ಮುಸ್ಲಿಂ ವಿರೋಧಿ ಹೇಳಿಕೆ: ಅನಂತ್ಕುಮಾರ್ ಹೆಗಡೆಗೆ ಬಿಗ್ ರಿಲೀಫ್; ಕ್ರಿಮಿನಲ್ ಕೇಸ್ನಿಂದ ಮುಕ್ತ
ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ತ್ಯಾಗರಾಜ ಎನ್. ಇನವಳ್ಳಿ ತೀರ್ಪು ನೀಡಿದ್ದಾರೆ. ಇದೀಗ ಅನಂತ್ ಕುಮಾರ್ ಹೆಗಡೆ ಆರೋಪಮುಕ್ತರಾಗಿದ್ದಾರೆ.
ಬೆಂಗಳೂರು: ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿದ್ದ ಬಿಜೆಪಿ ಸಂಸದ ಅನಂತ್ಕುಮಾರ್ ಹೆಗಡೆಗೆ ಬಿಗ್ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನಂತ್ ಕುಮಾರ್ ಹೆಗಡೆ ವಿರುದ್ಧದ ಕ್ರಿಮಿನಲ್ ಕೇಸ್ನ್ನು ಖುಲಾಸೆಗೊಳಿಸಿದೆ.
ಇಸ್ಲಾಂ ಧರ್ಮ ಜಗತ್ತಿಗೇ ಒಂದು ಬಾಂಬ್ ಎಂದು ಅನಂತ್ ಕುಮಾರ್ ಹೆಗಡೆ 2016ರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಮುರಾದ್ ಹುಸೇನ್ ದೂರು ನೀಡಿದ್ದರು. ಅನಂತ್ ಹೆಗಡೆ ಪರ ವಕೀಲ ಸಂತೋಷ್ ನಗರಾಳೆ ವಾದ ಮಂಡಿಸಿದ್ದರು. ಉದ್ದೇಶ ಪೂರ್ವಕವಾಗಿ ಹೇಳಿಕೆ ನೀಡಿಲ್ಲ, ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವೂ ಇರಲಿಲ್ಲ ಎಂದು ನ್ಯಾಯಾಲಯದ ಎದುರು ಹೇಳಿದ್ದರು.
ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ತ್ಯಾಗರಾಜ ಎನ್. ಇನವಳ್ಳಿ ತೀರ್ಪು ನೀಡಿದ್ದಾರೆ. ಇದೀಗ ಅನಂತ್ ಕುಮಾರ್ ಹೆಗಡೆ ಆರೋಪ ಮುಕ್ತರಾಗಿದ್ದಾರೆ.
Published On - 2:18 pm, Mon, 28 December 20