ಆನೇಕಲ್: ಮೊಬೈಲ್​​ಗಾಗಿ ಸೋದರಿಯರಿಬ್ಬರ ಜಗಳ: ಅತ್ತಿಗೆಯನ್ನೇ ಹತ್ಯೆಗೈದ ಮೈದುನ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 25, 2024 | 8:07 PM

ಕ್ಷುಲ್ಲಕ ಕಾರಣಕ್ಕೆ ಅತ್ತಿಗೆಯನ್ನೇ ಮೈದುನ ಹತ್ಯೆಗೈದಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೊಸೂರು ಗ್ರಾಮದ ಮುಖ್ಯರಸ್ತೆಯ ಸಿಂಗಸಂದ್ರದಲ್ಲಿ ನಡೆದಿದೆ. ಬಿಹಾರ ಮೂಲದ ಗುಡಿಯಾ ಬೇಬಿ(42) ಯನ್ನು ರಾಜೇಶ್ ಕುಮಾರ್ ಹತ್ಯೆ ಮಾಡಿದ್ದಾರೆ. ರಾಜೇಶ್ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಆನೇಕಲ್: ಮೊಬೈಲ್​​ಗಾಗಿ ಸೋದರಿಯರಿಬ್ಬರ ಜಗಳ: ಅತ್ತಿಗೆಯನ್ನೇ ಹತ್ಯೆಗೈದ ಮೈದುನ
ಪ್ರಾತಿನಿಧಿಕ ಚಿತ್ರ
Follow us on

ಆನೇಕಲ್, ಮಾರ್ಚ್​ 25: ಕ್ಷುಲ್ಲಕ ಕಾರಣಕ್ಕೆ ಅತ್ತಿಗೆಯನ್ನೇ ಮೈದುನ ಹತ್ಯೆಗೈದಿರುವಂತಹ (killed)  ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೊಸೂರು ಗ್ರಾಮದ ಮುಖ್ಯರಸ್ತೆಯ ಸಿಂಗಸಂದ್ರದಲ್ಲಿ ನಡೆದಿದೆ. ಬಿಹಾರ ಮೂಲದ ಗುಡಿಯಾ ಬೇಬಿ(42) ಯನ್ನು ರಾಜೇಶ್ ಕುಮಾರ್ ಹತ್ಯೆ ಮಾಡಿದ್ದಾರೆ. ಮೊಬೈಲ್​​ಗಾಗಿ ಅಕ್ಕ ಗುಡಿಯಾ ಬೇಬಿ ಹಾಗೂ ತಂಗಿ ಗೀತಾ ಕುಮಾರಿ ಜಗಳ ಮಾಡಿದ್ದಾರೆ. ಜಗಳ ಬಿಡಿಸಲು ಬಂದಿದ್ದ ಗುಡಿಯಾ ತಂಗಿ ಗಂಡ ರಾಜೇಶ್​ ಕುಮಾರ್​ನನ್ನ ಗುಡಿಯಾ ಬೇಬಿ ನಿಂದಿಸಿದ್ದಾಳೆ. ಹೀಗಾಗಿ ಸಿಟ್ಟಿನಿಂದ ಅತ್ತಿಗೆ ಮೇಲೆ ದೊಣ್ಣೆಯಿಂದ ಮೈದುನ ಥಳಿಸಿದ್ದಾರೆ.

ಹಲ್ಲೆಗೊಳಗಾಗಿದ್ದ ಗುಡಿಯಾ ಬೇಬಿ ಗಾಯಗೊಂಡಿದ್ದರು. ಆಸ್ಪತ್ರೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಾಜೇಶ್ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಓವರ್​ಟೇಕ್ ಮಾಡುವ ಭರದಲ್ಲಿ ಪಿಕಪ್ ವಾಹನದಡಿ ಬಿದ್ದ ಬೈಕ್​​ ಸವಾರ ಸಾವು

ಮಂಗಳೂರು: ಓವರ್​ಟೇಕ್ ಮಾಡುವ ಭರದಲ್ಲಿ ಪಿಕಪ್ ವಾಹನದಡಿ ಬೈಕ್​ ಸವಾರ ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಳೇಕೋಟೆ ಬಳಿ ಘಟನೆ ನಡೆದಿದೆ.

ಇದನ್ನೂ ಓದಿ: ಪತ್ನಿ ಮೇಲೆ ಪತಿಯಿಂದ ಹಲ್ಲೆ: ತಡೆಯಲು ಬಂದ ಪೊಲೀಸರ ಕೈಕಚ್ಚಿ ಹಲ್ಲೆಗೆ ಯತ್ನ

ಲಾಯಿಲ ನಿವಾಸಿ ಪುರುಷೋತ್ತಮ(19) ಮೃತ ವ್ಯಕ್ತಿ. ತೌಫಿಕ್(17) ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೈಕ್ ಅಪಘಾತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ ಆಗಿದ್ದು, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಳಿನ ಗುಂಡಿಯಲ್ಲಿ ಬಿದ್ದು ಇಬ್ಬರು ಸಹೋದರರು ಸಾವು

ಹಾವೇರಿ: ಮರಳಿನ ಗುಂಡಿಯಲ್ಲಿ ಬಿದ್ದು ಇಬ್ಬರು ಸಹೋದರರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನದಿಹರಳಹಳ್ಳಿ ಗ್ರಾಮದ ತುಂಗಭದ್ರಾ ನದಿಯಲ್ಲಿ ನಡೆದಿದೆ. ಬಸವರಾಜ್ ಪವಾರ್(12), ನಾಗರಾಜ್ ಪವಾರ್(9) ಮೃತರು. ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆ ದುರಂತ ನಡೆದಿದೆ.

ಇದನ್ನೂ ಓದಿ: ಬೆಳಗಾವಿ ಪೊಲೀಸ್ ಠಾಣೆ ಆವರಣದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ

ಅಕ್ರಮ ಮರಳುಗಾರಿಕೆಯೇ ದುರಂತಕ್ಕೆ ಕಾರಣ. ಮರಳು ದಂಧೆ ತಡೆಯುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕುಮಾರಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.