ಬೆಂಗಳೂರು, ಆಗಸ್ಟ್ 01: ಒನ್ ಟೈಮ್ ಸೆಟಲ್ಮೆಂಟ್ ಆಸ್ತಿ ತೆರಿಗೆ (Property tax) ಪಾವತಿಗೆ ನೀಡಿದ್ದ ಗಡುವು ಜುಲೈ 31ರ ಬುಧವಾರ ಮುಕ್ತಾಯವಾಗಿದೆ. ಒಟಿಎಸ್ ಮೂಲಕ 1 ಲಕ್ಷ ಜನರು ತೆರಿಗೆ ಪಾವತಿಸಿದ್ದು ಆ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬೊಕ್ಕಸಕ್ಕೆ 3200 ಕೋಟಿ ರೂ. ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 800 ಕೋಟಿ ರೂ. ಹೆಚ್ಚಳವಾಗಿದೆ ಎಂದು ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಕಳೆದ 10-12 ದಿನಗಳಲ್ಲಿ ಸುಮಾರು 1200 ಕೋಟಿ ರೂ ಸಂಗ್ರಹಿಸಲಾಗಿದೆ. ಲಕ್ಷಕ್ಕೂ ಹೆಚ್ಚು ಜನರು ಒನ್ ಟೈಮ್ ಸೆಟಲ್ಮೆಂಟ್ ಯೋಜನೆಯಡಿ ಆಸ್ತಿ ತೆರಿಗೆ ಪಾವತಿಸಿದ್ದು, ಹೀಗಾಗಿ ಸಂಗ್ರಹವಾದ ಒಟ್ಟು ಮೊತ್ತದಲ್ಲಿ 380 ಕೋಟಿ ರೂ. ಓಟಿಎಸ್ ಮೂಲಕ ಸಂಗ್ರಹವಾಗಿದೆ. ಇನ್ನೂ ಸುಮಾರು 150 ಕೋಟಿ ರೂ. ಚೆಕ್ ಮತ್ತು ಡಿಮ್ಯಾಂಡ್ ಡ್ರಾಫ್ಟ್ಗಳ ಮೂಲಕ ಸಂಗ್ರಹಿಸಲಾಗಿದೆ.
ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಗಡುವು ಅಂತ್ಯ: ಪಾವತಿಸದವರಿಗೆ ಬಡ್ಡಿ ಅಸ್ತ್ರ ಪ್ರಯೋಗಕ್ಕೆ ಬಿಬಿಎಂಪಿ ಸಜ್ಜು
ಬಿಬಿಎಂಪಿಯ ಅಧಿಕಾರಿಗಳ ಮಾಹಿತಿ ಪ್ರಕಾರ ಏಪ್ರಿಲ್ 1 ರಿಂದ ಜುಲೈ 29 ರವರೆಗೆ ಆಸ್ತಿ ತೆರಿಗೆ ಪಾವತಿದಾರರ ಸಂಖ್ಯೆ ಗಮನಾರ್ಹ ಕುಸಿತ ಕಂಡಿದೆ. ಇದಕ್ಕೆ ಒನ್ ಟೈಮ್ ಸೆಟಲ್ಮೆಂಟ್ ಯೋಜನೆ ಕಾರಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿಯಿಂದ ಗುಡ್ ನ್ಯೂಸ್; ಶೇಕಡ 50 ರಷ್ಟು ರಿಯಾಯಿತಿ
ಇನ್ನು ಇತ್ತೀಚೆಗೆ ಬಿಬಿಎಂಪಿ ಹಂಚಿಕೊಂಡ ಮಾಹಿತಿಯ ಪ್ರಕಾರ ಬೆಂಗಳೂರಿನ ಎಂಟು ವಲಯಗಳಲ್ಲಿ ಸುಮಾರು 2.88 ಲಕ್ಷಕ್ಕೂ ಹೆಚ್ಚು ಜನರು ತೆರಿಗೆ ಪಾವತಿಸಬೇಕಿದ್ದು, 548.94 ಕೋಟಿ ರೂ. ಮೌಲ್ಯದ ಆಸ್ತಿ ತೆರಿಗೆ ಬಾಕಿ ಬಾಕಿ ಇದೆ ಎಂದು ತಿಳಿಸಿದೆ.
ವಲಯ ಏಪ್ರಿಲ್ 2023-ಜುಲೈ 2023 ಏಪ್ರಿಲ್ 2024-ಜುಲೈ 2024
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:26 pm, Thu, 1 August 24