ಭಾಗದ ಮಂಗಳೂರಿನಲ್ಲಿ ಕೇಸ್ ಹೆಚ್ಚಳವಾಗಿದೆ. ಹೀಗಾಗಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕಾದು ನೋಡಿ ಸ್ವಲ್ಪ ದಿನ ಕಾದು ನೋಡಿ ಶಾಲೆ ಆರಂಭಿಸುವುದು ಸೂಕ್ತ ಎಂದು ಬೆಂಗಳೂರಿನಲ್ಲಿ ಡಾ.ಸಿ.ಎನ್.ಮಂಜುನಾಥ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 

Covid-19: ಕೊರೊನಾ ರೋಗಿಗಳ ಕಣ್ಣೀರಿನಿಂದಲೂ ಹರಡುತ್ತೆ ಕೊವಿಡ್ ಸೋಂಕು!; ಅಚ್ಚರಿಯ ವಿಷಯ ಬಯಲು

ಕೊರೊನಾ 3ನೇ ಅಲೆ ಆತಂಕ: ಕೊವಿಡ್ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಳಕ್ಕೆ ಬಸವರಾಜ ಬೊಮ್ಮಾಯಿ ಸೂಚನೆ

(Covid 19 Dr Manjunath of Jayadev Hospital advise Dont start schools in hurry)

Follow us on

Related Stories

Most Read Stories

Click on your DTH Provider to Add TV9 Kannada