ದೇವನಹಳ್ಳಿ: ದುಬೈನಿಂದ ತಂದಿದ್ದ ಡ್ರೋನ್, iPhone ಸೇರಿದಂತೆ 75 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ದುಬೈನಿಂದ ಬೆಂಗಳೂರಿಗೆ‌ ತಂದಿದ್ದ ಚಿನ್ನ ಹಾಗೂ iPhone ಸೇರಿದಂತೆ 75 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ದೇವನಹಳ್ಳಿ: ದುಬೈನಿಂದ ತಂದಿದ್ದ ಡ್ರೋನ್, iPhone ಸೇರಿದಂತೆ 75 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ
ಜಪ್ತಿಯಾದ ವಸ್ತುಗಳು
ಸಾಧು ಶ್ರೀನಾಥ್​ Edited By:

Updated on: Feb 11, 2021 | 5:01 PM

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ದುಬೈನಿಂದ ಬೆಂಗಳೂರಿಗೆ‌ ತಂದಿದ್ದ ಚಿನ್ನ ಹಾಗೂ iPhone ಸೇರಿದಂತೆ 75 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ದುಬೈನಿಂದ ಬೆಂಗಳೂರಿಗೆ‌ ತಂದಿದ್ದ ಚಿನ್ನ, iPhone ಮತ್ತು ಡ್ರೋನ್ ಸೇರಿದಂತೆ 75 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೂ ಮತ್ತು ದೇಹದ ಮೇಲೆ ಪೇಸ್ಟ್ ರೂಪದಲ್ಲಿ ಚಿನ್ನ ಹಚ್ಚಿಕೊಂಡು ಬರಲಾಗಿತ್ತು. ದುಬೈನಿಂದ ಆಗಮಿಸಿದ್ದ ಪ್ರಯಾಣಿಕರು ಅನುಮಾನಾಸ್ಪದ ರೀತಿಯಲ್ಲಿ ಪ್ಯಾಸೆಂಜರ್ ಬ್ಯಾಗ್​ನಲ್ಲಿ iPhone ​ಗಳು ಮತ್ತು ಡ್ರೋನ್​ಗಳನ್ನು ತಂದಿದ್ದರು.

ಇಮಿಗ್ರೇಷನ್​ನಲ್ಲಿ‌ ಚೆಕಿಂಗ್ ವೇಳೆ ಅಧಿಕಾರಿಗಳಿಗೆ ಶೂ ಮತ್ತು ಬ್ಯಾಗ್ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಅವರ ಬ್ಯಾಗೇಜ್​ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ, ಶೂ ಮತ್ತು ಪ್ರಯಾಣಿಕರ ದೇಹದ ಮೇಲೆ ಸುಮಾರು 62 ಲಕ್ಷ ರೂ. ಮೌಲ್ಯದ 1.3 ಕೆ.ಜಿ 316, ಅಂದಾಜು 12 ಲಕ್ಷ ಮೌಲ್ಯದ ಡ್ರೋನ್ ಮತ್ತು iPhone ​ಗಳು ಪತ್ತೆಯಾಗಿದೆ. ಹೀಗಾಗಿ, ಇವೆಲ್ಲವುಗಳನ್ನು ತಂದಿದ್ದ ಇಬ್ಬರು ಪ್ರಯಾಣಿಕರನ್ನ ವಶಕ್ಕೆ ಪಡೆದು ಅಧಿಕಾರಿಗಳಿ ವಿಚಾರಣೆ ನಡೆಸುತ್ತಿದ್ದಾರೆ.

Sanjjanaa Galrani ‘ಗಂಡ ಹೆಂಡತಿ’ ಬೆಡಗಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು

Published On - 5:00 pm, Thu, 11 February 21

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us